Advertisement
ಕಾಂಗ್ರಸ್, ಬಿಜೆಪಿ ಉಭಯ ನಾಯಕರ ಪಿಂಪ್, ವೇಶ್ಯೆ ಪದ ಬಳಕೆ ಆರೋಪ ಪ್ರತ್ಯಾರೋಪ ಹಿನ್ನೆಲೆಯ ಟಾಕ್ ವಾರ್ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಮ್ಮ ಪಕ್ಷವಾಗಲೀ, ಅವರ ಪಕ್ಷವಾಗಲಿ ಯಾರೇ ಅಗಿರಲಿ ಟಾಕ ವಾರ್ ಗುಣಮಟ್ಟದಿಂದ ಕೂಡಿರಬೇಕು. ಯಾವತ್ತಿಗೂ ಆ ಪದ ಬಳಕೆ ಸರಿ ಅಲ್ಲ. ಅವರು ಇವರಿಗೆ ಅಂದದ್ದು, ಇವರು ಅವರಿಗೆ ಅಂದದ್ದು ಅವರವರ ಸಂಸ್ಕಾರ ತೋರಿಸುತ್ತದೆ ಎಂದರು.
ಕಳೆದ 2013 ರಲ್ಲಿ ಸರ್ಕಾರದ ಆರ್ಥಿಕ ಕೊರತೆಯ ಹಿನ್ನೆಲೆಯಲ್ಲಿ ರಾಜ್ಯದ 27 ವಸತಿ ಶಾಲೆಗಳನ್ನು ತಡೆ ಹಿಡಿಯಲಾಗಿತ್ತು. ಇದರಲ್ಲಿ ಹನುಮನಾಳ ಬಿಸಿಎಂ ಕಿತ್ತೂರು ರಾಣಿ ಚನ್ನಮ್ಮ ಒಂದು ಈ ಬಗ್ಗೆ ಕಳೆದ ಬೆಳಗಾವಿ ಸುವರ್ಣ ಅಧಿವೇಶನದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ ಪ್ರಸ್ತಾಪಿಸಿದಾಗ ಸಿಂಗಲ್ ಆದೇಶವಾಗಿ ಅಧಿಕೃತ ಮಂಜೂರಿ ಇದಾಗಿದೆ. ಮುಂದಿನ ಜೂನ್ ತಿಂಗಳಿನಿಂದ ವಸತಿ ಶಾಲೆ ಆರಂಭಿಸಲು ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹನುಮನಾಳ ಶಾಲೆಯ ಪಕ್ಕದಲ್ಲಿ 7 ಎಕರೆ ಖಾಸಗಿ ಜಮೀನು ಖರೀದಿಸಲು ನಿರ್ಧರಿಸಲಾಗಿದೆ.