Advertisement

Delhi: ದಿಲ್ಲಿಯಲ್ಲಿ ಮಿತಿ ಮೀರಿದ ಮಾಲಿನ್ಯ

10:53 PM Nov 02, 2023 | Team Udayavani |

ನವದೆಹಲಿ: ದೆಹಲಿ ರಾಜ್ಯದ ಹಲವು ಭಾಗಗಳಲ್ಲಿ ಪರಿಸರ ಮಾಲಿನ್ಯದ ಪ್ರಮಾಣ ಗುರುವಾರ ಮಿತಿ ಮೀರಿತ್ತು. ರಾಷ್ಟ್ರ ರಾಜಧಾನಿ ನವದೆಹಲಿಯ ಆನಂದ ವಿಹಾರದಲ್ಲಿ ಮಾಲಿನ್ಯ ಪ್ರಮಾಣ 999, ನೋಯ್ಡಾದಲ್ಲಿ 450 ಆಗಿತ್ತು. ಇನ್ನು ಅದೇ ಪ್ರದೇಶದ ಸೆಕ್ಟರ್‌ 62ರಲ್ಲಿ 469 ಆಗಿತ್ತು.

Advertisement

ವಾಯುಮಾಲಿನ್ಯದ ಬಗ್ಗೆ ಅಧ್ಯಯನ ನಡೆಸುವ ಎಕ್ಯೂಐಸಿಎನ್‌ ಡಾಟ್‌ ಆರ್ಗ್‌ ಪ್ರಕಾರ ರಾಷ್ಟ್ರ ರಾಜಧಾನಿಯ ಸುತ್ತಮುತ್ತ ಪ್ರದೇಶಗಳಲ್ಲಿ ಮಾಲಿನ್ಯ ಪ್ರಮಾಣ 500 ಸೂಚ್ಯಂಕದ ಆಸುಪಾಸಿನಲ್ಲಿಯೇ ಇದೆ. ಹರ್ಯಾಣದಲ್ಲಿ ಬೆಳೆಯ ಕಳೆಗಳನ್ನು ಸುಡುತ್ತಿರುವ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಉಂಟಾಗಿದೆ

 

Advertisement

Udayavani is now on Telegram. Click here to join our channel and stay updated with the latest news.

Next