Advertisement

ಬಸವಣ್ಣ ಪ್ರತಿಮೆ ಸ್ಥಳ ಅಭಿವೃದ್ಧಿ; ರಾಜಕೀಯ ತಿರುವು?

12:21 PM Aug 25, 2020 | Suhan S |

ಬೆಂಗಳೂರು: ಪಾಲಿಕೆ ವತಿಯಿಂದ ನಗರದ ಚಾಲುಕ್ಯ ವೃತ್ತದಲ್ಲಿ ಅಶ್ವರೂಢ ಬಸವೇಶ್ವರ ಪ್ರತಿಮೆ ಸ್ಥಳವನ್ನು 12ನೇ ಶತಮಾನದ ಅನುಭವ ಮಂಟಪದ ಪರಿಕಲ್ಪನೆಯಲ್ಲಿ ಮರುವಿನ್ಯಾಸಗೊಳಿಸುವ ಯೋಜನೆ ಇದೀಗ ಹಾಲಿ ಮತ್ತು ಮಾಜಿ ಮೇಯರ್‌ಗಳ ನಡುವೆ ವೈಮನಸ್ಸಿಗೆ ಕಾರಣವಾಗಿದೆ.

Advertisement

ಈ ಸಂಬಂಧ ಮೇಯರ್‌ ಎಂ. ಗೌತಮ್‌ ಕುಮಾರ್‌ ಅವರಿಗೆ ಪತ್ರ ಬರೆದಿರುವ ಅಖೀಲ ಭಾರತ ವೀರಶೈವ ಮಹಾಸಭಾದ ರಾಜ್ಯ ಯುವ ಘಟಕ ಮತ್ತು ವೀರಶೈವ ಲಿಂಗಾಯತ ಯುವ ವೇದಿಕೆಯ ಯುವಘಟಕದ ಅಧ್ಯಕ್ಷ ಜಿ. ಮನೋಹರ ಅಬ್ಬಿಗೆರೆ,  ಬಸವೇಶ್ವರರ ಅಶ್ವಾರೂಢ ಪ್ರತಿಮೆಯ ಸ್ಥಳದ ಮರುವಿನ್ಯಾಸ ಯೋಜನೆಗೆ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರು ಅನುದಾನ ಒದಗಿಸಿದ್ದು, ಅವರ ಅವಧಿಯಲ್ಲೇ ಶೇ. 70 ಕಾಮಗಾರಿ ಮುಗಿದಿತ್ತು. ಆ. 26ರಂದು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ಆದರೆ, ಈಗ ಗಂಗಾಂಬಿಕೆ ಅವರನ್ನು ಕಡೆಗಣಿಸುತ್ತಿರುವುದು ಸಮಂಜಸವಲ್ಲ. ಶಿಲಾನ್ಯಾಸ ಫಲಕದಲ್ಲಿ ಮುಖ್ಯ ಅತಿಥಿ ಸಾಲಿನಲ್ಲಿ ಗಂಗಾಂಬಿಕೆ ಅವರ ಹೆಸರನ್ನು ಕೆತ್ತಿಸಬೇಕು ಎಂದು ಆಗ್ರಹಿಸಿದ್ದಾರೆ.

ಚಾಲುಕ್ಯ ವೃತ್ತದಲ್ಲಿರುವ ಅಶ್ವಾರೂಢ ಬಸವೇಶ್ವರರ ಪ್ರತಿಮೆ ಮರುವಿನ್ಯಾಸಗೊಳಿಸಿದ ಕೀರ್ತಿಯನ್ನು ಮಾಜಿ ಮೇಯರ್‌ ಗಂಗಾಂಬಿಕೆ ಅವರಿಗೆ ನೀಡಬೇಕು. ಪ್ರತಿಮೆ ಅನಾವರಣಗೊಳಿಸುತ್ತಿರುವ ವೇಳೆ ಗಂಗಾಂಬಿಕೆ ಅವರನ್ನು ಕಡೆಗಣಿಸುತ್ತಿರುವುದು ಖಂಡನೀಯ. ಶಿಲಾನ್ಯಾಸ ಫಲಕದಲ್ಲಿ ಗಂಗಾಂಬಿಕೆ ಅವರ ಹೆಸರನ್ನು ಕೈಬಿಟ್ಟರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಪ್ರಶಾಂತ್‌ ಕಲ್ಲೂರ್‌ ಎಚ್ಚರಿಕೆ ನೀಡಿದ್ದಾರೆ.

ಇನ್ನು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್‌ ಅವರೂ ಅನ್ಯರ ಸಾಧನೆಯನ್ನು ಕೆಲವರು ಅವರ ಸಾಧನೆಯಂತೆ ಬಿಂಬಿಸಿಕೊಳ್ಳುತ್ತಾರೆ. ಯಾವುದೇ ಲಜ್ಜೆ ಇಲ್ಲದ ಓಲೈಕೆ ಇದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಶಿಷ್ಟಾಚಾರದಲ್ಲಿ ಅವಕಾಶವಿದ್ದರೆ ಕ್ರಮ: ಮೇಯರ್‌ ಎಂ.ಗೌತಮ್‌ಕುಮಾರ್‌ಚಾಲುಕ್ಯ ವೃತ್ತದ ಬಸವಣ್ಣನವರ ಅಶ್ವರೂಢ ಪ್ರತಿಮೆಯ ಸ್ಥಳವನ್ನು ಅನುಭವ ಮಂಟಪದ ಪರಿಕಲ್ಪನೆಯ ಮರುವಿನ್ಯಾಸ ಯೋಜನೆ ಶಿಲಾನ್ಯಾಸ ಫಲಕದಲ್ಲಿ ಮಾಜಿ ಮೇಯರ್‌ ಹೆಸರು ಸೇರಿಸಲು ಒತ್ತಡ ಪ್ರಾರಂಭವಾದ ಹಿನ್ನೆಲೆಯಲ್ಲಿ ಶಿಲಾವಿನ್ಯಾಸದಲ್ಲಿ ಮಾಜಿ ಮೇಯರ್‌ ಅವರ ಹೆಸರು ಸೇರಿಸುವ ಸಂಬಂಧ ಶಿಷ್ಟಾಚಾರ ನಿಯಮದಲ್ಲಿ ಅವಕಾಶವಿದ್ದರೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಮೇಯರ್‌ ಕೆ.ಗೌತಮ್‌ ಕುಮಾರ್‌ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next