ಸಿಲಿಗುರಿ : ಪಶ್ಚಿಮ ಬಂಗಾಳದಲ್ಲಿ ರಾಜಕೀಯದ ಹಿಂಸಾಚಾರಗಳು ಮೇ. 2 ರಂದು ಕೊನೆಗೊಳ್ಳಲಿದೆ ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಚುನಾವಣೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೈಲಾಶ್, ಇದು ಟಿ ಎಮ್ ಸಿ ಪಕ್ಷದ ಕೊನೆಯ ರಾಜಕೀಯ ಹಿಂಸಾಚಾರದ ಅಸ್ತ್ರ, ಇದು ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಕೊನೆಯ ರಾಜಕೀಯ ಹಿಂಸಾಚಾರವಾಗಲಿಕ್ಕಿದೆ. ಮೇ. 2 ರಿಂದ ಪಶ್ಚಿಮ ಬಂಗಾಳ ಹಿಂಸಾಚಾರದಿಂದ ಮುಕ್ತವಾಗಲಿದೆ ಎಂದು ಅವರು ಹೇಳಿದ್ದಾರೆ.
ಓದಿ :ಅತ್ಯಾಚಾರ ಎಸಗಿದ ಆರೋಪಿಗಳ ಜೊತೆ ಸಂತ್ರಸ್ತೆಯ ಮೆರವಣಿಗೆ..!
ರಾಜ್ಯದ ಮೊದಲ ಹಂತದ ವಿಧಾನ ಸಭಾ ಚುನಾವಣೆ ಮುಗಿದ ಬಳಿಕ, 30 ಕ್ಷೇತ್ರಗಳಲ್ಲಿ 26 ಕ್ಷೇತ್ರಗಳನ್ನು ನಾವು ಗೆಲ್ಲಲಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಕೈಲಾಶ್, ಪಕ್ಷ 30ಕ್ಕೆ 30 ಕ್ಷೇತ್ರಗಳನ್ನು ಗೆದ್ದರೂ ಕೂಡ ಅವರು ಆಶ್ಚರ್ಯ ಪಡುವುದಿಲ್ಲ. ಜನರು ತಮ್ಮ ಅನುಮೋದನೆಯನ್ನು ಬಿಜೆಪಿಗೆ ನೀಡುತ್ತಾರೆ. ಗೂಂಡಾಗಳು ಇಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು, ಟಿ ಎಮ್ ಸಿ ಯ ಸಂಸದೆ ನುಸ್ರತ್ ಜಹಾನ್ ಮತ ಪ್ರಚಾರ ಸಭೆಯಲ್ಲಿ ಬಿಜೆಪಿ ವಿರುದ್ಧ ಆರೋಪ ಮಾಡಿರುವ ವಿಚಾರಕ್ಕೆ ಕೈಲಾಶ್ ಪ್ರತಿಕ್ರಿಯಿಸಲು ಮುಂದಾಗದೇ, ಅದು ಪಕ್ಷದ ಆಂತರಿಕ ವಿಚಾರ ಎಂದು ಹೇಳಿದ್ದಾರೆ.
ಓದಿ : ಸಂಸದರು ಕೇವಲ ದಿಲ್ಲಿಯಲ್ಲಿ ಇರುವುದಲ್ಲ, ಹಳ್ಳಿಗೂ ಬರಬೇಕು: ಸತೀಶ್ ಜಾರಕಿಹೊಳಿ