Advertisement

Modi 3.0; ಇದು ಮಂತ್ರಿ ಮಂಡಲವಲ್ಲ ಪರಿವಾರ ಮಂಡಲ: ರಾಹುಲ್‌

12:06 AM Jun 12, 2024 | Team Udayavani |

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಕುಟುಂಬ ರಾಜಕಾರಣ ಮಾಡುತ್ತಿದೆ. ಎನ್‌ಡಿಎನ ಮಂತ್ರಿ ಮಂಡಲ, ಪರಿವಾರ ಮಂಡಲವಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿದ ರಾಹುಲ್‌, ಎಚ್‌.ಡಿ. ಕುಮಾರಸ್ವಾಮಿ ಮಾಜಿ ಪ್ರಧಾನಿ ದೇವೆಗೌಡ ಅವರ ಮಗ, ಮಾಜಿ ಸಚಿವ ಮಾಧವರಾವ್‌ ಸಿಂಧಿಯಾ ಪುತ್ರ ಜ್ಯೋತಿರಾಧಿತ್ಯ ಸಿಂಧಿಯಾ, ಅರುಣಾಚಲ ಪ್ರದೇಶದ ನಾಯಕ ರಿನ್‌ಚಿನ್‌ ಖಾರು ಪುತ್ರ ಕಿರಣ್‌ ರಿಜಿಜು, ರಾಮ್‌ ವಿಲಾಸ್‌ ಪಾಸ್ವಾನ್‌ ಪುತ್ರ ಚಿರಾಗ್‌ ಪಾಸ್ವಾನ್‌ ಹೀಗೆ ಹಲವರನ್ನು ಉಲ್ಲೇಖೀಸಿದ್ದಾರೆ.

ರಾಮನಾಥ್‌ ಠಾಕೂರ್‌, ರಾಮಮೋಹನ್‌ ನಾಯ್ಡು, ಜಿತಿನ್‌ ಪ್ರಸಾದ್‌, ಪಿಯೂಷ್‌ ಗೊಯಲ್‌, ಅನುಪ್ರಿಯಾ ಪಟೇಲ್‌, ಕೀರ್ತಿವರ್ಧನ್‌ ಸಿಂಗ್‌ ಸೇರಿ 20 ಸಚಿವರ ಹೆಸರು ಈ ಪಟ್ಟಿಯಲ್ಲಿದ್ದು, ಇವರೆಲ್ಲ ರಾಜಕೀಯ ಕುಟುಂದ ಹಿನ್ನೆಲೆಯವರು. ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಲಾಗಿದೆ ಎಂದಿದ್ದಾರೆ.

ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ, ಕಾಂಗ್ರೆಸ್‌ ಕುಟುಂಬ ರಾಜಕಾರಣ ಮಾಡಿದೆ ಎಂದು ಆರೋಪಿಸಿದ್ದರು. ಅದಕ್ಕೆ ಉತ್ತರವಾಗಿ ರಾಹುಲ್‌ ಈಗ ಈ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next