Advertisement

ಪೊನ್ಮುಡಿ ಪ್ರವಾಸಿ ತಾಣ

10:54 PM Mar 11, 2020 | mahesh |

ಬೆಟ್ಟ ಗುಡ್ಡಗಳಿಂದ ಆವೃತವಾಗಿರುವ ಪೊನ್ಮುಡಿ ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿದೆ. ಪೊನ್ಮುಡಿ ಪ್ರವಾಸಿ ತಾಣವು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು, ಅರೇಬಿಯನ್‌ ಸಮುದ್ರಕ್ಕೆ ಸಮನಾಗಿದೆ. ತಿರುವನಂತಪುರಂನಿಂದ 55.2 ಕಿ.ಮೀ. ದೂರವಿರುವ ತಾಣವನ್ನು ಗೋಲ್ಡನ್‌ ಪೀಕ್‌ ಎಂದೂ ಸಹ ಕರೆಯುತ್ತಾರೆ. ಮಲಯಾಳಂ ಭಾಷೆಯಲ್ಲಿ ಪೊನ್‌ ಅಂದರೆ ಚಿನ್ನ ಎಂದರ್ಥ. ಶ್ರೀಮಂತ ಪ್ರಕೃತಿ ಸೌಂದರ್ಯ ಪ್ರವಾಸ ಪ್ರಿಯರನ್ನು ಕರೆತರುತ್ತದೆ.

Advertisement

ಈ ಪೊನ್ಮುಡಿ ಆಯುರ್ವೇದ ಚಿಕಿತ್ಸೆಗೆ ಹೆಸರುವಾಸಿಯಾದ ಪ್ರದೇಶವಾಗಿದೆ. ಸುಂದರ ಹವಾಮಾನ ಹಾಗೂ ಉತ್ತಮ ತಾಣಗಳನ್ನು ಒಳಗೊಂಡಿದೆ. ಮಾತ್ರವಲ್ಲದೇ ಬೇಸಗೆ ಕಾಲದ ಅವಧಿ ಯನ್ನು ಕಳೆಯಲು ಸೂಕ್ತ ಪ್ರದೇಶವಾಗಿದೆ. ಇದಕ್ಕೆ ಸಮೀಪದಲ್ಲಿರುವ ಪೆಪ್ಪರಾ ವನ್ಯಜೀವಿ ಧಾಮ, ಕಲ್ಲರ್‌ ನದಿಗೆ ಸಮೀಪ ಗೋಲ್ಡನ್‌ ವ್ಯಾಲಿ ಇದೆ.

ಕಲ್ಲರ್‌ನದಿ
ಬಹಳ ಪ್ರಸಿದ್ಧ ನದಿಯಾಗಿದೆ. ಕಲ್ಲು ಎಂದರೆ ಕಲ್ಲು ಮತ್ತು ಅರವು ಎಂದರೆ ನದಿ ಆದುದರಿಂದ ಇದನ್ನು ಕಲ್ಲರ್‌ ಎಂದು ಕರೆಯಲಾಗಿದೆ. ಮೀನು ಮಟ್ಟಿ ಪೊನ್ಮುಡಿಯಿಂದ 3 ಕಿ.ಮೀ. ದೂರದಲ್ಲಿ ಮೀನಮಟ್ಟಿ ಜಲಪಾತವಿದ್ದು, ಆಕರ್ಷಣಿಯವಾಗಿದೆ. ಕೊಯಿಕ್ಕಲ್‌ ಅರಮನೆ, ನೆಯ್ಯರ್‌ ವನ್ಯಜೀವಿ ಧಾಮ ವೀಕ್ಷಣೆ ಕೂಡ ಆಕರ್ಷಣೀಯವಾಗಿದೆ.

ಪದ್ಮನಾಭ ಸ್ವಾಮಿ ದೇವಾಲಯ
ಭಾರತದಲ್ಲಿರುವ 108 ಪವಿತ್ರ ವಿಷ್ಣು ದೇವಾಲಯಗಳಲ್ಲಿ ಇದೂ ಒಂದಾಗಿದ್ದು, ಕೇರಳ ಮತ್ತು ದ್ರಾವಿಡ ಶೈಲಿಯ ವಾಸ್ತು ಶಿಲ್ಪದ ಮಿಶ್ರಣವಾಗಿದೆ.

ಪರಶುರಾಮನ ದೇವಸ್ಥಾನ
ಕರಮಣ ನದಿ ದಂಡೆಯಲ್ಲಿರುವ ಈ ದೇವಸ್ಥಾನ 2 ಸಾವಿರ ವರ್ಷದ ಇತಿಹಾಸವನ್ನು ಹೊಂದಿದ್ದು ಪ್ರವಾಸಿಗರ ಆಕರ್ಷಣೀಯ ಕೆಂದ್ರವಾಗಿದೆ. ಹಾಗೆಯೇ ಇಲ್ಲಿ ನೆಯ್ಯರ್‌, ಶಂದುಮಿ, ಡೀರ್‌ ಪಾರ್ಕ್‌, ಮೀನ್‌ ಮುಟ್ಟಿ ಫಾಲ್ಸ್‌ ಪ್ರವಾಸಿಗರಿಗೆ ರೋಮಾಂಚನಕಾರಿ ಅನುಭವವನ್ನು ನಿಡುತ್ತದೆ. ಜತೆಗೆ ಹಲವು ಪ್ರಭೇದದ ಪಕ್ಷಿ ಸಂಕುಲಗಳನ್ನು ಕಾಣಬಹುದಾಗಿದೆ. ಚಿಟ್ಟೆಗಳ ವಿವಿಧ ಪ್ರಭೆದವನ್ನು ಸಹ ಇಲ್ಲಿ ಕಾಣಬಹುದಾಗಿದೆ.

Advertisement

ಪೊನ್ಮುಡಿಗೆ ಹತ್ತಿರವಿರುವ ಕೇರಳದ ಲೆಜಿಸ್‌ಲೆಟರ್‌ ಕಾಂಪ್ಲೆಕ್ಸ್‌, ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಮ್ಯೂಸಿಯಂ ಕಾಂಪ್ಲೆಕ್ಸ್‌, ಹಾಗೆ ಶಂಕುಮುಗಂ ಬೀಚ್‌, ಅಕುಲುಮ್‌ ಟೂರಿಸ್ಟ್‌ ವಿಲೆಜ್‌, ವೆಲಿ ಟೂರಿಸ್ಟ್‌ ವಿಲೇಜ್‌, ಕೊವಾಲೆ ಬೀಚ್‌, ಲೈಟ್‌ ಹೌಸ್‌, ವರ್ಕಲಂ ತೆನ್ಮಾಲ ವಕೋ ಟುರಿಸಂ ಮತ್ತಿತರ ಆಕರ್ಷಣಿಯ ಸ್ಥಳಗಳನ್ನು ನೋಡಬಹುದಾಗಿದೆ. ಬೆಳಗ್ಗೆ ಮತ್ತು ಸಂಜೆ ಟ್ರಕ್ಕಿಂಗ್‌ ನಡೆಯುವುದರಿಂದ, ಕಾಂಫೈರ್‌ ಕೂಟಗಳು , ಮಕ್ಕಳ ಆಟದ ಮೈದಾನ ಗಳಿರುವುದರಿಂದ ಇದು ಉತ್ತಮ ಆಕರ್ಷಣೀಯ ಕೇಂದ್ರವಾಗಿದ್ದು, ಒಮ್ಮೆಯಾದರೂ ಇಲ್ಲಿಯ ಸೌಂದರ್ಯವನ್ನು ಆಹ್ಲಾದಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next