ಕುಷ್ಟಗಿ: ದಾಳಿಂಬೆ ಬರಗಾಲದ ಸಮೃದ್ಧ ಬೆಳೆ, ಆದರೆ ಸದ್ಯದ ಮಳೆ ವಾತವರಣದ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಕುಷ್ಟಗಿಯ ತಾಳದ್ ಸಹೋದರರು 10 ಎಕರೆಯಲ್ಲಿ ಉತ್ಕೃಷ್ಟ ಗುಣಮಟ್ಟದ ದಾಳಿಂಬೆ ಬೆಳೆದು ಸೈ ಎನಿಸಿಕೊಂಡಿದ್ದಾರೆ. ನಾಲ್ಕನೇ ವರ್ಷದ ಈ ದಾಳಿಂಬೆ ಬೆಳೆಯಿಂದ 85 ಟನ್ ಉತ್ಪನ್ನ 1 ಕೋಟಿ ರೂ. ಆದಾಯ ನಿರೀಕ್ಷೆಯಲ್ಲಿದ್ದಾರೆ.
ತಾಲೂಕಿನ ನಿಡಶೇಸಿ ಕೆರೆಗೆ ಹೊಂದಿಕೊಂಡಿರುವ ಜಮೀನಿಲ್ಲಿ ದಾಳಿಂಬೆ ವೈಜ್ಞಾನಿಕ ಪದ್ದತಿಯಲ್ಲಿ ತಾಂತ್ರಿಕತೆ ಬಳಸಿದ್ದರಿಂದ ನಿರೀಕ್ಷೆಗೂ ಮೀರಿ ಇಳುವರಿ ಬಂದಿದೆ. ಆದರೆ ಕಳೆದ ದಾಳಿಂಬೆ ಫಸಲು ಕಟಾವು ಹಂತದ ಪೂರ್ವದ ಜುಲೈ, ಆಗಸ್ಟ ತಿಂಗಳಿನಲ್ಲಿ ಆಗಾಗ್ಗೆ ಮಳೆ, ಮೋಡ ಕವಿದ ವಾತವರಣ ದಾಳಿಂಬೆಗೆ ತದ್ವಿರುದ್ದ ಪರಿಸ್ಥಿತಿಯ ಸವಾಲುಗಳನ್ನು ಯುವ ರೈತರಾದ ಮಲ್ಲಣ್ಣ ತಾಳದ್, ಪ್ರಭು ತಾಳದ್ ಸಮರ್ಥವಾಗಿ ನಿಭಾಯಿಸಿದ್ದಾರೆ ಅವರ ಶ್ರಮದ ಪ್ರತಿಫಲವಿದು. ತಾಳದ್ ಸಹೋದರರ ತೋಟದ ನಾಲ್ಕನೇ ಫಸಲು ಇದಾಗಿದೆ.
10 ಎಕರೆ, 100 ಟನ್ ಇಳುವರಿ 1 ಕೋಟಿ ಆದಾಯ
ಕಳೆದ 5 ವರ್ಷಗಳ ಹಿಂದೆ 10 ಎಕರೆಯಲ್ಲಿ 4ಸಾವಿರ ಕೇಸರ್ ತಳಿಯ ನಾಟಿ ಮಾಡಿದ್ದು, ಮೊದಲ ಬೆಳೆ 25 ಟನ್ ನಿಂದ ಆರಂಭವಾಗಿ ಇದೀಗ ನಾಲ್ಕನೇ ಬೆಳೆ ಮೊದಲ ಕಟಾವು 85 ಟನ್, 2ನೇ ಕಟಾವು 15ರಿಂದ 20 ಟನ್ ಸೇರಿದಂತೆ 100 ಟನ್ ಮೀರುವ ಸಾದ್ಯತೆ ಇದೆ.
ದಾಳಿಂಬೆ ಗಿಡಗಳಿಗೆ ದುಂಡಾಣು ಅಂಗಮಾರಿ ರೋಗ, ನಂಜು ರೋಗ, ಡೈಬ್ಯಾಕ, ಹಣ್ಣಿನ ರಸ ಹೀರುವ ಪತಂಗ ಬಾಧೆ ನಿಯಂತ್ರಿಸಿ, ಸಸ್ಯ ಸಂರಕ್ಷಣಾ ಕ್ರಮ, ಸಕಾಲಿಕ ಔಷಧ ಸಿಂಪರಣೆ ಕ್ರಮದಿಂದ ಉತ್ತಮ ಇಳುವರಿ ಸಾದ್ಯವಿದೆ ಎಂದು ತಾಳದ್ ಸಹೋದರರು ನಿರೂಪಿಸಿದ್ದಾರೆ. ಪ್ರತಿ ಗಿಡದಲ್ಲೂ ಸರಾಸರಿ 150ರಿಂದ 200 ಅಧಿಕ ಕಾಯಿಗಳು ಹಿಡಿದಿದ್ದು, ಹಣ್ಣಿನ ಸಮೃಧ್ಧ ಫಸಲಿನ ಭಾರಕ್ಕೆ ದಾಳಿಂಬೆ ಗಿಡಗಳು ಬಾಗಿವೆ.
ಕಣ್ಣು ಕುಕ್ಕುವ ಶೈನಿಂಗ್
ಅಲ್ಲದೇ ಹಣ್ಣಿನ ಗುಣಮಟ್ಟ ಕುಂದಿಲ್ಲ ಈಗಿನ ಮಳೆ ಕಾಟದ ಪರಿಸ್ಥಿತಿಯಲ್ಲಿ ಹಣ್ಣಿನ ಶೈನಿಂಗ್ ಕೆಟ್ಟಿಲ್ಲ. ಹಣ್ಣಿನ ಗಾತ್ರ 150 ರಿಂದ ಗ್ರಾಂ ನಿಂದ 700 ಗ್ರಾಂವರೆಗೂ ತೂಕವಿದೆ. ತಮಿಳುನಾಡು, ಕೇರಳ ಖರೀಧಿದಾರರು ಪ್ರತಿ ಕೆ.ಜಿಗೆ 134ರಂತೆ ತೋಟದಲ್ಲಿ ಖರೀಧಿಸಿದ್ದಾರೆ. ಈಗಿನ ಮಳೆ ಪರಿಸ್ಥಿತಿ ಲೆಕ್ಕಿಸದೇ ದಾಳಿಂಬೆ ಕಟಾವು ಭರದಿಂದ ಸಾಗಿದೆ ಬರೋಬ್ಬರಿ 100 ಟನ್ ಮೀರುವ ಸಾದ್ಯತೆಗಳಿವೆ.
ಮರಸಣ್ಣ ತಾಳದ್, ಕಲ್ಲೇಶ ತಾಳದ್ ಹಿರಿಯ ಸಹೋದರರ ಬೆಂಬಲ ಪ್ರಗತಿಪರ ದಾಳಿಂಬೆ ಬೆಳೆಗಾರ ಜಗನ್ನಾಥ ಗೋತಗಿ, ವಿಜ್ಞಾನಿ ಶ್ರೀನಿವಾಸ ಲಕ್ಷ್ಮೀ ಆಗ್ರೋದ ವಿಠ್ಠಲ್ ಶೆಟ್ಟರ್, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆ ಸಹಕಾರದಿಂದ ಇಷ್ಟು ಪ್ರಮಾಣದಲ್ಲಿ ಸಾದ್ಯ ಎನ್ನುತ್ತಾರೆ ಮಲ್ಲಣ್ಣ ತಾಳದ್, ಪ್ರಭು ತಾಳದ್.