Advertisement
ಕೆಲವರಿಗೆ ಕಾಂಗ್ರೆಸ್ ಬ್ಲಾಕ್‌ಮೇಲ್ ಮಾಡುತ್ತಿದೆಬೆಂಗಳೂರು: ಕಾಂಗ್ರೆಸ್ ಪಕ್ಷ ಕೆಲವರಿಗೆ ಬ್ಲಾಕ್‌ಮೇಲ್ ಮಾಡುತ್ತಿದೆ. ಈ ಪ್ರಯತ್ನದಲ್ಲಿ ಕಾಂಗ್ರೆಸ್ ವಿಫಲವಾಗಲಿದೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಭವಿಷ್ಯ ನುಡಿದರು.
ನಟ ಸುದೀಪ್ ಹುಟ್ಟುಹಬ್ಬ ಆಚರಣೆೆ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಚಿವ ಬಿ.ಸಿ.ಪಾಟೀಲ್, ಮಾಜಿ ಶಾಸಕ ರಾಜೂಗೌಡ ಭೇಟಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಬಂದವರಿದ್ದಾರೆ. ಆದರೀಗ ಕಾಂಗ್ರೆಸ್ ಸರ್ಕಾರ ಇರುವುದರಿಂದ ಯಾವ ಕಾರಣಕ್ಕೆ ಯಾರ್ಯಾರು, ಯಾರ್ಯಾರನ್ನು ಭೇಟಿ ಮಾಡುತ್ತಾರೆ ಎಂಬುದನ್ನು ರಾಜಕೀಯ ಜೀವನದಲ್ಲಿ ಪ್ರಶ್ನಿಸಲಾಗುವುದಿಲ್ಲ ಎಂದರು.
Related Articles
ಮಾಜಿ ಶಾಸಕ ರಾಜೂಗೌಡ ಮಾತನಾಡಿ, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗಿನಿಂದಲೇ ಬಿಜೆಪಿಯ ಅಧಃಪತನ ಶುರುವಾಯಿತು. ಅಂದಿನಿಂದ ಮೇಲೆ ಎದ್ದೇ ಇಲ್ಲ. ಈಗಲೂ ಅವರು ಸೋತಿರುವ ನಮಗೆಲ್ಲಾ ವಾರಕ್ಕೊಮ್ಮೆ ಕರೆ ಮಾಡಿ ವಿಚಾರಿಸಿಕೊಳ್ಳುತ್ತಾರೆ. ನಮ್ಮ ಸಮಸ್ಯೆ ಆಲಿಸುತ್ತಾರೆ. ಅದು ಅವರ ನಾಯಕತ್ವ ಗುಣ. ಆದರೆ, ಪಕ್ಷ ಅವರನ್ನು ಕಡೆಗಣಿಸಿದೆ. ಅವರ ನೇತೃತ್ವ, ನಾಯಕತ್ವದಲ್ಲೇ ಮುಂದಿನ ಚುನಾವಣೆಗಳನ್ನು ಎದುರಿಸುತ್ತೇವೆ ಎಂದರು.
Advertisement
ಕ್ಯಾನ್ಸರ್ ಗಡ್ಡೆ ಏನೂ ಆಗಿಲ್ಲ. ಯಾವ ಆಪರೇಶನ್ ಪ್ರಶ್ನೆಯೂ ಇಲ್ಲ. ಆತ್ಮೀಯ ಸೋದರ, ಹಿರಿಯಣ್ಣ ಸುದೀಪ್ ಹುಟ್ಟು ಹಬ್ಬ ಇತ್ತು. ಚುನಾವಣೆ ನಂತರ ಎಷ್ಟೋ ದಿನಗಳ ಬಳಿಕ ಬಿ.ಸಿ.ಪಾಟೀಲರು ಸಿಕ್ಕಿದ್ದರು. ಚರ್ಚಿಸುತ್ತಾ ಕುಳಿತಿದ್ದೆವು. ಅದೇ ಸಮಯಕ್ಕೆ ಡಿ.ಕೆ. ಶಿವಕುಮಾರ್ ಸಹ ಬಂದರು. ಎಲ್ಲರೂ ಆತ್ಮೀಯರೆ, ವೈರಿಗಳಲ್ಲ.ರಾಜೂಗೌಡ, ಮಾಜಿ ಶಾಸಕ ನಟ ಸುದೀಪ್ ಹುಟ್ಟು ಹಬ್ಬ ಇತ್ತು. ನಾನೂ ಹೋಗಿದ್ದೆ. ಅವರೂ ಬಂದಿದ್ದರು. ಡಿ.ಕೆ.ಶಿವಕುಮಾರ್ ಬಂದರೆಂದು ಬೇರೆ ಕಡೆಗೆ ಎದ್ದು ಹೋಗಲು ಸಾಧ್ಯವೇ? ಹಳೆಯ ಸ್ನೇಹಿತರು. ಪರಿಚಯ ಇತ್ತು ಮಾತನಾಡಿದೆವು. ನನಗೆ ಯಾವ ಆಫರೂ ಇಲ್ಲ. ಹೋಗೋದೂ ಇಲ್ಲ. ಭೇಟಿಗೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅದೊಂದು ಆಕಸ್ಮಿಕ ಭೇಟಿ.
