Advertisement
ದುರಂತ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಇಬ್ಬರೂ ಶನಿವಾರ ಗೋರಖ್‌ಪುರಕ್ಕೆ ಭೇಟಿ ನೀಡಿದ್ದು, ಪರಸ್ಪರ ಕೆಸರೆರೆಚಿ ಕೊಂಡಿದ್ದಾರೆ. ಇದೊಂದು “ಸರಕಾರಿ ಪ್ರಾಯೋಜಿತ ದುರಂತ’ ಎಂದು ರಾಹುಲ್ ಬಣ್ಣಿಸಿದರೆ, “ಗೋರಖ್‌ಪುರವೇನೂ ಪಿಕ್‌ನಿಕ್ ಸ್ಪಾಟ್ ಅಲ್ಲ’ ಎಂದು ಯೋಗಿ ಹೀಗಳೆದಿದ್ದಾರೆ. ಇದಲ್ಲದೆ, ಎರಡೂ ಪಕ್ಷಗಳ ಇತರೆ ನಾಯಕರೂ ಪರಸ್ಪರ ವಾಕ್ಸಮರದಲ್ಲಿ ತೊಡಗಿದ್ದಾರೆ.
ರಾಹುಲ್ ಭೇಟಿಗೂ ಮುನ್ನ ಗೋರಖ್‌ಪುರದಲ್ಲಿ “ಸ್ವತ್ಛ ಉತ್ತರ್‌ಪ್ರದೇಶ್- ಸ್ವಾಸ್ಥ್ಯ ಉತ್ತರ್‌ಪ್ರದೇಶ್’ ಅಭಿ ಯಾನಕ್ಕೆ ಚಾಲನೆ ನೀಡಿ ಮಾತನಾಡಿದ್ದ ಸಿಎಂ ಯೋಗಿ ಅವರು ರಾಹುಲ್ ವಿರುದ್ಧ ಹರಿಹಾಯ್ದಿದ್ದರು. “ಗೋರಖ್‌ಪುರವೇನೂ ಪಿಕ್‌ನಿಕ್ ಸ್ಪಾಟ್ ಅಲ್ಲ. ದಿಲ್ಲಿ ಯಲ್ಲಿ ಕುಳಿತ ಯುವರಾಜ ಮತ್ತು ಲಕ್ನೋದಲ್ಲಿ ಕುಳಿತ ಶೆಹಜಾದಾ (ಅಖೀಲೇಶ್)ಗೆ ಇದು ಗೊತ್ತಿರಲಿ. ಅಷ್ಟೊಂದು ಕಳಕಳಿಯಿದ್ದರೆ ಇಲ್ಲಿಗೆ ಬಂದು ಮಾರಣಾಂ ತಿಕ ರೋಗ ತಡೆ ಬಗ್ಗೆ ಜಾಗೃತಿ ಮೂಡಿಸಲಿ’ ಎಂದಿದ್ದರು.
Related Articles
ಸಿಎಂ ಯೋಗಿ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್, “ಹೌದು, ಗೋರಖ್‌ಪುರ ಪಿಕ್‌ನಿಕ್ ಸ್ಪಾಟ್ ಅಲ್ಲ. ಬದಲಿಗೆ, ವಾಸ್ತವದಲ್ಲಿ ಮರ್ಡರ್ ಸ್ಪಾಟ್’ ಎಂದಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದ ಆದ ದುರಂತವನ್ನು ಸಿಎಂ ಯೋಗಿ
ಅವರು ಕೀಳುಮಟ್ಟದ ರಾಜಕೀಯಕ್ಕೆ ಬಳಸುತ್ತಿದ್ದಾರೆ. ಏನೂ ತಪ್ಪು ಮಾಡದೇ ಮೃತಪಟ್ಟ ಆ ಅಮಾಯಕ
ಮಕ್ಕಳ ಸ್ಮರಣೆಗೇ ಅವಮಾನ ಮಾಡುತ್ತಿದ್ದಾರೆ ಎಂದು ಎಐಸಿಸಿ ವಕ್ತಾರ ಅಭಿಷೇಕ್ ಮನು ಸಿಂ Ì ಆರೋಪಿಸಿದ್ದಾರೆ.
Advertisement