ಆಲೂರು: ಇತ್ತೀಚೆಗೆ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಪ್ರಜಾಧ್ವನಿ ಸಮಾವೇಶ ಅತ್ಯಂತ ಯಶಸ್ವಿಯಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕೂಡ ನಾವ್ಯಾರಿಗೂ ಕಮ್ಮಿಯಿಲ್ಲ ಅಂತ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ತೋರಲು ಮುಂದಾಗಿದೆ. ಉಭಯ ಪಕ್ಷದವರು ಜನ ಸಾಗರವನ್ನೇ ಸೃಷ್ಟಿಸಿ ಪಕ್ಷದ ಪರ ಅಲೆ ಏಳಿಸಲು ಸಜ್ಜಾಗಿದ್ದಾರೆ.
ಈ ಹಿಂದೆ 2018ರ ಚುನಾವಣೆ ವೇಳೆ ಅಂದಿನ ಸಿಎಂ ಬಿ.ಎಸ್ .ಯಡಿಯೂರಪ್ಪರವರು ಚುನಾವಣೆ ಪ್ರಚಾರಕ್ಕೆಂದು ಹೆಲಿಕಾಪ್ಟರ್ ಮೂಲಕ ಆಲೂರಿಗೆ ಬಂದಿದ್ದರು. ನಾರ್ವೆ ಸೋಮಶೇಖರ್ ಬಿಜೆಪಿ ಪಕ್ಷದಿಂದ ಸ್ಪರ್ಧಿ ಸಿ ದ್ದರು. ಆಗ ಸುಮಾರು 3000 ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣೆಯಲ್ಲಿ ನಾರ್ವೆ ಸೋಮ ಶೇಖರ್ ಅವರಿಗೆ ನಿರೀಕ್ಷಿತ ಮತಗಳು ಲಭಿಸಿತ್ತು.
ಮತ್ತೆ ಜೆಡಿಎಸ್ ಗೆಲುವಿನ ವಿಶ್ವಾಸ: ಇತ್ತೀಚೆಗೆ ಫೆ.28ರಂದು ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ ಯಶಸ್ವಿಯಾ ಗಿತ್ತು. ಸಮಾವೇಶಕ್ಕೆ ಅಪಾರ ಜನಸಂಖ್ಯೆಯೂ ಹರಿದು ಬಂದಿತ್ತು. ಈ ಬೆನ್ನಲ್ಲೇ ಇದೀಗ ಆಲೂರು-ಸಕಲೇಶಪುರ ಕ್ಷೇತ್ರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕರೆ ತಂದು ಕಾರ್ಯಕರ್ತರ ಸಭೆ ನಡೆಸಲು ಶಾಸಕ ಎಚ್.ಕೆ.ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಜೆಡಿಎಸ್ ಅಧ್ಯಕ್ಷ ಮಂಜೇಗೌಡ ಮಾತನಾಡಿ, ತಾಲೂಕಿನಲ್ಲಿ ದೇವೇಗೌಡ, ರೇವಣ್ಣ ಅವ ರ ಆಶೀರ್ವಾದದಿಂದ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕುಮಾರ ಸ್ವಾಮಿ ಅವರನ್ನು ಆಲೂರಿಗೆ ಕರೆತಂದು ಸುಮಾರು ಹತ್ತು ಹನ್ನೆರಡು ಸಾವಿರ ಜನ ಸೇರಿಸಿ ಕಾರ್ಯಕ್ರಮ ಮಾಡಲಾಗುವುದು. ಜನತೆ ಅಭಿವೃದ್ಧಿಗೆ ಮತ ನೀಡುತ್ತಾರೆ. ಕುಮಾರಸ್ವಾಮಿ ನಾಲ್ಕನೇ ಬಾರಿ ನಿಶ್ಚಿತವಾಗಿ ಗೆಲುವು ಸಾಧಿಸಲಿದ್ದಾರೆ ಎಂದರು.
ವಿಜಯೇಂದ್ರ ಸಮಾವೇಶದ ಕೇಂದ್ರ ಬಿಂದು: ಇತ್ತ ಬಿಜೆಪಿ ಕೂಡ ಈ ಬಾರಿ ಕಮಲ ಅರಳಿಸುವ ಸಲು ವಾಗಿ ತಾಲೂಕು ಕೇಂದ್ರದಲ್ಲಿ ಬಿ. ವೈ. ವಿಜಯೇಂದ್ರ ಅವರನ್ನು ಕರೆ ತಂದು ಕನಿಷ್ಠ 20 ಸಾವಿರ ಕಾರ್ಯಕರ್ತರನ್ನು ಸೇರಿಸಿ ದೊಡ್ಡ ಮಟ್ಟದಲ್ಲಿ ಬಿಜೆಪಿ ಸಮಾವೇಶ ಮಾಡಲು ಮುಂದಾಗಿದೆ ಎನ್ನಲಾಗಿದೆ.
ಬಿಜೆಪಿ ಸುನಾಮಿ ಅಲೆ ಏಳುತ್ತಾ?: ಜಿಲ್ಲಾ ಬಿಜೆಪಿ ಯುವ ಮೊರ್ಚಾ ಅಧ್ಯಕ್ಷ ಅನೂಪ್ ಜಯರಾಜ್ ಮೆಣಸಮಕ್ಕಿ ಮಾತನಾಡಿ, ಆಲೂರು-ಸಕಲೇಶಪುರ ಕ್ಷೇತ್ರದಲ್ಲಿ ಈ ಹಿಂದೆ ಎರಡು ಬಾರಿ ಬಿ.ಬಿ.ಶಿವಪ್ಪ ಅವರು ಗೆಲುವು ಪಡೆದಿದ್ದರು. ಕಳೆದ ಬಾರಿ ಅಲ್ಪ ಮತಗಳ ಅಂತರದಲ್ಲಿ ನಾರ್ವೆ ಸೋಮಶೇಖರ್ ಸೋಲು ಅನುಭವಿಸಿದ್ದರು. ಅದರೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಅದ್ದರಿಂದ ಚುನಾವಣೆ ಹಿನ್ನೆಲೆ ರಾಜ್ಯ ಹಾಗೂ ಕೇಂದ್ರದ ನಾಯಕರನ್ನು ಕರೆ ತಂದು ದೊಡ್ಡ ಮಟ್ಟದಲ್ಲಿ ಸಮಾವೇಶ ಮಾಡಿ ಬಿಜೆಪಿ ಸುನಾಮಿ ಅಲೆ ಎದುರು ವಿಪಕ್ಷಗಳು ಛಿದ್ರವಾಗಲಿದೆ ಎಂದು ತಿಳಿಸಿದರು.
-ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