Advertisement

ಗದ್ದುಗೆ ಹಿಡಿಯಲು ಪಕ್ಷಗಳ ಪೈಪೋಟಿ

07:22 PM Jan 01, 2021 | Team Udayavani |

ತುಮಕೂರು: ಕಲ್ಪತರು ನಾಡಿನಲ್ಲಿ ಗ್ರಾಪಂ ಫೈಟ್‌ ಮುಗಿದಿದೆ. ಗೆದ್ದಿರುವ ರಾಜಕೀಯ ಪಕ್ಷಗಳಕಾರ್ಯಕರ್ತರಿಗೆ ಬೇಡಿಕೆ ಹೆಚ್ಚಾಗಿದೆ ಗ್ರಾಪಂಗಲಅಧಿಕಾರ ಗದ್ದುಗೆ ಹಿಡಿಯಲು ಪಕ್ಷದ ಮುಖಂಡರು ತಂತ್ರಗಾರಿಕೆ ರೂಪಿಸಲು ಮುಂದಾಗಿದ್ದಾರೆ.

Advertisement

ಜಿಲ್ಲೆಯ 329 ಗ್ರಾಪಂಗಳ ಸಾರ್ವತ್ರಿಕ ಚುನಾವಣಾ ಮತ ಎಣಿಕೆ ಮುಕ್ತಾಯಗೊಂಡಿದೆ. ಅಂತಿಮವಾಗಿ5262 ಸದಸ್ಯರು ಗ್ರಾಪಂಗಳಿಗೆ ಆಯ್ಕೆಯಾಗಿದ್ದಾರೆ. ಪಕ್ಷ ರಹಿತವಾಗಿರುವ ಗ್ರಾಪಂ ಚುನಾವಣೆಯಲ್ಲಿ ಪಕ್ಷಗಳ ಬೆಂಬಲಿಗರು ಚುನಾವಣೆಗೆ ನಿಂತು ಗೆದ್ದಿರುವ ಪರಿಣಾಮ ಈಗ ಪಂಚಾಯತ್‌ಗಳ ಗದ್ದುಗೆ ಹಿಡಿಯಲು ಮೂರು ರಾಜಕೀಯ ಪಕ್ಷಗಳಿಂದ ಸದಸ್ಯರ ಕುದುರೆ ವ್ಯಾಪಾರ ಪ್ರಾರಂಭವಾಗಿದೆ.

ಗೆದ್ದಿರುವ ಅಭ್ಯರ್ಥಿಗಳಲ್ಲಿ ಕೆಲವರು ಇನ್ನೂ ಯಾವ ಪಕ್ಷದ ಬೆಂಬಲಿಗರು ಎಂದು ಹೇಳುತ್ತಿಲ್ಲ. ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಪಕ್ಷಗಳ ಮುಖಂಡರು ಅವರುನಮ್ಮ ಪಕ್ಷದವರು ಎಂದು ಹೇಳಿಕೊಳ್ಳುತ್ತಿದ್ದಾರೆ.ಪಕ್ಷಗಳ ನಾಯಕರು ತಮ್ಮ ಪಕ್ಷದ ಬೆಂಬಲಿಗರುಇಷ್ಟು ಸದಸ್ಯರು ಗೆದ್ದಿದ್ದಾರೆ ಎಂದು ಹೇಳುತ್ತಿದ್ದಾರೆ.ಈಗ ಮೂರು ಪಕ್ಷಗಳವರು ಗ್ರಾಪಂ ಅಧ್ಯಕ್ಷ.ಉಪಾಧ್ಯಕ್ಷರ ಮೇಲೆ ಕಣ್ಣಿಟ್ಟಿದ್ದು, ಅದಕ್ಕೆಪೂರಕವಾಗಿ ಸದಸ್ಯರ ಬಲಬೇಕಾಗಿದೆ. ಮೀಸಲಾತಿಗೆಅನುಗುಣವಾಗಿ ತಮ್ಮ ಪಕ್ಷದ ಬೆಂಬಲಿಗರನ್ನುಅಧ್ಯಕ್ಷರನ್ನಾಗಿ ಮಾಡಿದರೆ ಆ ಗ್ರಾಪಂ ನಮ್ಮ ಪಕ್ಷದವಶಕ್ಕೆ ಪಡೆಯಬಹುದು ಎಂದು ಪಕ್ಷಗಳು ಪಕ್ಷಗಳು ರಣ ತಂತ್ರ ರೂಪಿಸುತ್ತಿದ್ದಾರೆ.

