Advertisement
ಶುಕ್ರವಾರ ಬೆಳಗ್ಗೆ 8 ಗಂಟೆ ವೇಳೆಗೆ ಪುರಿ ಕರಾವಳಿಗೆ ಫೋನಿ ಚಂಡಮಾರುತ ಅಪ್ಪಳಿಸಿತು. ಸಮುದ್ರದಲ್ಲಿ ಭಾರೀ ತೀವ್ರತೆಯಿಂದ ಕೂಡಿದ್ದ ಚಂಡಮಾರುತದ ವೇಗ ಅಲ್ಪ ಕಡಿಮೆಯಾದರೂ ಪುರಿ ಪ್ರವೇಶಿಸುವಾಗ ಗಂಟೆಗೆ ಸುಮಾರು 200 ಕಿ.ಮೀ. ವೇಗದಲ್ಲಿತ್ತು. ಒಟ್ಟು ಒಡಿಶಾದ 14 ಜಿಲ್ಲೆಗಳಲ್ಲಿ ಫೋನಿಯಿಂದ ಹಾನಿ ಯಾಗಿದೆ. ಸಾವಿರಾರು ಬೃಹತ್ ಗಾತ್ರದ ಮರಗಳು ನೆಲ ಕ್ಕುರುಳಿವೆ. ಅಲ್ಲಲ್ಲಿ ವಿದ್ಯುತ್ ಕಂಬಗಳು, ಮೊಬೈಲ್ ಟವರ್‌ಗಳು ನೆಲಕ್ಕೆ ಉರುಳಿದ್ದರೆ, ಹಲವಾರು ಮನೆಗಳು ಕುಸಿದಿವೆ.
Related Articles
Advertisement
ಆಂಧ್ರದಲ್ಲೂ ಅಬ್ಬರ: ಆಂಧ್ರ ಪ್ರದೇಶದಲ್ಲೂ ಫೋನಿಯ ಹಾನಿ ಹೆಚ್ಚಾಗಿದೆ. 2,000 ವಿದ್ಯುತ್ ಕಂಬಗಳು, 117 ಸಬ್ ಸ್ಟೇಷನ್‌ಗಳಿಗೆ ಹಾನಿಯಾಗಿದೆ. ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ. ಶ್ರೀಕಾಕುಲಂನಲ್ಲಿ ಸುಮಾರು 20 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಇಲ್ಲಿ 126 ನಿರಾಶ್ರಿತ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಒಟ್ಟು 733 ಗ್ರಾಮಗಳಿಗೆ ಹಾನಿಯಾಗಿದೆ. ಸದ್ಯ ಅಲ್ಲಿ ನೀತಿ ಸಂಹಿತೆ ಸಡಿಲ ಮಾಡಲಾಗಿದೆ. ಪೂರ್ವ ಗೋದಾವರಿ, ವಿಶಾಖಪಟ್ಟಣ, ವಿಜಯನಗರ ಮತ್ತು ಶ್ರೀಕಾಕುಲಂ ಜಿಲ್ಲೆಗಳಲ್ಲಿ ನೀತಿ ಸಂಹಿತೆ ಸಡಿಲ ಮಾಡಲಾಗಿದೆ.
