Advertisement

ರಾಜಕಾರಣ ಬೇಸರವಾಗಿದೆ, ಮುಂದೆ ನಿಲ್ಲಬೇಕಾ ಬೇಡವೋ ಎಂಬ ಗೊಂದಲ: ಜಿಟಿಡಿ

02:19 PM Jun 10, 2022 | Team Udayavani |

ಬೆಂಗಳೂರು: ಇವತ್ತಿನ ರಾಜಕಾರಣ ನೋಡಿ ಬೇಸರವಾಗಿದೆ, ರಾಜ್ಯದ ಜನರು ಕೂಡ ಬೇಸತ್ತಿದ್ದಾರೆ. ಮುಂದೆ ನಿಲ್ಲಬೇಕಾ ಬೇಡವೋ ಎಂಬ ಗೊಂದಲವಿದೆ. ಜನರು ಏನು‌ ಹೇಳುತ್ತಾರೆ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.

Advertisement

ಶುಕ್ರವಾರ ರಾಜ್ಯಸಭಾ ಚುನಾವಣಾ ಮತದಾನದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಂಧಾನ ಸಭೆ ನಡೆದಿಲ್ಲ, ನಾನು ಯಾವತ್ತೂ ದಾಟಿಲ್ಲ. ನಾಯಕರ ನಡುವೆ ಭಿನ್ನಾಬಿಪ್ರಾಯ ಇರಬಹುದು. ನನ್ನನ್ನು ಜೆಡಿಎಸ್ ಮಯದಾರರೇ ಗೆಲ್ಲಿಸಿರುವುದು. ನಾನು‌ ಜೆಡಿಎಸ್ ಗೆ ಮತಹಾಕದೇ ಹೋದರೆ ತಪ್ಪು. ಮತದಾರರು ತಪ್ಪು ತಿಳಿದುಕೊಳ್ಳುತ್ತಾರೆ.ಹಾಗಾಗಿ ನಾನು ಜೆಡಿಎಸ್ ಗೆ ಮತ‌ಹಾಕಿದ್ದೇನೆ ಎಂದರು.

ಇದೆ ವೇಳೆ ನಾನು ಯಾವ ಪಕ್ಷಕ್ಕೂ ಭಾದ್ಯನಲ್ಲ ಎಂದು ಹೇಳಿಕೆ ನೀಡಿ ಜೆಡಿಎಸ್ ಪಕ್ಷ ತೊರೆಯುವ ಕುರಿತಾಗಿನ ಗೊಂದಲವನ್ನು ಉಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next