Advertisement
ಅಂತೆಯೇ, ಅದನ್ನು ಪಡೆಯುವ ರಾಜಕೀಯ ಪಕ್ಷಗಳು ಮಾನ್ಯ ಬ್ಯಾಂಕ್ ಖಾತೆಯ ಮೂಲಕವೇ ದೇಣಿಗೆ ಸ್ವೀಕರಿಸಬೇಕು ಎಂದು ಲೋಕಸಭೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಾಹಿತಿ ನೀಡಿದ್ದಾರೆ. ರಾಜಕೀಯ ಪಕ್ಷಗಳಿಗೆ ನೀಡುವ ನಗದು ದೇಣಿಗೆಗೆ ಪರ್ಯಾಯವಾಗಿ ಈ ಎಲೆಕ್ಟ್ರೋರಲ್ ಬಾಂಡ್‌ಗಳನ್ನು ಪರಿಚಯಿಸಲಾಗಿದೆ. ಇವು ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳಲ್ಲಿ ತಲಾ 10 ದಿನಗಳ ಕಾಲ ಎಸ್‌ಬಿಐನ ನಿರ್ದಿಷ್ಟ ಶಾಖೆಗಳಲ್ಲಿ ಲಭ್ಯವಿರುತ್ತದೆ. ಈ ಬಾಂಡ್‌ಗಳು 15 ದಿನಗಳ ಕಾಲ ಮಾನ್ಯವಾಗಿರುತ್ತದೆ. ಇದರಲ್ಲಿ ದೇಣಿಗೆ ನೀಡಿದವನ ಹೆಸರು ಇರುವುದಿಲ್ಲ ಎಂದೂ ಜೇಟ್ಲಿ ತಿಳಿಸಿದ್ದಾರೆ. ರಾಜಕೀಯ ದೇಣಿಗೆಯನ್ನು ಪಾರದರ್ಶಕವಾಗಿಸುವ ಉದ್ದೇಶದಿಂದ ಜೇಟ್ಲಿ ಅವರು ಕಳೆದ ಫೆ.1ರ ಬಜೆಟ್‌ನಲ್ಲೇ ಚುನಾವಣಾ ಬಾಂಡ್‌ಗಳ ಕುರಿತು ಘೋಷಿಸಿದ್ದರು. ಈಗ ಸರ್ಕಾರ ಈ ಯೋಜನೆಯನ್ನು ಅಂತಿಮಗೊಳಿಸಿದೆ.
ಎಲ್ಲ ಉತ್ಪನ್ನಗಳಿಗೂ ಒಂದೇ ತೆರಿಗೆ ಸ್ಲಾಬ್ ವಿಧಿಸಲು ಸಾಧ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿ ಸಿದ್ದಾರೆ. ಪಾಕ್ ವಿರುದ್ಧ ಘೋಷಣೆ: ಕೇಂದ್ರ ಸರ್ಕಾರದ ಪಾಕ್ ನೀತಿ ಬಗ್ಗೆ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಪ್ರಶ್ನೆಯೆತ್ತಿದ್ದು, ದೇಶದ ಸೇನಾ ಶಿಬಿರಗಳನ್ನು ರಕ್ಷಿಸುವಲ್ಲಿ
ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿವೆ. ಜತೆಗೆ, ಪುಲ್ವಾಮಾದಲ್ಲಿ ಐವರು ಯೋಧರು ಹುತಾತ್ಮರಾದರೂ ಪ್ರಧಾನಿ ಮೋದಿ ಏಕೆ ಮೌನ ವಹಿಸಿದ್ದಾರೆ ಎಂದೂ ಕಾಂಗ್ರೆಸ್ ಕೇಳಿದೆ. ಈ ನಡುವೆ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಕೆಲವು ಬಿಜೆಪಿ ಸದಸ್ಯರು ಪಾಕ್ ವಿರುದ್ಧ ಘೋಷಣೆ ಕೂಗಿದ್ದಾರೆ. ಇಂದು ತಲಾಖ್ ವಿಧೇಯಕ ಮಂಡನೆ: ತ್ರಿವಳಿ ತಲಾಖ್ ವಿಧೇಯಕ ರಾಜ್ಯಸಭೆಯಲ್ಲಿ ಬುಧವಾರ ಮಂಡನೆಯಾಗಲಿದೆ. ಈ ವಿಧೇಯಕಕ್ಕೆ ಸಂಬಂಧಿಸಿದ ಕಾಂಗ್ರೆಸ್ ಗೊಂದಲ ಮುಂದುವರಿದಿದ್ದು, ಮಂಗಳವಾರ ಬೆಳಗ್ಗೆ ಇತರೆ ಪ್ರತಿಪಕ್ಷಗಳ ಜತೆ ಸಭೆ ನಡೆಸಿ,
ಯಾವ ನಿಲುವು ತೆಗೆದುಕೊಳ್ಳುವುದು ಎಂಬ ಬಗ್ಗೆ ಚರ್ಚೆ ನಡೆಸಿದೆ. ಇದೇ ವೇಳೆ, ವಿಧೇಯಕಕ್ಕೆ ತಿದ್ದುಪಡಿ ತರುವಂತೆ ಕಾಂಗ್ರೆಸ್ ಕೇಳಬಾರದು ಎಂದು ಸರ್ಕಾರ ಹೇಳಿದೆ.
Related Articles
Advertisement
ಅಂತರ್‌ಧರ್ಮೀಯ ವಿವಾಹಕ್ಕಿಲ್ಲ ಪ್ರೋತ್ಸಾಹಧನಅಂತರ್ಧರ್ಮೀಯ ವಿವಾಹಕ್ಕೆ ಪ್ರೋತ್ಸಾಹ ಧನ ನೀಡುವ ಪ್ರಸ್ತಾಪ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಡಾ. ಅಂಬೇಡ್ಕರ್ ಸಾಮಾಜಿಕ ಸಮನ್ವಯ ಯೋಜನೆಯಡಿ ಅಂತರ್‌ಜಾತೀಯ ವಿವಾಹಕ್ಕೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಅದನ್ನು ಅಂತರ್‌ಧರ್ಮೀಯ ವಿವಾಹಕ್ಕೂ ವಿಸ್ತರಿಸುವ ಯಾವುದೇ ಯೋಚನೆ ಸರ್ಕಾರದ ಮುಂದಿಲ್ಲ ಎಂದು ಸಚಿವ ವಿಜಯ್ ಸಂಪ್ಲಾ ತಿಳಿಸಿದ್ದಾರೆ.