Advertisement
ಜಲಮಾಲಿನ್ಯ ಎಂದಾಕ್ಷಣ ನಮ್ಮ ಕಣ್ಣೆದುರು ಬರುವುದು ಗಂಗಾ, ಯಮುನಾ ಇತ್ಯಾದಿ ನದಿಗಳು. ಅದರಲ್ಲೂ ಪವಿತ್ರ ಗಂಗಾ ನದಿಯು ಈ ವಿಚಾರದಲ್ಲಿ ಬಹಳ ಕುಖ್ಯಾತಿ ಪಡೆದುಬಿಟ್ಟಿದೆ. ಗಂಗಾ ನದಿಯನ್ನು ಮಾಲಿನ್ಯದಿಂದ ಮುಕ್ತ ಮಾಡಲು ದಶಕಗಳಿಂದ ಸರಕಾರಗಳು ಹಲವಾರು ಯೋಜನೆಗಳನ್ನು ರೂಪಿಸುತ್ತಲೇ ಬಂದ ವಾದರೂ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ ಯಾದರೂ ಫಲಿತಾಂಶ ಗಮನ ಸೆಳೆಯುವಂತೆ ಇರಲಿಲ್ಲ. ಈಗಲೂ ಗಂಗಾ ಸ್ವತ್ಛತೆಯ ಗುರಿಯನ್ನು ಮುಟ್ಟಲು ಸಾಧ್ಯವಾಗಿಲ್ಲವಾದರೂ, ಈ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ತನ್ನ ಪ್ರಯತ್ನಕ್ಕೆ ವೇಗ ನೀಡಿರುವುದು ಸ್ವಾಗತಾರ್ಹ. ನದಿಗಳ ಸ್ವತ್ಛತೆಗಾಗಿಯೇ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿದ ಮೋದಿ ಸರಕಾರ, ನಮಾಮಿ ಗಂಗೆ ಯೋಜನೆಯಡಿಯಲ್ಲಿ ನದಿಯ ನೈರ್ಮಲ್ಯದತ್ತ ಗಮನಹರಿಸಿತು. ಹಿಂದಿನ ಸರಕಾರಗಳ ಪ್ರಯತ್ನಕ್ಕೆ ಹೋಲಿಸಿದರೆ ಕಳೆದ ಆರು ವರ್ಷಗಳಲ್ಲಿ ಗಂಗಾ ನದಿ ಸ್ವತ್ಛತೆಯ ನಿಟ್ಟಿನಲ್ಲಿ ಸ್ವಾಗತಾರ್ಹ ಬದಲಾವಣೆಗಳು ಆಗುತ್ತಿವೆ. 2 ವರ್ಷಗಳ ಹಿಂದೆ ಪ್ರಯಾಗ್‌ರಾಜ್‌ನಲ್ಲಿ ಆಯೋಜಿತವಾಗಿದ್ದ ಕುಂಭದಲ್ಲಿ ನಗರಗಳ ಕಾರ್ಖಾನೆಗಳಿಂದ ರಾಸಾಯನಿಕವನ್ನು ನದಿಗೆ ಹರಿಯ ಬಿಡುವುದನ್ನು ಬಹುವಾಗಿ ತಡೆಯಲಾಯಿತು. ಪ್ರತ್ಯೇಕವಾಗಿ ಹಲವು ಜಲ ಸಂಸ್ಕರಣ ಘಟಕಗಳನ್ನು ತೆರೆಯಲಾಗಿತ್ತು. ಮುಂದಿನ ವರ್ಷ ಹರಿದ್ವಾರದಲ್ಲಿ ಕುಂಭ ಮೇಳವಿದೆ. ಕೋವಿಡ್ ಸಂಕಷ್ಟ ಮುಂದುವರಿದರೆ ಆಯೋಜನೆಗೆ ಹಲವು ನಿರ್ಬಂಧ ಎದುರಾಗ ಬಹುದೇನೋ. ಆದರೂ ಮುಂಜಾಗ್ರತೆಯ ದೃಷ್ಟಿಯಿಂ ದೀಗ ಕೇಂದ್ರವು ಆರು ಚರಂಡಿ ನೀರು ಸಂಸ್ಕರಣ ಘಟಕಗಳನ್ನು ಉತ್ತರಾ ಖಂಡದಲ್ಲಿ ಉದ್ಘಾಟಿಸಿದೆ. ಇದಕ್ಕಾಗಿ 500 ಕೋಟಿ ರೂ. ಖರ್ಚು ಮಾಡಲಾಗಿದೆ.
Advertisement
ಮಾಲಿನ್ಯ ಮುಕ್ತವಾಗಲಿ ನದಿಗಳು; ಎಲ್ಲರದ್ದೂ ಇದೆ ಜವಾಬ್ದಾರಿ
11:48 PM Oct 02, 2020 | mahesh |
Advertisement
Udayavani is now on Telegram. Click here to join our channel and stay updated with the latest news.