Advertisement
ನಮ್ಮ ಪಕ್ಷವೇ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ ಎಂದು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಬೀಗುತ್ತಿವೆ.ಅಧಿಕಾರದ ಗದ್ದುಗೆ ಹಿಡಿಯಲು ಬಿಎಸ್‌ಪಿ ಹಾಗೂ ಪಕ್ಷೇತರಸದಸ್ಯರನ್ನು ಸೆಳೆಯಲು ಮೂರು ಪಕ್ಷಗಳು ನಿರತವಾಗಿವೆ. ಗ್ರಾಮ ಪಂಚಾಯಿತಿಯ ಆಡಳಿತದ ಚುಕ್ಕಾಣಿ ಹಿಡಿಯಲು ಇನ್ನಿಲ್ಲದ ಕಸರತ್ತು ಆರಂಭಿಸಿವೆ.
Related Articles
Advertisement
ಬಹುತೇಕ ಕಡೆ ಮೈತ್ರಿ: ಮೇಲುಕೋಟೆ, ಕೆ.ಆರ್.ಪೇಟೆ ತಾಲೂಕುಗಳ ಕೆಲವು ಗ್ರಾಪಂಗಳಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಾಗಿದೆ. ಅದರಂತೆ ಕೆಲಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿವೆ.ಸುಲಭ ಗೆಲುವಿಗೆ ರಹದಾರಿ: ಹೆಚ್ಚು ಗ್ರಾಮಪಂಚಾಯಿತಿಗಳಲ್ಲಿ ತಮ್ಮ ಬೆಂಬಲಿತ ಸದಸ್ಯರ ಮೂಲಕಅಧಿಕಾರ ಹಿಡಿದರೆ, ಮುಂದಿನ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಹೆಚ್ಚು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಮೂರು ಪಕ್ಷಗಳಲ್ಲಿನಡೆಯುತ್ತಿದೆ. ಅಲ್ಲದೆ, ಮುಂದಿನ ವಿಧಾನಸಭೆ ಚುನಾವಣೆಗೂ ಇದು ಸಹಕಾರಿಯಾಗಲಿದೆ ಎಂಬುದು ನಾಯಕರ ನಿರೀಕ್ಷೆಯಾಗಿದೆ.
ಆಯ್ಕೆಯಾದವರ ಮೀಸಲಾತಿ : ಜಿಲ್ಲೆಯಲ್ಲಿ ಒಟ್ಟು 3792 ಸದಸ್ಯರು ಆಯ್ಕೆಯಾಗಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿ 563, ಪರಿಶಿಷ್ಟ ಪಂಗಡ 230, ಹಿಂದುಳಿದ ವರ್ಗ (ಎ) 821,ಹಿಂದುಳಿದ ವರ್ಗ(ಬಿ) 207 ಹಾಗೂ ಸಾಮಾನ್ಯ1971 ಮಂದಿ ಆಯ್ಕೆಯಾಗಿದ್ದಾರೆ. ಇದರಲ್ಲಿಪುರುಷ ಸದಸ್ಯರು 1841 ಹಾಗೂ ಮಹಿಳಾಸದಸ್ಯರು 1951 ಮಂದಿ ಆಯ್ಕೆಯಾಗಿದ್ದಾರೆ.
ಜಿಲ್ಲೆಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿದ್ದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಡುವೆ ಬಿಜೆಪಿ ಈ ಬಾರಿ ಕಮಾಲ್ ಮಾಡಿದೆ. 3792 ಸದಸ್ಯ ಸ್ಥಾನಗಳ ಪೈಕಿ ಕೆ.ಆರ್.ಪೇಟೆ, ಮದ್ದೂರು ಸೇರಿದಂತೆ 4 ತಾಲೂಕುಗಳಲ್ಲಿ ಸುಮಾರು 800ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ, ಗ್ರಾಪಂ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದೆ. – ಕೆ.ಜೆ.ವಿಜಯ್‌ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ
ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದು, ಸುಮಾರು 1600ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುತೇಕ ಗ್ರಾಪಂಗಳಲ್ಲಿ ಅಧಿಕಾರ ಹಿಡಿಯಲಿದೆ. ಜಿಲ್ಲೆಯ ಮತದಾರರು ಕಾಂಗ್ರೆಸ್ ಹಿಡಿದಿದ್ದಾರೆ ಎಂಬುದು ಸಾಭೀತಾಗಿದೆ. – ಸಿ.ಡಿ.ಗಂಗಾಧರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಜಿಲ್ಲೆಯಲ್ಲಿ ಜೆಡಿಎಸ್ ಭದ್ರಕೋಟೆ ಎಂಬುದು ಮತ್ತೂಮ್ಮೆ ಸಾಭೀತಾಗಿದೆ. ಎಲ್ಲ ತಾಲೂಕುಗಳಲ್ಲಿ ಸುಮಾರು 155ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಪಕ್ಷದ ಬೆಂಬಲಿತರೇ ಹೆಚ್ಚು ಗೆಲುವು ಸಾಧಿಸಿದ್ದು, ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲಿದ್ದೇವೆ. – ಡಿ.ರಮೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ
-ಎಚ್.ಶಿವರಾಜು