ರಾಜಕೀಯ ಪ್ರಮುಖರ ಆಶೀರ್ವಾದ ಗ್ರಾಪಂನಲ್ಲಿ ಗೆದ್ದಿರುವ ಸದಸ್ಯರು ತಮ್ಮ ಪಕ್ಷಗಳಮುಖಂಡರನ್ನು ಭೇಟಿ ಮಾಡಿ ತಮ್ಮ ಮುಖಂಡರಆಶೀರ್ವಾದ ಪಡೆಯುತ್ತಿದ್ದದ್ದು ಕಂಡು ಬಂದಿತು.ಇನ್ನು ಕಲವರು ಮೂರು ಪಕ್ಷಗಳ ಬೆಂಬಲಿಗರು ಅಲ್ಲದೇ ಅನೇಕರು ಪಕ್ಷೇತರವಾಗಿ ಗೆಲುವುಸಾಧಿಸಿದ್ದಾರೆ ಅಂತಹ ಸದಸ್ಯರಿಗೆ ಬಾರೀ ಬೇಡಿಕೆ ಬಂದಿದೆ.ಕೆಲವು ಸದಸ್ಯರು ಇಂದಿಗೂ ತಾವು ಯಾವ ಪಕ್ಷದ ಬೆಂಬಲಿಗ ಎಂದು ಹೇಳಿಕೊಳ್ಳುತ್ತಿಲ್ಲ. ಕಾದುನೋಡು ವ ತಂತ್ರ ಅನುಸರಿಸುತ್ತಿದ್ದಾರೆ. ಗ್ರಾಪಂ ಗಾದಿಗೆ 5262 ಸದಸ್ಯರ ಆಯ್ಕೆ: ಜಿಲ್ಲೆಯ 329 ಗ್ರಾಪಂಗಳ ಸಾರ್ವತ್ರಿಕ ಚುನಾವಣಾ ಮತ ಎಣಿಕೆಯು ಶಾಂತಿಯುತವಾಗಿ ಮುಕ್ತಾಯ ಗೊಂಡಿದ್ದು. ಅಂತಿಮವಾಗಿ 5,262 ಸದಸ್ಯರು ಆಯ್ಕೆಯಾಗಿದ್ದು ಇನ್ನು ಪಂಚಾಯತ್‌ಗಳ ಅಧಿಕಾರ ಗದ್ದುಗೆಯತ್ತ ಮುಖಮಾಡಿದ್ದಾರೆ.

ತುಮಕೂರಿನ 41 ಗ್ರಾಪಂಗಳ 13 ಸದಸ್ಯರು ಅವಿರೊಧವಾಗಿ ಹಾಗೂ ಮತದಾನದ ನಂತರ 733ಸದಸ್ಯರು ಸೇರಿದಂತೆ 746 ಸದಸ್ಯ ಸ್ಥಾನಗಳಲ್ಲಿ ಗೆಲುವುಸಾಧಿಸಿದ್ದಾರೆ.ಕುಣಿಗಲ್‌ ತಾಲೂಕಿನ 36 ಗ್ರಾಪಂಗಳಲ್ಲಿಅವಿರೊಧವಾಗಿ 37 ಸದಸ್ಯರು. ಮತದಾನದ ನಂತರ ಆಯ್ಕೆಯಾದ 459 ಸದಸ್ಯರು ಸೇರಿದಂತೆ 496 ಸದಸ್ಯ ಸ್ಥಾನ ಪಡೆದಿದ್ದಾರೆ. ಗುಬ್ಬಿ ತಾಲೂಕಿನ 34 ಗ್ರಾಪಂಗಳಲ್ಲಿಅವಿರೊಧವಾಗಿ 65 ಸದಸ್ಯರು, ಮತದಾನದ ಬಳಿಕ 525 ಸದಸ್ಯರು ಸೇರಿದಂತೆ 590 ಸ್ಥಾನ ತುಂಬಿದ್ದು, 36ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿವೆ.

