Advertisement

ರಾಜಕಾರಣಿಗಳಿಗೆ ಮತದಾರರೇ ಪ್ರಭುಗಳು 

12:46 PM May 15, 2017 | |

ನಂಜನಗೂಡು: ರಾಜಕಾರಣಿಗಳಾದ ನಮಗೆ ಮತದಾರರೇ ಪ್ರಭುಗಳು ಹಾಗೂ ದೇವರು, ನಿಮ್ಮ ಆಶೀರ್ವಾದದಿಂದಲೇ ಉಪ ಚುನಾವಣೆಯಲ್ಲಿ ಕಳಲೆ ಕೇಶವಮೂರ್ತಿ ಗೆಲುವು ಸಾಧ್ಯವಾಯಿತು ಮುಂದೆಯೂ ನಿಮ್ಮ ಆಶೀರ್ವಾದ ನಮಗಿರಲಿ ಎಂದರು.

Advertisement

ಪಟ್ಟಣದ  ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲೂಕು ಉಪ್ಪಾರ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಭಗೀರಥ ಜಯಂತಿಯಲ್ಲಿ ಮಾತನಾಡಿ, ದೇಶದ ಬೆಳವಣಿಗೆಯ ಜೊತೆಯಲ್ಲಿ ಹೆಜ್ಜೆಯನ್ನಿಡಲು ಎಲ್ಲರೂ ವಿದ್ಯಾವಂತರಾಗಬೇಕು ಇಲ್ಲವಾದಲ್ಲಿ ಹಿಂದುಳಿಯುವಂತಹ ಸನ್ನಿವೇಶ ನಿರ್ಮಾಣವಾಗಲಿದ್ದು ಸಮಾಜದ ಆರ್ಥಿಕ ಪ್ರಗತಿಗೆ ವಿದ್ಯೆಯೇ ಮೂಲ ಸಾಧನ ಎಂದರು.

ಉದಾರೀಕರಣ ಜಾಗತೀಕರಣದಿಂದಾಗಿ ಎಲ್ಲಾ ಕಲ ಕಸುಬುಗಳು ಕಣ್ಮರೆಯಾಗಿವೆ. ಬದಲಾವಣೆ ಜಗತ್ತಿನ ನಿಯಮ ಬದಲಾವಣೆಯೊಂದಿಗೆ ನಾವು ಬದಲಾಗಬೇಕಿದೆ ಅದಕ್ಕಾಗಿ ಎಲ್ಲರೂ ಶಿಕ್ಷಣವಂತರಾಗಬೇಕು. ಅದಕ್ಕಾಗಿಯೇ ಉಪ್ಪಾರ ಸಮಾಜ ಶಿಕ್ಷಣ ಸಂಸ್ಥೆ ಪ್ರಾರಂಭಿಸುವುದಾದಲ್ಲಿ ಜಾಗ ನೀಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ರಾಜಾದ್ಯಂತ ಹೋಬಳಿ ಮಟ್ಟದಲ್ಲಿ 749 ವಸತಿ ಸಾಲೆಗಳನ್ನು ಪ್ರಾರಂಭಿಸಲು ಸಕಾರ ನಿಶ್ಚಯಿಸಿದ್ದು ಹಿಂದುಳಿದ ವರ್ಗಗಳಲ್ಲಿ ಶೈಕ್ಷಣಿಕ ಕ್ರಾಂತಿ ಸಾಧಿಸುವುದೇ ನಮ್ಮ ಹೆಬ್ಬಯಕೆಯಾಗಿದೆ. ಶೈಕ್ಷಣಿಕ, ಆರ್ಥಿಕವಾಗಿ ಜನಾಂಗವನ್ನು ಮುಂದೆ ತರಲು ಅಭಿವೃದ್ಧಿ ನಿಗಮಗಳ ಸ್ಥಾಪನೆ ಎಂದರಲ್ಲದೆ ಇನ್ನೂ 1 ವರ್ಷ ನಾನೇ ಮುಖ್ಯಮಂತ್ರಿ ಮುಂದೆಯೂ ನಮ್ಮದೇ ಸರ್ಕಾರ ಎಂದರು.

ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ಯಾವುದೇ ಸಮಾಜದ ನಿಖರವಾದ ಜನಸಂಖ್ಯೆ ಯಾರಿಗೂ ಗೊತ್ತಿಲ್ಲ ಹಿಂದುಳಿದ ವರ್ಗಗಳ ಪರವಾದ ಮಂಡಲ್‌ ಆಯೋಗದ ವಿರುದ್ಧ ಕಮಂಡಲ ಹಿಡಿದು ವಿರೋಧಿಸಲಾಯಿತು ಎಂದು ವಿಷಾಧಿಸಿದ ಅವರು ರಾಜ್ಯದಲ್ಲಿ ಅತ್ಯಂತ ಹಿಂದುಳಿದ ವರ್ಗಗಳ ಉಪ್ಪಾರರು ಇತರ ಹಿಂದುಳಿದ ವರ್ಗಗಳ ಉದ್ಧಾರಕ್ಕಾಗಿ ಪಣ ತೊಟ್ಟ ಸಿದ್ದರಾಮಯ್ಯರ ಸರ್ಕಾರ ಜಾತಿ ಗಣತಿ ಮೂಲಕ ನ್ಯಾಯ ದೊರಕಿಸಲು ಪ್ರಯತ್ನ ನಡೆಸಿದೆ ಎಂದು ತಿಳಿಸಿದರು.