5 ಲಕ್ಷ ಜನರ ಸ್ಥಳಾಂತರ: ಇಂದು ಸಂಜೆ ವೇಳೆಗೆ ಫೋನಿ ಚಂಡಮಾರುತ ಬಾಂಗ್ಲಾದೇಶ ಪ್ರವೇಶಿಸಲಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸುಮಾರು 5 ಲಕ್ಷ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರ ಮಾಡಲಾಗಿದೆ.45 ಸಾವಿರ ಜನರ ಸ್ಥಳಾಂತರ: ಅತ್ತ ಪಶ್ಚಿಮ ಬಂಗಾಲದಲ್ಲೂ ಸುಮಾರು 45 ಸಾವಿರ ಜನರನ್ನು ಸ್ಥಳಾಂತರರಿಸಲಾಗಿದೆ. ನಾಡಿಯಾ, ಮಿಡ್ನಾಪುರ, ಸೌತ್ 24 ಪರಗಣ, ಹೌರಾ, ನಾರ್ತ್ 24 ಪರಗಣಗಳಲ್ಲಿ ಸ್ಥಾಪಿಸಲಾಗಿರುವ ನಿರಾಶ್ರಿತ ಶಿಬಿರಗಳಲ್ಲಿ ಇವರಿಗೆ ಆಶ್ರಯ ಕಲ್ಪಿಸಲಾಗಿದೆ. ಶುಕ್ರವಾರವೇ ಬಂಗಾಲದಲ್ಲಿ ಭಾರೀ ಮಳೆಯಾಗಿದೆ. ಭುವನೇಶ್ವರ, ಕೋಲ್ಕತಾ ಏರ್‌ಪೋರ್ಟ್ ಬಂದ್
ಚಂಡಮಾರುತ ಹಿನ್ನೆಲೆಯಲ್ಲಿ ಗುರುವಾರ ಮಧ್ಯ ರಾತ್ರಿ ಯಿಂದಲೇ ಭುವನೇಶ್ವರ ಮತ್ತು ಕೋಲ್ಕತಾ ವಿಮಾನ ನಿಲ್ದಾಣಗಳನ್ನು ಸ್ಥಗಿತಗೊಳಿಸಲಾಗಿದೆ. ಭುವನೇಶ್ವರ ವಿಮಾನ ನಿಲ್ದಾಣಕ್ಕೆ ವ್ಯಾಪಕ ಹಾನಿ ಯಾ ಗಿದೆ. ಪರಿಸ್ಥಿತಿ ನೋಡಿ ಕೊಂಡು ವಿಮಾನಗಳ ಕಾರ್ಯಾಚರಣೆ ಆರಂಭಿ ಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. 1,000 ಕೋಟಿ ರೂ. ಬಿಡುಗಡೆ
ಫೋನಿ ಅಬ್ಬರದಿಂದ ಹಾನಿಯಾಗಿರುವ ಜನತೆಗೆ ಪ್ರಧಾನಿ ಮೋದಿ ಸಾಂತ್ವನ ಹೇಳಿ ದ್ದಾರೆ. ನಿಮ್ಮ ಜತೆಗೆ ನಾವಿದ್ದೇವೆ ಎಂದೂ ಭರವಸೆ ನೀಡಿದ್ದಾರೆ. ಚಂಡಮಾರುತ ಆಗಮಿಸುವ ಮೊದಲೇ ಪರಿಹಾರ ಕಾರ್ಯಾ ಚರಣೆ ಗಾಗಿ 1,000 ಕೋಟಿ ರೂ. ಬಿಡುಗಡೆ ಮಾಡ ಲಾಗಿದೆ ಎಂದೂ ತಿಳಿಸಿದ್ದಾರೆ. ಜತೆಗೆ ಒಡಿಶಾ, ಆಂಧ್ರ, ಪಶ್ಚಿಮ ಬಂಗಾಲ, ತಮಿಳುನಾಡು, ಪುದುಚೇರಿ ಸರಕಾರಗಳ ಜತೆ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ. 200 ಕಿ.ಮೀ. ಫೋನಿ ಮಾರುತದ ಅಬ್ಬರ
160ಮಂದಿಗೆ ಗಾಯ
11.54 ಲಕ್ಷ ಒಡಿಶಾದಲ್ಲೇ ಸ್ಥಳಾಂತರಗೊಂಡವರು
20,000 ಆಂಧ್ರದಲ್ಲಿನ ನಿರಾಶ್ರಿತರ ಶಿಬಿರದಲ್ಲಿರುವವರು
08 ಒಡಿಶಾದಲ್ಲಿ ಮೃತರ ಸಂಖ್ಯೆ
14 ಒಡಿಶಾದಲ್ಲಿನ ಜಿಲ್ಲೆಗಳಿಗೆ ಹಾನಿ
6,564 ಸ್ಥಾಪಿಸಲಾಗಿರುವ ನಿರಾಶ್ರಿತ ಶಿಬಿರಗಳು
45,000 ಪಶ್ಚಿಮ ಬಂಗಾಲದಲ್ಲಿ ಸ್ಥಳಾಂತರ