Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಅಧಿಕಾರದಲ್ಲಿರುವ ಸರ್ಕಾರ ನಮ್ಮ ಸಮಾಜದ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂದರು.
Related Articles
Advertisement
ದೈವಜ್ಞ ಸಮಾಜದ ರಾಷ್ಟ್ರೀಯದ ಅಧ್ಯಕ್ಷ ದೆಹಲಿಯ ದಿನಕರ ಬೈಕೇರಿಕರ್ ಮತನಾಡಿ, ನಮ್ಮ ಭಾವನೆಗಳನ್ನು ಮಾಧ್ಯಮದವರು ಸರಕಾರಕ್ಕೆ ತಿಳಿಸಬೇಕು. ಬಂಗಾರ, ವಜ್ರ, ವೈಢೂರ್ಯ ವ್ಯವಹಾರ ಮಾಡ್ತಿವಿ. ನಾವು ಹೆಚ್ಚು ತೆರಿಗೆ ಕಟ್ಟುತ್ತೇವೆ. ನಾವು ಓಬಿಸಿಯಲ್ಲಿದ್ದೇವೆ. ಆಭರಣ ಮಾಡುವ ವಿದ್ಯೆ ನಾವೇ ಕಲಿಯುತ್ತೇವೆ. ಆದರೆ ಸರ್ಕಾರ ನಮ್ಮನ್ನು ನಿರ್ಲಕ್ಷಿಸಿದೆ ಎಂದರು.
ಭಿಕ್ಷೆ ಬೇಡುವುದು ನಮ್ಮ ಸಮಾಜದ ಸ್ವಭಾವವಲ್ಲ. ನಮ್ಮ ಶ್ರಮಕ್ಕೆ ಸರ್ಕಾರವೇ ನೆರವು ನೀಡಬೇಕು ಎಂದರು. ಹಾಲಿ ಬಿಜೆಪಿ ಸರ್ಕಾರ ಹಜಾಮರಿಗೆ ಸೌಕರ್ಯ ನೀಡುತ್ತದೆ. ಪ್ರಾತಿನಿಧ್ಯ ನೀಡುತ್ತದೆ ನಮ್ಮನ್ನು ನಿರ್ಲಕ್ಷಿಸಿದೆ ಎಂದರು.
ನಮ್ಮನ್ನು ಕರ್ನಾಟಕದಲ್ಲಿ ನಿರ್ಲಕ್ಷಿಸಿದೆ. ಮಹಾರಾಷ್ಟ್ರದಲ್ಲಿ ನಮಗೆ ಪ್ರಾತಿನಿಧ್ಯವಿದೆ. ಅಲ್ಲಿನ ಸರ್ಕಾರ ಚೆನ್ನಾಗಿ ನೋಡಿಕೊಳ್ತದೆ. ಹಣ, ಅಧಿಕಾರ, ದೈಹಿಕ ಶಕ್ತಿ ಸಮಾಜಕ್ಕೆ ಬೇಕು. ಇವತ್ತು ಮಂತ್ರಿಗಳ ಜತೆ ನಾಲ್ಕು ಗೂಂಡಾ ಇರ್ತಾರೆ. ಹಾಗಾಗಿ ನಮಗೆ ರಾಜಕೀಯ ಪ್ರಾತಿನಿಧ್ಯ ಬೇಕು. ನಮ್ಮ ಸಮಾಜದ ನಾನಾ ಶಂಕರ್ ಶೇಟ್ ಸಮಾಜಕ್ಕೆ ಉಪಕಾರ ಮಾಡಿದ್ದಾರೆ. ಅವರನ್ನು ಆರ್ಕಿಟೆಕ್ಟ್ ಆಫ್ ಇಂಡಿಯಾ ಎಂದು ಕರೀತಾರೆ. ಆದರೆ ಅವರ ನಂತರ ನಮ್ಮನ್ನ ಸರ್ಕಾರ ನಿರ್ಲಕ್ಷಿಸಿದೆ. ಜುವೆಲರಿ ಪಾರ್ಕ್ ಮಾಡಲಿಲ್ಲ. ಇನ್ನಾದರೂ ಸರ್ಕಾರ ನಮಗೆ ರಾಜಕೀಯ ಪ್ರಾತಿನಿಧ್ಯ ನೀಡಲಿ ಎಂದರು.
