Advertisement

ಕಾವೇರಿಯಿಂದ ಮಲಿನ ನೀರು: ತಜ್ಞರ ಸಮಿತಿ ರಚನೆಗೆ ಸುಪ್ರೀಂ ಸೂಚನೆ​​​​​​

03:45 AM Feb 21, 2017 | |

ಉದಯವಾಣಿ ದೆಹಲಿ ಪ್ರತಿನಿಧಿ: ಕರ್ನಾಟಕವು ಕಾವೇರಿ ನೀರನ್ನು ಮಲಿನಗೊಳಿಸುತ್ತಿದೆ ಎಂಬ ತಮಿಳುನಾಡಿನ ಆರೋಪದ ಬಗ್ಗೆ ತಜ್ಞರ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್‌ ಉಭಯ ರಾಜ್ಯಗಳಿಗೆ ಸೂಚನೆ ನೀಡಿದೆ.

Advertisement

ಕಾವೇರಿ ಕೊಳ್ಳದ ಪ್ರದೇಶಗಳಿಂದ ಕರ್ನಾಟಕ ಮಲಿನಗೊಳಿಸಿದ ನೀರು ತನ್ನ ಸೀಮೆಯೊಳಗೆ ಪ್ರವೇಶಿಸುತ್ತಿದೆ. ಇದರಿಂದ ಅಂತರ್ಜಲ ಸೇರಿದಂತೆ ಇನ್ನಿತರ ಜಲಮೂಲಗಳು ಮಲಿನಗೊಳ್ಳುತ್ತಿದೆ ಎಂದು ಆಪಾದಿಸಿ ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಎ.ಬೊಬೆx ಮತ್ತು ನ್ಯಾ| ನಾಗೇಶ್ವರ ರಾವ್‌ ಅವರನ್ನು ಒಳಗೊಂಡ ಪೀಠ, ಈ ಬಗ್ಗೆ ಎರಡೂ ರಾಜ್ಯಗಳು ಸೇರಿ ಎರಡು ವಾರದೊಳಗೆ ತಜ್ಞರ ತಂಡವೊಂದನ್ನು ರಚಿಸಬೇಕು ಮತ್ತು ಸಮಸ್ಯೆಯ ಅಧ್ಯಯನಕ್ಕೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಉಭಯ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ನ್ಯಾಯಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಎರಡು ವಾರ ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next