Advertisement
ರವಿವಾರ ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಈ ವೈಡ್ ವಿವಾದ ನಡೆದಿದೆ. ಅದು ಮುಂಬೈ ಇನ್ನಿಂಗ್ಸ್ ನ 20ನೇ ಓವರ್. ಪೊಲಾರ್ಡ್ ಸ್ಟ್ರೈಕ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಚೆನ್ನೈ ನ ಡ್ವೆನ್ ಬ್ರಾವೋ ಬೌಲಿಂಗ್ ಮಾಡುತ್ತಿದ್ದರು. ಓವರ್ ನ ಎರಡನೇ ಎಸೆತ ಎಸೆದ ಬ್ರಾವೋ ವೈಡ್ ಲೈನ್ ಗಿಂತ ಅಗಲವಾಗಿ ಬಾಲ್ ಎಸೆದರೂ ಸ್ಟ್ರೈಕ್ ಅಂಪಾಯರ್ ನಿತಿನ್ ಮೆನನ್ ವೈಡ್ ಕೊಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಪೊಲಾರ್ಡ್ ಮುಂದಿನ ಎಸೆತವನ್ನು ಎದುರಿಸಲು ವೈಡ್ ಲೈನ್ ಬಳಿಯೇ ಬಂದು ನಿಂತರು !
ಮುಂಬೈ ಬ್ಯಾಟ್ಸಮನ್ ಕೈರನ್ ಪೊಲಾರ್ಡ್ ಈ ವರ್ತನೆಯಿಂದಾಗಿ ಆನ್ ಫೀಲ್ಡ್ ಅಂಪಾಯರ್ ಗಳಾದ ನಿತಿನ್ ಮೆನನ್ ಮತ್ತು ಇಯಾನ್ ಗೂಲ್ಡ್ ಪೊಲಾರ್ಡ್ ಬಳಿ ಹೋಗಿ ಕ್ರೀಸ್ ನಿಂದಲೇ ಬ್ಯಾಟ್ ಮಾಡಬೇಕೆಂದು ಮನವೊಲಿಸಿದ ಪ್ರಸಂಗ ನಡೆಯಿತು. ಪಂದ್ಯ ಶುಲ್ಕದ ಶೇ. 25 ದಂಡ: ಕೈರನ್ ಪೊಲಾರ್ಡ್ ಈ ಅಶಿಸ್ತಿನ ವರ್ತನೆಗೆ ದಂಡ ವಿಧಿಸಿಲಾಗಿದ್ದು, ಪಂದ್ಯ ಶುಲ್ಕದ ಶೇಕಡಾ 25ರಷ್ಟು ಹಣವನ್ನು ಪೊಲಾರ್ಡ್ ದಂಡವಾಗಿ ತೆರಬೇಕಾಗಿದೆ.