Advertisement

ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಿಲ್ಲ 

11:57 AM Sep 13, 2017 | Team Udayavani |

ತಿ.ನರಸೀಪುರ: ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಿಲ್ಲ, ಸಮಗ್ರ ಅಭಿವೃದ್ಧಿ ಚಿಂತನೆಯಿಂದಲೇ ರಾಜಕೀಯ ಅಧಿಕಾರವನ್ನು ಬಳಸಿಕೊಂಡು ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ, ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿದ್ದೇನೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

Advertisement

ತಾಲೂಕಿನ ಮೂಗೂರು ಗ್ರಾಮದಲ್ಲಿ 1 ಕೋಟಿ ರೂಗಳ ವೆಚ್ಚದ  ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ, 2 ಕೋಟಿ ರೂಗಳ ವೆಚ್ಚದ ಕೆರೆ ಸೌಂದರೀಕರಣ, 3.50 ಕೋಟಿ ರೂಗಳ ವೆಚ್ಚದ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ ಹಾಗೂ 40 ಲಕ್ಷ ರೂಗಳ ವೆಚ್ಚದ ಸರ್ಕಾರಿ ಅತಿಥಿ ಗೃಹ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿದ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸರ್ಕಾರದ ಕಾರ್ಯಕ್ರಮಗಳು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಅನುಷ್ಠಾನಗೊಳ್ಳಬೇಕಾಗಿದ್ದರಿಂದ ಅಭಿವೃದ್ಧಿಯಲ್ಲಿ ರಾಜಕಾರಣ ಬೇಕಿಲ್ಲ ಎಂದರು. ರಾಜಕೀಯವಾಗಿ ಕೈ ಹಿಡಿದಂತಹ ಮೂಗೂರು ಗ್ರಾಮದಲ್ಲಿ ಬಾಕಿ ಉಳಿದಿರುವ ರಸ್ತೆಗಳನ್ನು ಸಿಮೆಂಟ್‌ ರಸ್ತೆಗಳಾಗಿ ಪರಿವರ್ತಿಸಲು 3.50 ಕೋಟಿ, ವಾಲ್ಮೀಕಿ ಭವನ ನಿರ್ಮಾಣಕ್ಕೆ 1 ಕೋಟಿ, ಕುಡಿಯುವ ನೀರಿನ ಕೊರತೆಯನ್ನು ತಪ್ಪಿಸಲು ಕೆರೆಯನ್ನು ಸೌಂದರೀಕರಣಗೊಳಿಸಲು 2 ಕೋಟಿ, ಪಿಯು ಕಾಲೇಜು ಕಟ್ಟಡಕ್ಕೆ 1.50 ಕೋಟಿ,

ಶ್ರೀ ದೇಶಿಶ್ವರ ದೇವಾಲಯ ಅಭಿವೃದ್ಧಿಗೆ 1 ಕೋಟಿ, ಪ್ರವಾಸೋದ್ಯಮ ಇಲಾಖೆಯಿಂದ ಅತಿಥಿ ಗೃಹ ನಿರ್ಮಾಣ ಮಾಡಲು 40 ಲಕ್ಷ, ಕನಕ ಸಮುದಾಯ ಭವನಕ್ಕೆ 25 ಲಕ್ಷ ಮಂಜೂರು ಮಾಡಲಾಗಿದೆ. ಕ್ಷೇತ್ರದ ಸಾಮಾನ್ಯ ಜನರ ರಸ್ತೆಗಳನ್ನು ಅಭಿವೃದ್ಧಿಪಡಿಸಲು 30 ಕೋಟಿ ರೂಗಳ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ವೀರಶೈವ ಸಮುದಾಯ ಭವನಕ್ಕೂ 50 ಲಕ್ಷ ರೂಗಳ ಪ್ರಸ್ತಾವನೆ ಮುಖಂಡರಿಂದ ಬಂದಿದ್ದು, ಅಷ್ಟೂ ಅನುದಾನವನ್ನು ನೀಡಲಾಗುವುದು ಎಂದರು. 

