Advertisement

ಟೀಂ ಇಂಡಿಯಾದಲ್ಲಿ ‘ರಾಜಕೀಯ ಸಾವಿರ ಪಟ್ಟು ಹೆಚ್ಚು’; ಲ್ಯಾಂಗರ್ ಬಳಿ ರಾಹುಲ್ ಹೇಳಿದ್ದೇನು?

09:59 AM May 24, 2024 | Team Udayavani |

ಮುಂಬೈ: ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ಜಸ್ಟಿನ್ ಲ್ಯಾಂಗರ್ ಅವರು ಭಾರತದ ಮುಂದಿನ ಮುಖ್ಯ ಕೋಚ್ ಆಗುವ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಹೆಸರುಗಳಲ್ಲಿ ಒಬ್ಬರು. ಮುಂಬರುವ ಟಿ20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕೊನೆಗೊಳ್ಳುವುದರಿಂದ ಅವರ ಉತ್ತರಾಧಿಕಾರಿಗೆ ಬಿಸಿಸಿಐ ಹಲವಾರು ಆಯ್ಕೆಗಳನ್ನು ನೋಡುತ್ತಿದೆ. ಆ ಪಟ್ಟಿಯಲ್ಲಿ ಜಸ್ಟಿನ್ ಲ್ಯಾಂಗರ್ ಹೆಸರೂ ಕೇಳಿಬಂದಿದ್ದು, ಆದರೆ ಅವರು ರೇಸ್‌ ನಿಂದ ಹೊರಗುಳಿದಿದ್ದಾರೆ ಅವರೇ ಹೇಳಿದ್ದಾರೆ.

Advertisement

ಜಸ್ಟಿನ್ ಲ್ಯಾಂಗರ್ ಅವರು 2024ರ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಇದೇ ವೇಳೆ ಎಲ್ಎಸ್ ಜಿ ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಟೀಂ ಇಂಡಿಯಾ ಕೋಚಿಂಗ್ ಬಗ್ಗೆ ಲ್ಯಾಂಗರ್ ಮಾತನಾಡಿದ್ದಾರೆ. ಆ ವೇಳೆ ರಾಹುಲ್ ಅವರು “ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಎದುರಿಸುವ ‘ರಾಜಕೀಯ ಮತ್ತು ಒತ್ತಡ’ ಯಾವುದೇ ಐಪಿಎಲ್ ಕೋಚ್‌ಗಿಂತ ಸುಮಾರು ‘ಸಾವಿರ ಪಟ್ಟು’ ಆಗಿದೆ” ಎಂದು ಹೇಳಿದ್ದಾರೆಂದು ಲ್ಯಾಂಗರ್ ಹೇಳಿದ್ದಾರೆ.

“ಇದು ಎಲ್ಲವನ್ನೂ ಒಳಗೊಳ್ಳುವ ಜವಾಬ್ದಾರಿ ಎಂದು ನನಗೆ ತಿಳಿದಿದೆ, ಆಸ್ಟ್ರೇಲಿಯನ್ ತಂಡದೊಂದಿಗೆ ನಾಲ್ಕು ವರ್ಷಗಳ ಕಾಲ ಅದನ್ನು ಮಾಡಿದ್ದೇನೆ, ನಾನು ದಣಿದಿದ್ದೇನೆ” ಎಂದು ಬಿಬಿಸಿ ಸ್ಟಂಪ್ಡ್‌ ಪಾಡ್ ಕಾಸ್ಟ್ ನಲ್ಲಿ ಲ್ಯಾಂಗರ್ ಹೇಳಿದರು.

“ನಾನು ಕೆಎಲ್ ರಾಹುಲ್ ಅವರೊಂದಿಗೆ ಮಾತನಾಡುತ್ತಿದ್ದೆ, ಅವರು ಹೇಳಿದರು, ‘ಐಪಿಎಲ್ ತಂಡದಲ್ಲಿ ಒತ್ತಡ ಮತ್ತು ರಾಜಕೀಯವಿದೆ ಎಂದು ನೀವು ಭಾವಿಸಿದರೆ, ಭಾರತಕ್ಕೆ ಕೋಚಿಂಗ್ ಮಾಡುವುದು ಅದಕ್ಕಿಂತ ಸಾವಿರ ಪಟ್ಟು ಹೆಚ್ಚು ಎಂದರು. ಅದು ಉತ್ತಮ ಸಲಹೆಯಾಗಿದೆ ಎಂದು ನಾನು ಊಹಿಸುತ್ತೇನೆ” ಎಂದರು.

ಲ್ಯಾಂಗರ್ ಅವರ ಮಾಜಿ ಸಹ ಆಟಗಾರ ರಿಕಿ ಪಾಂಟಿಂಗ್ ಕೂಡ ಟೀಂ ಇಂಡಿಯಾ ಕೋಚ್ ಆಫರ್ ತಿರಸ್ಕರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next