Advertisement
ಭಾನುವಾರ ರಾತ್ರಿಯೇ ದಿಲ್ಲಿ ತಲುಪಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ತಡರಾತ್ರಿವರೆಗೂ ಸಭೆ ನಡೆಸಿ ಪಕ್ಷದ ಶಾಸಕರು ಹಾಗೂ ವಿಧಾನ ಪರಿಷತ್ತಿನ ಸದಸ್ಯರನ್ನು ವಿವಿಧ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸುವ ಸಂಬಂಧ ಸಮಾಲೋಚನೆ ನಡೆಸಿದರು. ಆದರೆ ಸಭೆಯ ವಿವರಗಳು ಲಭ್ಯವಾಗಿಲ್ಲ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ದಿಲ್ಲಿ ಪ್ರವಾಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ವ್ಯಂಗ್ಯಚಿತ್ರದ ಮೂಲಕ ಟೀಕೆ ನಡೆಸಿದೆ. ಕಲೆಕ್ಷನ್ ಹಣವನ್ನು ದಿಲ್ಲಿಗೆ ಒಪ್ಪಿಸಲು ವಾಮಮಾರ್ಗವನ್ನು ಹುಡುಕಿಕೊಂಡ ನಾಡದ್ರೋಹ ಕಾಂಗ್ರೆಸ್ ಸರಕಾರ ಎಂದು ಆರೋಪಿಸಿದೆ. ಯಾವಾಗಲೂ ಸುಜೇìವಾಲಾ ಬೆಂಗಳೂರಿಗೆ ಬಂದರೆ ಸಂಶಯ ಬರುತ್ತದೆ. ಹೀಗಾಗಿ ಈ ಬಾರಿ ನಾವೇ ಹೋಗಿ ಹೈಕಮಾಂಡ್‌ಗೆ ಕಪ್ಪ ಒಪ್ಪಿಸೋಣ ಎಂಬ ಸಿಎಂ ಸಿದ್ದರಾಮಯ್ಯ ಸಲಹೆಗೆ ಡಿ.ಕೆ. ಶಿವಕುಮಾರ್, ಗುಡ್ ಐಡಿಯಾ ಎಂದು ಹೇಳುವ ವ್ಯಂಗ್ಯಚಿತ್ರವನ್ನು “ಎಕ್ಸ್” ಜಾಲತಾಣದಲ್ಲಿ ಬಿಜೆಪಿ ಹಂಚಿಕೊಂಡಿದೆ.
Related Articles
Advertisement