ಬೆಂಗಳೂರು: ಮಂಗಳೂರು ಸಹಿತ ರಾಜ್ಯಕ್ಕೆ ಈಗಾಗಲೇ ಮೂರು ಬಾರಿ ಭೇಟಿ ನೀಡಿ ಐದು ಕಡೆ ಪ್ರಚಾರ ಭಾಷಣ ನಡೆಸಿ ಬಿಜೆಪಿ ಪಾಳಯದಲ್ಲಿ ಉತ್ಸಾಹ ಹೆಚ್ಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಹಂತದ ಮತದಾನ ನಡೆಯುವ ಹೊತ್ತಿನಲ್ಲೇ ಗುರುವಾರ ಬಾಗಲಕೋಟೆ ಹಾಗೂ ಚಿಕ್ಕೋಡಿ ಕ್ಷೇತ್ರಗಳಲ್ಲಿ ಚುನಾವಣ ಪ್ರಚಾರ ನಡೆಸಲಿದ್ದಾರೆ.
ರಾಜ್ಯದಲ್ಲಿ ಚುನಾವಣ ಘೋಷಣೆಗೂ ಮುನ್ನ ಪ್ರಧಾನಿ ಮೋದಿಯವರು ಹುಬ್ಬಳ್ಳಿ- ಧಾರವಾಡ ಮತ್ತು ಕಲಬುರಗಿ ಯಲ್ಲಿ ಪ್ರತ್ಯೇಕವಾಗಿ ಪ್ರಚಾರ ಸಭೆ ನಡೆಸಿ ಲೋಕಸಭಾ ಚುನಾವಣೆಯ ರಣಕಹಳೆ ಮೊಳಗಿಸಿದ್ದರು.
ಚುನಾವಣೆ ಘೋಷಣೆಯಾದ ಬಳಿಕ ಎ.10ರಂದು ಮೊದಲ ರ್ಯಾಲಿ ಚಿತ್ರದುರ್ಗ ಕ್ಷೇತ್ರದಲ್ಲಿ ನಡೆಸಿದ ಮೋದಿ ಚುನಾವಣ ಪ್ರಚಾರಕ್ಕೆ ಚಾಲನೆ ನೀಡಿದ್ದರು. ಬಳಿಕ ಮೈಸೂರಿನಲ್ಲಿ ಅಬ್ಬರದ ಪ್ರಚಾರ ನಡೆಸಿ ದ್ದರು. ಎರಡನೇ ಬಾರಿ ರಾಜ್ಯಕ್ಕೆ ಭೇಟಿ ನೀಡಿದ ಮೋದಿಯವರು ಗಂಗಾವತಿಯಲ್ಲಿ ಪ್ರಚಾರ ನಡೆಸಿ ಮೈತ್ರಿ ಸರಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದರು.
ರಾಜ್ಯಕ್ಕೆ 3ನೇ ಬಾರಿ ಭೇಟಿ ನೀಡಿದ ಅವರು, ಮಂಗಳೂರು ರ್ಯಾಲಿಯಲ್ಲಿ ಭಾಗ ವಹಿಸಿದ್ದರು. ಇಲ್ಲಿನ ಅಭೂತಪೂರ್ವ ಸ್ಪಂದನೆಗೆ ಆ ಬಳಿಕ ಕೃತಜ್ಞತೆಯನ್ನೂ ಸಲ್ಲಿಸಿದ್ದರು. ಅದೇ ದಿನ ಬೆಂಗಳೂರಿನಲ್ಲೂ ಭಾಷಣ ಮಾಡಿದ್ದರು. ಗುರುವಾರ ಬಾಗಲಕೋಟೆ, ಚಿಕ್ಕೋಡಿ ಕ್ಷೇತ್ರಗಳಲ್ಲಿನ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ದಿಗ್ವಿಜಯ್ V/S ಪ್ರಜ್ಞಾ ಸಿಂಗ್
ಹೊಸದಿಲ್ಲಿ: ಮಾಲೇ ಗಾಂವ್ ಸ್ಫೋಟ ಪ್ರಕರಣದಲ್ಲಿ ಜಾಮೀನು ಪಡೆದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬುಧ ವಾರ ಬಿಜೆಪಿಗೆ ಸೇರಿ ಮಧ್ಯಪ್ರದೇಶದ ಮಾಜಿ ಮುಖ್ಯ ಮಂತ್ರಿ, ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ವಿರುದ್ಧವೇ ಕಣಕ್ಕಿಳಿದಿದ್ದಾರೆ. ಬಿಜೆಪಿಗೆ ಸೇರಿದ ಕೂಡಲೇ ಭೋಪಾಲ್‌ನಿಂದ ಟಿಕೆಟ್ ನೀಡಲಾಗಿದೆ.
ಯುಪಿಎ ಅಧಿಕಾರದಲ್ಲಿದ್ದಾಗ ಹಿಂದೂ ಕಾರ್ಯಕರ್ತರ ವಿರುದ್ಧ ಉಗ್ರ ವಾದದ ಸುಳ್ಳು ಆರೋಪ ಹೊರಿಸಿ ಹಿಂದೂ ಭಯೋ ತ್ಪಾದನೆ ಎಂಬ ಪದ ಬಳಸಲಾಗಿತ್ತು ಎಂದು ಆರೋಪಿಸಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಯಾದಿಯಾಗಿ ಬಿಜೆಪಿ ನಾಯಕರು ವಾಗ್ಧಾಳಿ ನಡೆಸು ತ್ತಿರುವಾಗಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.