Advertisement

Politics: ವಲಸಿಗರ ಸೇರ್ಪಡೆ: ಸಮಿತಿ ರಚಿಸಿದ ಬಿಜೆಪಿ

12:14 AM Jan 03, 2024 | Team Udayavani |

ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧತೆಯಲ್ಲಿ ತೊಡಗಿರುವ ಬಿಜೆಪಿ ಈಗ ಬೇರೆ ರಾಜಕೀಯ ಪಕ್ಷಗಳಿಂದ ವಲಸೆ ಬರುವವರ ಸೇರ್ಪಡೆ ಬಗ್ಗೆ ಎಚ್ಚರಿಕೆಯ ಹೆಜ್ಜೆಯಿಡಲು ನಿರ್ಧರಿಸಿದೆ. ಅದಕ್ಕಾಗಿ ಅಂಥವರ ಸಂಪೂರ್ಣ ಹಿನ್ನೆಲೆಯನ್ನು ಪರಿಶೀಲಿಸುವ ನಿಟ್ಟಿನಲ್ಲಿ ಹೊಸ ಸಮಿತಿಯನ್ನು ರಚಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

ಈ ಸಮಿತಿಯ ಮೊದಲ ಸಭೆ ಜ.6ರಂದು ನಡೆಯಲಿದೆ. ಇತರ ಪಕ್ಷಗಳ ನಾಯಕರಿಗೆ ನೇರವಾಗಿ ಮಣೆ ಹಾಕುವ ಬದಲು, ಯಾರನ್ನು ಸೇರಿಸಿಕೊಳ್ಳಬಹುದು, ಯಾರನ್ನು ಸೇರಿಸಿಕೊಳ್ಳಬಾರದು ಎಂಬ ಬಗ್ಗೆ ಸಮಿತಿಯು ಪರಾಮರ್ಶೆ ನಡೆಸಲಿದೆ. ಸಮಿತಿಯ ಸದಸ್ಯರು ಸೇರ್ಪಡೆಗೊಳ್ಳಲಿರುವ ನಾಯಕರ ಬಗ್ಗೆ ಮಾಹಿತಿ ಪರಿಶೀಲಿಸಿ, ಸಹಮತ ವ್ಯಕ್ತಪಡಿಸಿದ ಬಳಿಕವೇ ವಲಸಿಗರಿಗೆ ಗ್ರೀನ್‌ ಸಿಗ್ನಲ್‌ ನೀಡಲಾಗುತ್ತದೆ.

ಪಶ್ಚಿಮ ಬಂಗಾಲದಲ್ಲಿ ಹಿಂದಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಎಂಸಿ ನಾಯಕರಾಗಿದ್ದ ಮುಕುಲ್‌ ರಾಯ್‌, ಬಾಬುಲ್‌ ಸುಪ್ರಿಯೋ ಬಿಜೆಪಿಗೆ ಸೇರಿದ್ದರು. ಆದರೆ ಫ‌ಲಿತಾಂಶದ ಬಳಿಕ ಅವರು ಟಿಎಂಸಿಗೆ ಮರಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next