Advertisement

ಉಲ್ಟಾ ಹೊಡೆದ ಮಾಲಕರೆಡ್ಡಿ ಮತ್ತೆ ರಾಜಕೀಯಕ್ಕೆ

06:45 AM Feb 11, 2018 | |

ಯಾದಗಿರಿ: ಶಾಸಕ ಡಾ.ಎ.ಬಿ. ಮಾಲಕರೆಡ್ಡಿ ಚುನಾವಣೆ ರಾಜಕೀಯ ನಿವೃತ್ತಿ ಮರುಶೀಲಿಸುವುದಾಗಿ ಹೇಳುವ ಮೂಲಕ ಯೂಟರ್ನ್ ಹೊಡೆದಿದ್ದಾರೆ. 

Advertisement

ಶಾಸಕರ ನಿವಾಸದ ಎದುರು ಚುನಾವಣೆ ನಿವೃತ್ತಿ ಹಿಂಪಡೆಯುವಂತೆ ಅಭಿಮಾನಿಗಳ ಬಳಗ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ವಯಸ್ಸು ಹಾಗೂ ಕಿರಿಯರಿಗೆ ಅವಕಾಶ ನೀಡಬೇಕೆಂಬ ಉದ್ದೇಶದಿಂದ ಚುನಾವಣೆ ನಿವೃತ್ತಿ ಘೋಷಣೆ ಮಾಡಿದ್ದು ನಿಜ. ಆದರೆ ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ. ನಿಮ್ಮೆಲ್ಲರ ಒತ್ತಡಕ್ಕೆ ಮಣಿದು ಚುನಾವಣೆ ನಿವೃತ್ತಿ ಮರುಶೀಲನೆ ಮಾಡುವುದಾಗಿ ಘೋಷಣೆ ಮಾಡುವ ಮೂಲಕ ಮತ್ತೆ ಚುನಾವಣೆ ನಿಲ್ಲುವ ಬಗ್ಗೆ ಭರವಸೆ ನೀಡಿದ್ದಾರೆ. ನನಗೆ 82 ವರ್ಷ ವಯಸ್ಸಾಗಿದೆ. ಈಗ ಬಿಜೆಪಿ ಸೇರುತ್ತೇನೆಂಬ ಬಗ್ಗೆ ಕೆಲವು ಮಾಧ್ಯಮಗಳು ತಪ್ಪು ವರದಿ ಮಾಡಿವೆ. ಈ ವಯಸ್ಸಿನಲ್ಲಿ ನಾನು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next