ರಾಜ್ಯಾದ್ಯಂತ ಪ್ರಕ್ಷುಬ್ಧ ಪರಿಸ್ಥಿತಿ ಮುಂದು ವರಿದಿರುವ ನಡುವೆಯೇ ಹಿಂಸಾಚಾರಕ್ಕೆ ಯಾರು ಕಾರಣ ಎಂಬ ವಿಚಾರದಲ್ಲಿ ಬಿಜೆಪಿ - ಆರೆಸ್ಸೆಸ್ ನಾಯಕತ್ವ ಹಾಗೂ ಆಡಳಿತಾರೂಢ ಸಿಪಿಎಂ ಪರಸ್ಪರ ವಾಗ್ವಾದ ನಡೆಸುತ್ತಿವೆ.
Advertisement
ಆರೋಪ-ಪ್ರತ್ಯಾರೋಪ: ಆರೆಸ್ಸೆಸ್ ಮತ್ತು ಬಿಜೆಪಿಯು ತಮ್ಮ ಆಡಳಿತದಲ್ಲಿರುವ ದೇವಾಲಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಹಿಂಸೆಯ ಅಸ್ತ್ರಗಳನ್ನಾಗಿ ಬಳಸಿ ಕೊಳ್ಳುತ್ತಿವೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಆರೋಪಿಸಿದ್ದಾರೆ. ಇದಕ್ಕೆ ಧ್ವನಿಗೂಡಿಸಿರುವ ಸಿಪಿಎಂ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಪಿ. ಜಯರಾಜನ್, “ಕೂಡಲೇ ಸಂಘಪರಿ ವಾರವು ಹಿಂಸಾಚಾರವನ್ನು ಕೊನೆಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ. ಸಿಪಿಎಂ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ವಿ.ಮುರಳೀಧರನ್, “ಈಗ ನಡೆಯುತ್ತಿರುವ ಹಿಂಸಾಚಾರಗಳೆಲ್ಲ ವಿವಾದದಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಸಿಪಿಎಂ ನಡೆಸಿರುವ ಕುತಂತ್ರ’ ಎಂದು ಹೇಳಿದ್ದಾರೆ.
Related Articles
ಸುಮಾರು 100 ವರ್ಷಗಳಿಂದಲೂ ಭಾರತವು ಹರತಾಳಗಳನ್ನು ಕಂಡಿದ್ದು, ಈ ಪೈಕಿ ಅತಿ ಹೆಚ್ಚು ನಡೆದಿರುವುದು ಕೇರಳದಲ್ಲಿ. ರೌಲತ್ ಕಾಯ್ದೆಯನ್ನು ಖಂಡಿಸಿ 1919ರ ಏ.6ರಂದು ಮೊದಲ ಬಾರಿಗೆ ಮಹಾತ್ಮ ಗಾಂಧಿ ಅವರು ಹರತಾಳಕ್ಕೆ ಕರೆ ನೀಡಿದ್ದರು. ಆದರೆ, ಅದಕ್ಕೆ ಕೆಲ ಷರತ್ತುಗಳನ್ನೂ ವಿಧಿಸಲಾಗಿತ್ತು. ಯಾರಿಗೂ ತೊಂದರೆ ಉಂಟುಮಾಡುವಂತಿಲ್ಲ, ಕಷ್ಟದಲ್ಲಿರುವವರಿಗೆ ನೆರವಾಗಬೇಕು ಮತ್ತು ಹರತಾಳದಲ್ಲಿ ಭಾಗಿಯಾಗುವವರು ಉಪವಾಸ ಮಾಡುತ್ತಿರಬೇಕು ಎಂಬ ನಿಯಮಗಳನ್ನು ಗಾಂಧೀಜಿ ಹಾಕಿದ್ದರು. ಆದರೆ, ಈಗ ಯಾವ ನಿಯಮಗಳೂ ಉಳಿದಿಲ್ಲ. ಕೇರಳದಲ್ಲಿ ಪ್ರತಿ ವರ್ಷ 100ರಷ್ಟು ಹರತಾಳಗಳು ನಡೆಯುತ್ತಿವೆ. 2018ರಲ್ಲಿ 120 ಹರತಾಳ ನಡೆದಿವೆ. ಇನ್ನು ತಮಿಳುನಾಡು 2017ರಲ್ಲಿ 5 ಹರತಾಳಕ್ಕೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಮಹದಾಯಿ ವಿವಾದ ಸಂಬಂಧ ಕೇವಲ ಒಂದು ಹರತಾಳ ನಡೆದಿದೆ ಎಂದು ಮಾತೃಭೂಮಿ ವರದಿ ಮಾಡಿದೆ.
Advertisement
ಆಲದ ಮರಕ್ಕೆ ಬೆಂಕಿಶಬರಿಮಲೆ ದೇಗುಲದ ಹದಿನೆಂಟು ಪವಿತ್ರ ಮೆಟ್ಟಿಲಿನ ಮುಂಭಾಗದಲ್ಲಿರುವ ಆಲದ ಮರಕ್ಕೆ ಶನಿವಾರ ಬೆಳಗ್ಗೆ 11.30ರ ವೇಳೆಗೆ ಬೆಂಕಿ ಹತ್ತಿಕೊಂಡಿದೆ. ಪಕ್ಕದಲ್ಲೇ ಇದ್ದ ಅಗ್ನಿ ಕುಂಡದಲ್ಲಿದ್ದ ಬೆಂಕಿ ವ್ಯಾಪಿಸಿ, ಮರಕ್ಕೆ ಹತ್ತಿಕೊಂಡಿತು. ಕೂಡಲೇ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ನಂದಿಸಿತು. ಬಿಜೆಪಿ ಮತ್ತು ಸಿಪಿಎಂ ರಾಜ್ಯಾದ್ಯಂತ ಹಿಂಸಾಚಾರದಲ್ಲಿ ತೊಡಗಿದ್ದು, ಜನಜೀವನವನ್ನು ದುಸ್ಥಿತಿಗೆ ದೂಡಿವೆ. ಕೂಡಲೇ ಸಿಎಂ ಪಿಣರಾಯಿ ವಿಜಯನ್ ಅವರು ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
ರಮೇಶ್ ಚೆನ್ನಿತ್ತಲ, ಪ್ರತಿಪಕ್ಷ ಕಾಂಗ್ರೆಸ್ ನಾಯಕ