Advertisement

Politics: ಚಿತ್ರದುರ್ಗದಿಂದಲೇ ಮತ್ತೆ ಸ್ಪರ್ಧೆ: ನಾರಾಯಣ ಸ್ವಾಮಿ

11:31 PM Nov 04, 2023 | Team Udayavani |

ಚಿತ್ರದುರ್ಗ: ಮುಂದಿನ ಲೋಕಸಭೆ ಚುನಾವಣೆಗೆ ಚಿತ್ರದುರ್ಗ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತೇನೆ ಎಂದು ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ಥಳೀಯರಿಗೆ ಟಿಕೆಟ್‌ ನೀಡಬೇಕು ಎನ್ನುವ ಕೂಗಿಗೆ ನನ್ನ ವಿರೋಧವಿಲ್ಲ. ಈ ಅಭಿಪ್ರಾಯವನ್ನು ಗೌರವಿಸುತ್ತೇನೆ. ಇದು ಮತದಾರರ ಪ್ರಜ್ಞಾವಂತಿಕೆಯನ್ನು ತೋರಿಸುತ್ತದೆ. ಸ್ಥಳೀಯರಿಗೆ ಪಕ್ಷ ಅವಕಾಶ ನೀಡಿದರೆ ಬೆಂಬಲ ನೀಡುತ್ತೇನೆ ಎಂದರು.

ಕೋಲಾರದಲ್ಲಿ ಸ್ಪರ್ಧಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪಕ್ಷ ಹೇಳಿದರೂ ಕೋಲಾರಕ್ಕೆ ಹೋಗುವುದಿಲ್ಲ. 2019ರ ಲೋಕಸಭೆ ಚುನಾವಣೆಗೆ ಚಿತ್ರದುರ್ಗಕ್ಕೆ ಬಂದಾಗ ಅನೇಕರು ನನ್ನ ಮುಖವನ್ನೇ ನೋಡಿರಲಿಲ್ಲ. ಆದರೂ ಈ ಕ್ಷೇತ್ರದ ಜನತೆ ಮತ ನೀಡಿ ಗೆಲ್ಲಿಸಿದ್ದಾರೆ. ಅವರ ವಿಶ್ವಾಸ ಉಳಿಸಿಕೊಳ್ಳುವುದಷ್ಟೇ ಮುಖ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next