ಬೆಂಗಳೂರು: ನಾನು ರಾಜರಾಜೇಶ್ವರಿ ನಗರ ಕ್ಷೇತ್ರದ ಹೆಣ್ಣು ಮಗಳು. ಈ ಕ್ಷೇತ್ರದ ಎಲ್ಲ ಸಮಸ್ಯೆ ಬಗ್ಗೆ ನನ್ಗೆ ಗೊತ್ತಿದೆ. ನಾನು ಬೇರೆ ಕ್ಷೇತ್ರದಿಂದ ಬಂದಿಲ್ಲ. ನನಗೆ ರಾಜಕೀಯ ಹೊಸದೇನಲ್ಲ. ನಮ್ಮ ತಂದೆ ರಾಜಕೀಯ ಮಾಡಿರುವುದನ್ನು ನೋಡಿಕೊಂಡು ಬಂದಿದ್ದೇನೆ ಎಂದು ಆರ್.ಆರ್ ನಗರ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೇಳಿದರು.
ಸಿದ್ದರಾಮಯ್ಯ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದಕ್ಕೆ ಸಿದ್ದರಾಮಯ್ಯ ಸರ್ ಗೆ ಅಭಿನಂದನೆ ಸಲ್ಲಿಸಲು ಬಂದಿದ್ದೆ ಎಂದರು.
ವಿದ್ಯಾವಂತ ಮಹಿಳೆಯರು ರಾಜಕೀಯಕ್ಕೆ ಬರಬೇಕು. ಮಹಿಳೆಯರ ಕುಂದುಕೊರತೆಗಳಿಗೆ ಒಂದು ವೇದಿಕೆ ಬೇಕು. ಮಾನಸಿಕವಾಗಿ, ದೈಹಿಕವಾಗಿ ಅತ್ಯಾಚಾರ ಆಗುತ್ತಿದೆ. ಇದರ ವಿರುದ್ಧ ಧ್ವನಿಯಾಗಿ ನಾನು ಕೆಲಸ ಮಾಡುತ್ತೇನೆ ಎಂದರು.
ಇದನ್ನೂ ಓದಿ:ದಿಲ್ಲಿಯಲ್ಲಿ ನನ್ನ ಹೆಸರು ಹೇಳಿ ಮಾರ್ಕೆಟ್ ಮಾಡ್ಕೊಳ್ತಿದಾರೆ: ಸಿಟಿ ರವಿಗೆ ಕುಟುಕಿದ ಡಿಕೆಶಿ
ನಾನು ರಾಜಕೀಯಕ್ಕೆ ಬರಬೇಕೆಂದು ಅಂದುಕೊಂಡಿರಲಿಲ್ಲ. ಈಗ ಅವಕಾಶ ಸಿಕ್ಕಿದೆ. ಅದನ್ನ ಬಳಸಿಕೊಂಡಿದ್ದೇನೆ. ನನ್ನ ಪ್ರತಿಸ್ಪರ್ಧಿ ಬಗ್ಗೆ ನಾನು ಯೋಚನೆ ಮಾಡುವುದಿಲ್ಲ. ನಾನು ನನ್ನ ಕೆಲಸ ಮಾಡುತ್ತೇನೆ ಎಂದು ಕುಸುಮಾ ಹೇಳಿದರು.
ತಮ್ಮ ವಿರುದ್ಧ ಮಾತನಾಡಿದ ಗೌರಮ್ಮ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಗೌರಮ್ಮ ಅವರು ತುಂಬಾ ದೊಡ್ಡವರು. ಅವರು ಏನೇ ಮಾತನಾಡಿದರೂ ಅದು ನನಗೆ ಆರ್ಶಿವಾದ ಇದ್ದಂತೆ. ಡಿ ಕೆ ರವಿ ಹೆಸರಿಗೆ ಘನತಗೆ ಧಕ್ಕೆ ತರುವಂತ ಕೆಲಸ ನಾನು ಹಿಂದೆಯು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದರು.