Advertisement

ಶೇ.67.11 ಮತದಾನ; ದೇಶದ ಇತಿಹಾಸದಲ್ಲೇ ಮೊದಲು

02:24 AM May 21, 2019 | Team Udayavani |

ಪ್ರಸಕ್ತ ಲೋಕಸಭಾ ಚುನಾವಣೆಯ 7 ಹಂತಗಳಲ್ಲಿ ಒಟ್ಟಾರೆ ಶೇ.67.11 ಮತ ದಾನ ನಡೆದಿದ್ದು, ಇಷ್ಟೊಂದು ಮತದಾನ ದಾಖಲಾಗಿರುವುದು ದೇಶದ ಇತಿಹಾಸದಲ್ಲೇ ಮೊದಲು ಎಂದು ಚುನಾವಣ ಆಯೋಗ ಸೋಮವಾರ ಮಾಹಿತಿ ನೀಡಿದೆ. ಒಟ್ಟು 91 ಕೋಟಿ ಮಂದಿ ಈ ಚುನಾವಣೆಯಲ್ಲಿ ಹಕ್ಕು ಚಲಾಯಿಸಿದ್ದಾರೆ. 2014ರ ಚುನಾವಣೆಯಲ್ಲಿ ಶೇ.66.40ರಷ್ಟು ಮತದಾನ ದಾಖಲಾಗಿತ್ತು. 543 ಲೋಕಸಭಾ ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ವಿಪರೀತವಾದ ಹಿನ್ನೆಲೆಯಲ್ಲಿ ಅಲ್ಲಿ ಮತದಾನ ರದ್ದಾಗಿದೆ. 2009ರ ಚುನಾವಣೆಯಲ್ಲಿ ಶೇ.56.9 ರಷ್ಟು ಮತದಾನವಾಗಿತ್ತು ಎಂದೂ ಆಯೋಗ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next