Advertisement

ಜ್ಯೋತಿಷಿಗಳ ಮತ ಭವಿಷ್ಯಕ್ಕೆ ಬ್ರೇಕ್‌

06:25 AM Nov 09, 2017 | |

ಹೊಸದಿಲ್ಲಿ: ಮತಗಟ್ಟೆ ಸಮೀಕ್ಷೆಯ ವರದಿಗಳನ್ನು ಪ್ರಸಾರ ಮಾಡುವುದಕ್ಕೆ ನಿರ್ಬಂಧವಿರುವಾಗ ಚುನಾವಣೆಯ ಫ‌ಲಿತಾಂಶದ ಕುರಿತು ಜ್ಯೋತಿಷಿಗಳು,ಗಿಣಿಶಾಸ್ತ್ರ ಹೇಳುವವರು ಹಾಗೂ ಮಾಧ್ಯಮಗಳು ಕೂಡ ಭವಿಷ್ಯ ಹೇಳುವಂತಿಲ್ಲ ಎಂದು ಚುನಾವಣಾ ಆಯೋಗ ಖಡಕ್ಕಾಗಿ ಹೇಳಿದೆ.

Advertisement

ಹಿಮಾಚಲಪ್ರದೇಶದಲ್ಲಿ ಗುರುವಾರ ಹಾಗೂ ಗುಜರಾತ್‌ನಲ್ಲಿ ಡಿಸೆಂಬರ್‌ಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಆಯೋಗ ಈ ವಿಷಯವನ್ನು ಪ್ರಕಟಿಸಿದೆ. ನಿರ್ಬಂಧವಿರುವ ಅವಧಿಯಲ್ಲಿ ಇಂಥ ಕಾರ್ಯಕ್ರಮಗಳ ಪ್ರಸಾರವನ್ನು ಮಾಡದೇ ಇರುವ ಮೂಲಕ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಮುಕ್ತ ಹಾಗೂ ಪಾರದರ್ಶಕ ಚುನಾವಣೆಗೆ ಸಹಕರಿಸಬೇಕು ಎಂದಿದೆ ಆಯೋಗ.

ಸಿಂಗ್‌ ಸುಳ್ಳು ಹೇಳುತ್ತಿದ್ದಾರೆ: “ಮೋದಿ ಅವರು ಗುಜರಾತ್‌ ಸಿಎಂ ಆಗಿದ್ದಾಗ ನರ್ಮದಾ ಯೋಜನೆ ವಿಚಾರವಾಗಿ ಚರ್ಚಿಸಲು ನನ್ನನ್ನು ಭೇಟಿಯಾಗಿಯೇ ಇಲ್ಲ’ ಎಂಬ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಗುಜರಾತ್‌ನ ಹಾಲಿ ಸಿಎಂ ವಿಜಯ್‌ ರೂಪಾನಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರು 2011 ಮತ್ತು 2013ರಲ್ಲಿ ಈ ವಿಚಾರವಾಗಿ ಚರ್ಚಿಸಲು ಸಿಂಗ್‌ರನ್ನು ಭೇಟಿಯಾಗಿದ್ದರು. ಆದರೆ, ಸಿಂಗ್‌ ಈಗ ಸುಳ್ಳು ಹೇಳುತ್ತಿದ್ದಾರೆ ಎಂದು ರೂಪಾನಿ ಆರೋಪಿಸಿದ್ದಾರೆ.

ಹಣ ಬಿಡುಗಡೆಗೆ ತಕರಾರು ಇಲ್ಲ
ಚುನಾವಣೆ ನಡೆಯುತ್ತಿರುವ ರಾಜ್ಯಗಳಾದ ಗುಜರಾತ್‌ ಮತ್ತು ಹಿಮಾಚಲಪ್ರದೇಶಕ್ಕೆ ಕೇಂದ್ರದ ಮನ್‌ರೇಗ(ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ) ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ ಮಾಡುವುದಕ್ಕೆ ಚುನಾವಣಾ ಆಯೋಗ ಕೇಂದ್ರಕ್ಕೆ ಸಮ್ಮತಿ ನೀಡಿದೆ.  ಈ ಎರಡೂ ರಾಜ್ಯಗಳಿಗೆ ಹಣ ವಿತರಿಸಲು ಯಾವುದೇ ತಕರಾರು ಇಲ್ಲ. ಆದರೆ ಇದರ ಬಗ್ಗೆ ಪ್ರಚಾರ ಗಿಟ್ಟಿಸಿಕೊಳ್ಳುವ ಹಾಗಿಲ್ಲ ಎಂಬ ಷರತ್ತನ್ನೂ ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next