Advertisement

ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಉಪ್ಪಾರ ಸಮಾಜದ ಎಲ್ಲರಿಗೂ ಮನೆ ಭಾಗ್ಯ ನೀಡಲು ನಿಶ್ಚಿಯಿಸಿದ ಮುಖ್ಯ ಮಂತ್ರಿ ಗಳಿಗೆ ಧನ್ಯವಾದಗಳು. ಸದ್ಯದಲ್ಲೇ ಕೆಪಿಎಸ್ಸಿನಲ್ಲಿ ಸಮಾಜಕ್ಕೊಂದು ಸ್ಥಾನ ದೊರಕಲಿದೆ. ಋಣ ಮರೆಯದ ನಮ್ಮ ಸಮಾಜವನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಿಕೊಡಿ ಎಂದು ಮನವಿ ಮಾಡಿದರು.

ಸಂಸದ ಆರ್‌.ಧೃವನಾರಾಯಣ್‌ ಮಾತನಾಡಿ, ತಾಲೂಕು ಮಟ್ಟದ ಜಯಂತ್ಯುತ್ಸವದಲ್ಲಿ ಪ್ರಥಮಬಾರಿಗೆ ಆಗಮಿಸಿದ ಮುಖ್ಯ ಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದ ಅವರು ಯಜಮಾನಿಕೆಯ ಮೇಲುಸ್ತುವಾರಿಯಲ್ಲಿ ಕಟ್ಟಲೆಗಳನ್ನು ರೂಪಿಸುವ ಸಮಾಜದ ಯಜಮಾನರುಗಳು ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ತೊಡದುಹಾಕಿ ಕಡ್ಡಾಯವಾಗಿ ಶಿಕ್ಷಣ ದೊರಕಿಸಿಕೊಡಿ ಎಂದು ಆಜ್ಞೆ ಹೊರಡಿಸಲಿ ಎಂದರು.

ಉಪ್ಪಾ$ರ ಸಮಾಜದ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪ$ಂದಿಸಿದ ಮುಖ್ಯಮಂತ್ರಿಗಳ ಪರವಾಗಿ ತಾಲೂಕು ಉಪ್ಪಾ$ರ ಸಂಘದ ಅಧ್ಯಕ್ಷ ಮೂಗಶೆಟ್ಟಿ ಕಡ್ಗವನ್ನು ನೀಡಿ ಗೌರವಿಸಿದರು. ಸಮಾರಂಭದಲ್ಲಿ ಪುರುಶೋತ್ತಮನಾಂದಪುರಿ ಮಹಾಸ್ವಾಮಿಗಳು ಆಶಿರ್ವಚನ ನೀಡಿದ ಸಮಾರಂಭದ ಅಧ್ಯಕ್ಷತೆ ಶಾಸಕ ಕಳಲೆ ಕೇಶವಮೂರ್ತಿ ವಹಿಸಿದ್ದರು. 

ಜಿಪಂ ಸದಸ್ಯರಾದ ಲತಾ ಸಿದ್ದಶೆಟ್ಟಿ, ಎಚ್‌.ಎಸ್‌.ದಯಾನಂದಮೂರ್ತಿ, ತಾ.ಉಪ್ಪಾರ ಸಂಘದ ಅಧ್ಯಕ್ಷ ಮೂಗಶೆಟ್ಟಿ, ನಿಗಮ ಮಂಡಳಿಗಳ ಅಧ್ಯಕ್ಷರಾದ ಅಧ್ಯಕ್ಷ ನಂದಕುಮಾರ್‌, ಸೀತಾರಾಮು, ವೆಂಕಟೇಶ್‌, ನಗರಸಭಾಧ್ಯಕ್ಷೆ ಪುಷ್ಪ$ಲತಾ, ತಾಪಂ ಉಪಾಧ್ಯಕ್ಷ ಹೆಜ್ಜಿಗೆ ಗೋವಿಂದರಾಜನ್‌ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ, ಚಿಕ್ಕಮಾದಯ್ಯ,

ಮಾಜಿ ಜಿಪಂ ಸದ್ಯಸ ಕೆ.ಬಿ.ಸ್ವಾಮಿ, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಬಸವರಾಜು, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್‌, ಸದಸ್ಯರಾದ ಮಂಜುನಾಥ್‌ ನಿಂಗಪ್ಪ, ರಾಜೇಶ್ವರಿ,  ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ, ಎಂ.ಶ್ರೀನಿವಾಸ್‌, ಕೂಡ್ಲಪೂರ ರಾಜು, ಮಾಡ್ರಳ್ಳಿ ಸಿದ್ದಪ್ಪ, ಕನಕನಗರ ಮಹದೇವು, ಬಾಲಚಂದ್ರು, ತಹಶೀಲ್ದಾರ್‌ ದಯಾನಂದ್‌, ತಾಪಂ ಇಒ ಬಿ.ರೇವಣ್ಣ, ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next