Advertisement
ಮತದಾರರಲ್ಲಷ್ಟೇ ಅಲ್ಲ, ಪಕ್ಷಗಳಲ್ಲೂ, ಅಭ್ಯರ್ಥಿಗಳಲ್ಲೂ, ಟಿಕೆಟ್ ಆಕಾಂಕ್ಷಿಗಳಲ್ಲೂ ಹಲವು ಗೊಂದಲ ಏರ್ಪಟ್ಟಿದೆ. ಕಳೆದ ಚುನಾವಣೆಯಲ್ಲಿ ಅನಿರೀಕ್ಷಿತ ಘಟನೆ ಸೋಲಿಗೆ ಕಾರಣ ಎಂದು ಕಾಂಗ್ರೆಸ್ ಪಕ್ಷ ನಂಬಿದೆ. ಪರೇಶ್ ಮೇಸ್ತ ಪ್ರಕರಣದಿಂದ ತಮ್ಮ ನಿರೀಕ್ಷೆ ಬುಡಮೇಲಾಯಿತು ಎಂದು ಮಾಜಿ ಕಾಂಗ್ರೆಸ್ ಶಾಸಕರು, ಸೋತವರು ಈ ಬಾರಿ ಭಾರೀ ಆತ್ಮವಿಶ್ವಾಸದಿಂದ ಚುನಾವಣೆಗೆ ನಿಲ್ಲಲು ಸಿದ್ಧತೆ ನಡೆಸಿದ್ದಾರೆ.
Related Articles
Advertisement
ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿಯವರದ್ದು ಕೆಲಸ ದಷ್ಟೇ ಪ್ರಚಾರವೂ ಜಾಸ್ತಿ, ವಿವಾದಗಳು ಜಾಸ್ತಿ ಎಂಬ ಆಪಾದನೆ ಕಡಿಮೆ ಏನಿಲ್ಲ. ಇದು ಆ ಕ್ಷೇತ್ರದ ಮತದಾರರಿಗೆ ಬೇಸರ ತಂದಿದೆ. ಕಾಂಗ್ರೆಸ್‌ನ ಟಿಕೆಟ್ ನಿರೀಕ್ಷೆಯಲ್ಲಿರುವ ಸತೀಶ ಸೈಲ್ ಸಹ ಮಂಕಾಳ ವೈದ್ಯರಂತೆ ಹಠವಾದಿ. ಭಾರಿ ಪ್ರಚಾರ ಆರಂಭಿಸಿದ್ದಾರೆ. ಮೂಲ ಬಿಜೆಪಿಗರಿಗೆ ಟಿಕೆಟ್ ಬೇಕು ಎಂಬುದು ಕಾರವಾರದವರ ಧ್ವನಿ. ಇನ್ನು ಯಲ್ಲಾಪುರ ಮತ ಕ್ಷೇತ್ರದ ಶಿವರಾಮ ಹೆಬ್ಟಾರ್ ಕಾಂಗ್ರೆಸ್‌ನಿಂದ ಹೋದವರು. ಪಕ್ಷ ಬದಲಾದರೂ ಕಾಂಗ್ರೆಸ್‌ನ ಶೈಲಿಯಲ್ಲೇ ಬಿಜೆಪಿಯ ಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಇದರಿಂದ ಮೂಲ ಬಿಜೆಪಿಗರಿಗೆ ತಮ್ಮ ಶ್ರಮ ಬಂಡವಾಳಶಾಹಿ ಪಾಲಾಯಿತು ಎಂಬ ಚಿಂತೆ. ಹೆಬ್ಟಾರ್ ಏನೇ ಬರೆಸಿಕೊಳ್ಳಲಿ ಅವರ ಸಾರ್ವಜನಿಕ ಜೀವನ ತೆರೆದ ಪುಸ್ತಕದಂತೆ ಎಂಬುದು ಎಲ್ಲರಿಗೂ ಗೊತ್ತು.
ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ಅವರಿಗೆ ಹಳಿಯಾಳದಲ್ಲಿ ಗೆಲ್ಲುವ ಸೂತ್ರ ಗೊತ್ತು. ವಿರೋಧಿಗಳು ಏನೇ ಹೇಳಲಿ ಅವರ ಲೆಕ್ಕಾಚಾರ ಬುಡಮೇಲು ಮಾಡುವ ದೇಶಪಾಂಡೆಯವರನ್ನು ಸೋಲಿಸಲು ಬಿಜೆಪಿಗೆ ಸಮರ್ಥ ಅಭ್ಯರ್ಥಿಗಳು ಸಿಗುತ್ತಿಲ್ಲ. ತಮ್ಮಿಂದ ರಾಜಕೀಯ ಲಾಭ ಪಡೆದವರೇ ತಿರುಗಿ ಬಿದ್ದರೂ ಹೆದರದ ದೇಶಪಾಂಡೆ ಇನ್ನೆಷ್ಟು ವರ್ಷ ಅಧಿಕಾರ ಬಯಸಿದ್ದಾರೆ ಎಂಬ ಚಿಂತೆ ಮತದಾರರಿಗೆ ಇದೆ. ಆದರೆ ಮತ ಅವರಿಗೆ ಕೊಡುತ್ತಾರೆ. ಶಿರಸಿ ಮತ ಕ್ಷೇತ್ರದಲ್ಲಿ ದೇಶಪಾಂಡೆಯವರ ಇನ್ನೊಂದು ರೂಪ ಕಾಗೇರಿಯವರಿದ್ದಾರೆ. ಇವರು ಅಧಿಕಾರದಲ್ಲಿ ಇದ್ದಾಗ ಮಾಡಿದ ಕೆಲಸ ಸಾಲದು ಎಂಬುದು ಮತದಾರರ ಅಭಿಪ್ರಾಯ. ಆದರೆ ಇವರಿಗೆ ಮತ ಕೊಡುವುದು ಅನಿವಾರ್ಯ ಎಂಬ ಭಾವನೆಯೂ ಇದೆ. ಸ್ವಪಕ್ಷದ ವಿರೋಧಿ ಧ್ವನಿಯನ್ನು ಮೆತ್ತಗಾಗಿಸುವ ಕಲೆ ಇಬ್ಬರಿಗೂ ಸಿದ್ಧಿಸಿದೆ. ಗವರ್ನರ್ ಆಗುವ ವಯಸ್ಸಿನ ಈ ಇಬ್ಬರಿಗೆ ಇನ್ನೆಷ್ಟು ದಿನ ಅಧಿಕಾರದ ಆಸೆ ಎಂದು ಮತದಾರರು ಪಿಸುಗುಟ್ಟುತ್ತಾರೆ. ಪ್ರತಿಪಕ್ಷಕ್ಕೂ ಇವರನ್ನು ಎದುರಿಸುವ ಸಮರ್ಥ ಅಭ್ಯರ್ಥಿ ಸಿಗದಿರುವುದು ಇವರ ಪುಣ್ಯ.
ಒಟ್ಟಾರೆ ಜಿಲ್ಲೆಯ ಜನರ ಮನಸ್ಸಿನಲ್ಲಿ, ಪಕ್ಷದಲ್ಲೂ ಗೊಂದಲವಿದೆ. ಜೆಡಿಎಸ್, ಆಮ್ ಆದ್ಮಿ ಸ್ವರ ಎತ್ತಿಲ್ಲ. ಹೊಸ ಮುಖ ಕಾಣುತ್ತಿಲ್ಲ. ಈ ಬಾರಿಯೂ ಯಾವುದೋ ಒಂದು ಘಟನೆ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಬಲ್ಲುದೇ ಎಂಬುದನ್ನು ಕಾದು ನೋಡಬೇಕಿದೆ.
ಜೀಯು