ಧಾರವಾಡ ರವಿ ಗಾಂವ್ಕರ್ ಮಾತನಾಡಿ, ನಮಲ್ಲಿ ಸಂಘಟನೆ ಕೊರತೆಯಿದೆ. ನಾವು ಜನಸಂಘದ ಕಾಲದಿಂದ ರಾಜಕೀಯ ಪ್ರೋತ್ಸಾಹದಲ್ಲಿ ಇದ್ದೀವಿ. ರಾಜಕೀಯ ಪಕ್ಷಗಳ ಮುಂದೆ ಹಠ ಮಾಡಿಲ್ಲ. ಇನ್ನು ಜನಸಮೂಹ ಒಟ್ಟಾಗಬೇಕಿದೆ. ಒಟ್ಟಾಗುತ್ತೇವೆ ಎಂದರು.
ಇವತ್ತಿನ ಪತ್ರಿಕಾಗೋಷ್ಠಿ ಯಾವ ಪಕ್ಷದ ವಿರುದ್ಧವಲ್ಲ, ಪರವೂ ಅಲ್ಲ. ಆದರೆ ಬಿಜೆಪಿ ನಮ್ಮನ್ನ ನಿರ್ಲಕ್ಷಿಸಿದೆ. 2008 ರಲ್ಲಿ ಸಿಟ್ಟಿಂಗ್ ಎಂಎಲ್‌ಎ ಗಂಗಾಧರ ಭಟರನ್ನು ನಿರ್ಲಕ್ಷಿಸಿದೆ. ಅವರಿಗೆ ಟಿಕೆಟ್ ತಪ್ಪಿಸಲು ಕಾರಣವೇ ಇರಲಿಲ್ಲ. ಎಂಎಲ್‌ಸಿ ಚುನಾವಣೆಯಲ್ಲಿ ನಮ್ಮನ್ನು ನಿರ್ಲಕ್ಷಿಸಿದೆ. ಮುಂದೆ ಯಾವ ರಾಜಕೀಯ ಪಕ್ಷ ನಮಗೆ ಪ್ರಾತಿನಿಧ್ಯ ಕೊಡ್ತಾರೋ ಅವರ ಜೊತೆ ಇರ್ತೇವೆ. ಕಾಂಗ್ರೆಸ್ ಬಿಂಬಾ ರಾಯ್ಕರ್‌ಗೆ ಶಾಸಕರನ್ನು ಮಾಡಿತ್ತು. ಆದರೆ ಬಿಜೆಪಿ ಗಂಗಾಧರ ಭಟ್ಟರನ್ನು ನಿರ್ಲಕ್ಷಿಸಿತು ಎಂದು ವಿಜಯ್ ವರ್ಣೇಕರ್ ಹೇಳಿದರು.
ಬಿಜೆಪಿ ಬ್ರಾಂಡ್ ಆಗಿದ್ದೆವು. ಈಗ ಇದನ್ನು ಮರು ಪರಿಶೀಲನೆ ಮಾಡ್ತೇವೆ. ದೇವರಾಜು ಅರಸು ನಮ್ಮನ್ನ ಹಿಂದುಳಿದ ವರ್ಗಕ್ಕೆ ಸೇರಿಸಿದರು. ನಾವು ಸೌಮ್ಯವಾದಿಗಳು. ಇನ್ನು ಮುಂದೆ ಬದಲಾವಣೆ ತರುತ್ತೇವೆ ಎಂದರು. ಮಂಗಳೂರು, ಕೇರಳ, ಗೋವಾ ದೈವಜ್ಞ ಸಮಾಜದ ಮೋಹನ್ ಶೇಟ್, ಉದಯ ರಾಯ್ಕರ್, ಸುಧಾಕರ ಶೇಟ್, ಹಾಗೂ ಇತರೆ ಮುಖಂಡರು ಇದ್ದರು.