ಬೆಂಗಳೂರು: ಅಯೋಧ್ಯೆಯಲ್ಲಿ ಜ.22ರಂದು ರಾಮ ಮಂದಿರ ಉದ್ಘಾಟನೆ ವೇಳೆ ರಾಜ್ಯದಲ್ಲಿ ಗುಜರಾತ್‌ನ ಗೋಧ್ರಾದಲ್ಲಿ ನಡೆದಿದ್ದಂಥ ದುರ್ಘಟನೆ ನಡೆಯಬಹುದು. ಬಿಜೆಪಿ ರಾಜಕೀಯ ಲಾಭಕ್ಕಾಗಿ ಏನು ಬೇಕಾದರೂ ಮಾಡಬಹುದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ.ಹರಿ ಪ್ರಸಾದ್ ಹೇಳಿದ್ದಾರೆ. ಅವರ ಹೇಳಿಕೆ ವಿಪಕ್ಷ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್ ನಡುವೆ ಬಿರುಸಿನ ವಾಗ್ವಾದಕ್ಕೆ ಕಾರಣವಾಗಿದೆ.
ಹಳೆಯ ಅಪರಾಧ ಪ್ರಕರಣಗಳ ತ್ವರಿತ ವಿಲೇವಾರಿ ನೆಪದಲ್ಲಿ ಕರಸೇವಕರನ್ನು ವಿನಾ ಕಾರಣ ಬಂಧಿಸಲಾಗುತ್ತಿದೆ ಎಂದು ಆಕ್ರೋಶ ಗೊಂಡಿದ್ದ ಬಿಜೆಪಿಯನ್ನು ಹರಿಪ್ರಸಾದ್ ಹೇಳಿಕೆ ಮತ್ತಷ್ಟು ಕೆರಳಿಸಿದ್ದು, ಕಾಂಗ್ರೆಸ್ ಪಾಲಿಗೆ ಇದೊಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂತಹ ಊಹಾಪೋಹಕ್ಕೆಲ್ಲ ಪ್ರತಿಕ್ರಿಯಿಸುವು ದಿಲ್ಲ ಎನ್ನುವ ಮೂಲಕ ಹರಿಪ್ರಸಾದ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಗೃಹ ಸಚಿವ ಡಾ| ಜಿ. ಪರಮೇಶ್ವರ್ ಪ್ರತಿ ಕ್ರಿಯಿಸಿ, ಅಂಥ ವಿಚಾರದ ಬಗ್ಗೆ ನಮ್ಮ ಇಲಾಖೆಗೆ ಮಾಹಿತಿಯಿಲ್ಲ ಎಂದರು.
ಬಿಜೆಪಿಯ ಇತಿಹಾಸ ನೋಡಿದರೇ ಗೊತ್ತಾಗುತ್ತದೆ. ಇಂತಹ ಕುಕೃತ್ಯಗಳಿಗೆ ಅದು ಹೆಸರುವಾಸಿ. ರಾಜಕೀಯ ಲಾಭಕ್ಕಾಗಿ ಯಾವ ಕೀಳು ಮಟ್ಟಕ್ಕೆ ಬೇಕಿದ್ದರೂ ಹೋಗು ತ್ತದೆ. ಗೋಧ್ರಾ, ಪುಲ್ವಾಮಾ, ಕಂದ ಮಾಲ್, ಮಣಿಪುರ ಪ್ರಕರಣಗಳಲ್ಲಿ ಬಿಜೆಪಿ ನಿಲು ವೇನು? ದೇಶದ ಎಲ್ಲ ರಾಜ್ಯಗಳೂ ಮುನ್ನೆಚ್ಚ ರಿಕೆ ವಹಿಸಬೇಕು. ಯಾವುದೇ ತನಿಖಾ ಸಂಸ್ಥೆಗೆ ಬೇಕಿದ್ದರೂ ನನ್ನಲ್ಲಿರುವ ಮಾಹಿತಿಯನ್ನು ಕೊಡಲು ಸಿದ್ಧನಿದ್ದೇನೆ.
-ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ
ಅನುಮಾನಗಳಿಗೆ ಉತ್ತರವಿಲ್ಲ
ಸಂಶಯಗಳು ಮತ್ತು ಅನುಮಾನಗಳಿಗೆ ಉತ್ತರ ಕೊಡುವುದಿಲ್ಲ. ಒಂದು ವೇಳೆ ಉತ್ತರಿಸಿದರೂ ಪ್ರಯೋಜನ ಆಗದು.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಇಡೀ ಜಗತ್ತಿಗೆ ಗೊತ್ತಿದೆ
ಹರಿಪ್ರಸಾದ್ ಬಗ್ಗೆ ಚರ್ಚೆ ಯಾಕೆ? ಗೋಧ್ರಾ ಹತ್ಯಾ ಕಾಂಡದ ಸಂದರ್ಭದಲ್ಲಿ ಯಾರು ಏನು ಮಾಡಿದ್ದಾರೆಂದು ಇಡೀ ಜಗತ್ತಿಗೇ ಗೊತ್ತಿದೆ. ಈಗೇಕೆ ಆ ಚರ್ಚೆ?
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