Advertisement

ಮಲೀನ ಮನಸ್ಸಿನಿಂದ ಮಾಲಿನ್ಯ

11:10 AM Jul 08, 2018 | |

ವಾಡಿ: ಜೀವರಾಶಿಗಳ ಆರೋಗ್ಯದ ಕಾಳಜಿಯಿಲ್ಲದ ಮಲೀನ ಮನಸ್ಸುಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ರಾವೂರಿನ ಶ್ರೀಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ನುಡಿದರು.

Advertisement

ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಸ್ಥಾಪಿಸಲಾದ ಮಕ್ಕಳ ಪರಿಸರ ಕಾಳಜಿ ಸಂಘ (ಇಕೋ ಕ್ಲಬ್‌)ವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮರಗಳನ್ನು ನೆಟ್ಟು ಪೋಷಿಸುವ ಕಾಳಜಿ ವ್ಯಕ್ತಪಡಿಸುವ ಬದಲು ಅವುಗಳನ್ನು ಕತ್ತರಿಸಿ ಬದುಕುವ ಪದ್ಧತಿಗೆ ಮಾನವ ಒಗ್ಗೂಡಿರುವುದು ವಿಷಾದನೀಯ. ಸಸ್ಯ ರಾಶಿ ಸರ್ವನಾಶ ಆಗುತ್ತಿರುವುದರಿಂದ ಭೂಮಿ ತೇವಾಂಶ ಕಳೆದುಕೊಳ್ಳುತ್ತಿದೆ. ಅಂತರಗಂಗೆ ಪಾತಾಳಕ್ಕೆ ಕುಸಿಯುತ್ತಿದ್ದಾಳೆ.

ಪರಿಣಾಮ ನೀರು, ಗಾಳಿ, ಭೂಮಿ, ಆಹಾರ ಎಲ್ಲವೂ ಮಲೀನವಾಗುತ್ತಿದೆ. ಇದರಿಂದ ವಿಷಕಾರಕ
ವಾತಾವರಣದಲ್ಲಿ ನಾವು ಬದುಕುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರತಿಯೊಬ್ಬರೂ ಸಸಿ ನೆಡುವ ಮೂಲಕವೇ ತಮ್ಮ ಜನ್ಮದಿನ ಆಚರಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇಕೋ ಕ್ಲಬ್‌ ಸಂಯೋಜಕಿ ಸುಗುಣಾ ಕೋಳಕೂರ ಮಾತನಾಡಿ, ಮಕ್ಕಳ ಇಕೋ ಕ್ಲಬ್‌ ಹುಟ್ಟಿದಾಗಿನಿಂದ ಪರಿಸರ ಸಂರಕ್ಷಣೆ ಕಾರ್ಯ ಮಾಡುತ್ತಿದೆ. ಔಷಧಿಯ ಗುಣಗಳಿರುವ ಸಸ್ಯಗಳನ್ನು ನೆಡಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಕಸದಿಂದ ರಸ ಎನ್ನುವ ವಿನೂತನ ಪರಿಕಲ್ಪನೆಯಡಿ ಅನುಪಯುಕ್ತ ವಸ್ತುಗಳ ತ್ಯಾಜ್ಯ ಮರುಬಳಕೆಗೆ
ತರಲಾಗುತ್ತಿದೆ. ರಾಸಾಯಿನಿಕ ಮಿಶ್ರಿತ ಬಣ್ಣ ಲೇಪಿತ ಗಣಪತಿ ಮೂರ್ತಿಗಳ ಬದಲು ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸುವಂತೆ ಅರಿವು ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.

Advertisement

ಮುಖ್ಯಶಿಕ್ಷಕ ವಿದ್ಯಾಧರ ಖಂಡಾಳ, ಶಿಕ್ಷಕರಾದ ಸಿದ್ದಲಿಂಗ ಬಾಳಿ, ಈಶ್ವರಗೌಡ ಪಾಟೀಲ, ಭುವನೇಶ್ವರಿ ಎಂ, ಮಂಜುಳಾ ಪಾಟೀಲ, ರಾಧಾ ರಾಠೊಡ, ಶಿವುಕುಮಾರ ಸರಡಗಿ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಜ್ಯೋತಿ ಸ್ವಾಗತಿಸಿದರು. ದೀಪಿಕಾ ನಿರೂಪಿಸಿದರು, ಶಿರೀನಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next