ಬಿ.ಸಿ. ಪಾಟೀಲ್, ಮಾಜಿ ಸಚಿವ ಬಿಜೆಪಿಗರು ಕಾಂಗ್ರೆಸ್‌ಗೆ ಬರೋದು ಸ್ವಾಭಾವಿಕ ಪ್ರಕ್ರಿಯೆ: ಎಂಬಿಪಿ
ಬೆಂಗಳೂರು: ಬಿಜೆಪಿ ಮುಳುಗುತ್ತಿರುವ ಹಡಗು ಅಲ್ಲ; ಮುಳುಗಿದ ಹಡಗು. ಸ್ವಾಭಾವಿಕವಾಗಿ, ಅದರಲ್ಲಿದ್ದ ಎಲ್ಲ ಸಮುದಾಯಗಳ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಕಡೆಗೆ ಮುಖಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿ ಈಗ ಮುಳುಗಿದ ಹಡಗಾಗಿದೆ. ಹಾಗಾಗಿ, ಅದರಲ್ಲಿದ್ದ ಲಿಂಗಾಯತರು, ಒಕ್ಕಲಿಗರು, ದಲಿತರು ಸೇರಿ ಎಲ್ಲ ವರ್ಗಗಳ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಇದೊಂದು ಸ್ವಾಭಾವಿಕ ಪ್ರಕ್ರಿಯೆ’ ಎಂದು ಹೇಳಿದರು. ಯಾರ್ಯಾರು ಸಂಪರ್ಕದಲ್ಲಿದ್ದಾರೆ ಎಂದು ಕೇಳಿದಾಗ, “ಬಹಳಷ್ಟು ಜನ ಪಕ್ಷದ ನಾಯಕರುಗಳ ಜತೆ ಸಂಪರ್ಕದಲ್ಲಿದ್ದಾರೆ. ಯಾರ್ಯಾರು ಅಂತ ಈ ಹಂತದಲ್ಲಿ ಹೇಳಲಾಗದು. ಅದು ಸರಿ ಕೂಡ ಅಲ್ಲ’ ಎಂದು ಸ್ಪಷ್ಟಪಡಿಸಿದರು. ಮಾಜಿ ಸಿಎಂ ಯಡಿಯೂರಪ್ಪ ಹಿಂದೆಸರಿದ ನಂತರ ಲಿಂಗಾಯತ ಸಮುದಾಯ ಕಾಂಗ್ರೆಸ್‌ನಲ್ಲಿ ನೆಲೆ ಕಂಡುಕೊಳ್ಳುತ್ತಿದೆಯೇ ಎಂದು ಕೇಳಿದಾಗ, ಇದು ಈಚೆಗೆ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿಯೇ ಸಾಬೀತಾಗಿದೆ. ಕಾಂಗ್ರೆಸ್ 36 ಲಿಂಗಾಯತ ಶಾಸಕರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಲ್ಲಿ 67 ಜನ ಲಿಂಗಾಯತರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ಅದರಲ್ಲಿ 13-15 ಜನ ಮಾತ್ರ ಆಯ್ಕೆಯಾಗಿದ್ದಾರೆ. ಈ ಬಲವಾದ “ಶಿಫ್ಟ್’ ಸ್ಪಷ್ಟವಾಗಿ ಸೂಚಿಸುತ್ತದೆ. ಮುಂಬೈ ಕರ್ನಾಟಕ ಬಹುತೇಕ ಕಾಂಗ್ರೆಸ್‌ಮಯ ಆಗಿದೆ ಎಂದರು. ಬ್ಲಾಕ್‌ಮೇಲ್‌ಗೆ ಒಳಗಾಗುವಂತಹ ಕೆಲಸ ಯಾಕೆ ಮಾಡಿದೆ?
ಬ್ಲಾಕ್‌ಮೇಲ್ ಒಳಗಾಗುವಂತಹ ಕೆಲಸವನ್ನು ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಸೇರಿ ಬಿಜೆಪಿ ಯಾಕೆ ಮಾಡಿದೆ ಎಂದು ಸಚಿವ ಎಂ.ಬಿ. ಪಾಟೀಲ ತೀಕ್ಷ್ಣವಾಗಿ ಕೇಳಿದರು. ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, “ಬ್ಲಾಕ್‌ವೆುಲ್ ಮಾಡುತ್ತಿದ್ದಾರೆ ಎಂದಾದರೆ, ಅಂತಹ ಕೆಲಸ ಮಾಡಿದ್ದಾರೆ ಎಂದಾಯ್ತು ಅಲ್ಲವೇ? ಏನಾದರೂ ಲೂಟಿ ಹೊಡೆದಿದ್ದಾರಾ? ಅವರ (ಅಶ್ವತ್ಥ ನಾರಾಯಣಗೆ) ಹೇಳಿಕೆಗಳಿಂದಲೇ ಬ್ಲಾಕ್‌ವೆುಲ್‌ಗೆ ಒಳಗಾಗುವಂತಹ ಕೆಲಸ ಮಾಡಿದ್ದು ಸಾಬೀತಾಗುತ್ತಿದೆ ಎಂದು ಖಾರವಾಗಿ ಹೇಳಿದರು.