ಲೋಕೋಪಯೋಗಿ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಡಿ 15 ಕೋಟಿ ರೂಗಳ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಬಡವರ ಜೀವನ ಮಟ್ಟದ ಸುಧಾರಣೆಗೆ ತಲಕಾಡು ಏತ ನೀರಾವರಿ ಯೋಜನೆಗಳಿಗೆ 70 ಕೋಟಿ ರೂ ನೀಡಲಾಗಿದೆ. 800 ವರ್ಷಗಳಷ್ಟು ಇತಿಹಾಸವಿರುವ ಮಾಧವಮಂತ್ರಿ ಅಣೆಕಟ್ಟೆ ಪುನರ್‌ ನಿರ್ಮಾಣದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

Advertisement

ಬನ್ನೂರು ಕಾವೇರಿ ನದಿಗೆ ನೂತನ ಸೇತುವೆ ನಿರ್ಮಾಣ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಹೆಚ್ಚುವರಿಯಾಗಿ 2 ಹೆರಿಗೆ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುವುದು. ಕೆರೆಕಟ್ಟೆಗಳನ್ನು ಜೀರ್ಣೋದ್ಧಾರ ಮತ್ತು ನಾಲೆಗಳ ಆಧುನೀಕರಣದ ಮೂಲಕ ಶಾಶ್ವತ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಎಂ.ಡಿ.ಬಸವರಾಜು, ಅಭಿವೃದ್ಧಿಯಲ್ಲಿ ಯಾರನ್ನೂ ನಿರ್ಲಕ್ಷಿಸಿಲ್ಲ ಎಂದು ತಿಳಿಸಿದರು.

ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಂಬೇಡ್ಕರ್‌ ವಸತಿ ಯೋಜನೆ ಸಮಿತಿ ಅಧ್ಯಕ್ಷ ಸುನೀಲ್‌ ಬೋಸ್‌, ಕೆಪಿಸಿಸಿ ಪ.ಪಂಗಡಗಳ ಉಪಾಧ್ಯಕ್ಷ ಹೊನ್ನನಾಯಕ, ಜಿಪಂ ಸದಸ್ಯ ಟಿ.ಎಚ್‌.ಮಂಜುನಾಥನ್‌, ತಾಪಂ ಅಧ್ಯಕ್ಷ ಸಿ.ಚಾಮೇಗೌಡ, ಗ್ರಾಪಂ ಅಧ್ಯಕ್ಷ ಶೋಭಾ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಎಂ.ಎಸ್‌.ಶಿವಮೂರ್ತಿ, ತಾಪಂ ಸದಸ್ಯರಾದ ಆರ್‌.ಚಲುವರಾಜು, ರಾಮಲಿಂಗಯ್ಯ, ಕೆ.ಎಸ್‌.ಗಣೇಶ, ಎಚ್‌.ಎನ್‌.ಉಮೇಶ, ಪಾರುಪತ್ತೇಗಾರ್‌ ಎಂ.ಬಿ.ಸಾಗರ್‌, ಪಿಎಸಿಸಿಎಸ್‌ ಉಪಾಧ್ಯಕ್ಷ ಎಂ.ಶಿವಮೂರ್ತಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ.ಬಸವಣ್ಣ ಮತ್ತಿತರರಿದ್ದರು.

4 ತಿಂಗಳು ನಾಲೆಗಳಿಗೆ ನೀರು
ಕಬಿನಿ ನಾಲಾ ಅಚ್ಚಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಮುಂಗಾರು ಕೃಷಿ ಚಟುವಟಿಕೆಗೆ ನಾಲ್ಕು ತಿಂಗಳ ಕಾಲ 4 ಬಾರಿ 10 ರಿಂದ 12 ದಿನ ನೀರನ್ನು ನೀಡಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಥಮ ಬಾರಿಗೆ ಶಾಸಕನಾದಾಗ ಕಳೆದ 1987ರಲ್ಲಿ ಕಬಿನಿ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ 2 ಬೆಳೆಗಳಿಗೆ 2 ಬಾರಿ ನೀರನ್ನು ನೀಡಬೇಕೆಂದು ಹೋರಾಟವನ್ನು ಮಾಡಲಾಗಿತ್ತು. ನಮ್ಮ ಸರ್ಕಾರದಲ್ಲಿ ಗಂಗಾ ಕಲ್ಯಾಣ ಯೋಜನೆಗೆ 8 ಕೋಟಿ ರೂಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲು ಪ್ರಸ್ತಾಪಿಸಲಾಗಿದೆ ಎಂದು ಸಚಿವ ಮಹದೇವಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next