Advertisement

ಕೊರಟಗೆರೆ ತಾಲೂಕಿನ 24 ಗ್ರಾಪಂಗಳ 25 ಸದಸ್ಯರು ಅವಿರೊಧವಾಗಿ ಆಯ್ಕೆ ಯಾಗಿದ್ದರು. 367 ಸದಸ್ಯರು ಸೇರಿದಂತೆ 392 ಸದಸ್ಯರು ಚುನಾವಣೆಯಲ್ಲಿ ಆಯ್ಕೆಯಾಗಿವೆ. ಪಾವಗಡ 33 ಗ್ರಾಪಂಗಳ 16 ಸದಸ್ಯರು ಅವಿರೊಧವಾಗಿ. ಮತ್ತು 510 ಸದಸ್ಯರು ಚುನಾವಣೆಯಿಂದಒಟ್ಟು 526 ಸದಸ್ಯ ಸ್ಥಾನ ಗೆದ್ದಿವೆ. ಮಧುಗಿರಿಯಲ್ಲಿ39 ಗ್ರಾಪಂಗಳ 15 ಸದಸ್ಯರು ಅವಿರೊಧವಾಗಿ.ಚುನಾವಣೆ ಬಳಿಕ 600 ಸದಸ್ಯರು ಒಟ್ಟು 615 ಸದಸ್ಯರು ಆಯ್ಕೆಯಾಗಿದ್ದಾರೆ. ಶಿರಾದಲ್ಲಿ 42ಗ್ರಾಪಂಗಳ 26 ಅವಿರೊಧವಾಗಿ. 618 ಸದಸ್ಯರು ಸೇರಿದಂತೆ 644 ಸದಸ್ಯರು ಚುನಾವಣೆಯಲ್ಲಿ ವಿಜೇತರಾಗಿದ್ದು, 16 ನಾಮಪತ್ರ ಸಲ್ಲಿಸದೇ ಹಾಗೇ ಉಳಿದಿದೆ. ತಿಪಟೂರಿನಲ್ಲಿ 26 ಗ್ರಾಪಂಗಳಕ್ಕು ಅವಿರೊಧವಾಗಿ 23, ಚುನಾವಣೆ ಬಳಿಕ 382 ಒಟ್ಟು 405 ಸದಸ್ಯ ಸ್ಥಾನಗಳು ಗೆದ್ದಿವೆ.

ತುರುವೇಕೆರೆಯ 27 ಗ್ರಾಪಂಗಳಲ್ಲಿ ಅವಿರೋಧವಾಗಿ 31. ಚುನಾವಣೆ ಬಳಿಕ 369 ಸದಸ್ಯರು ಸೇರಿ ಒಟ್ಟು 400 ಸ್ಥಾನಗಳು ವಿಜೇತರಾಗಿದ್ದಾರೆ. ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ 27 ಗ್ರಾಪಂಗಳಲ್ಲಿ ಅವಿರೋಧವಾಗಿ 21 ಸದಸ್ಯರು, ಚುನಾವಣೆ ಬಳಿಕ 427 ಸದಸ್ಯರು ಸೇರಿದಂತೆ 448 ಸದಸ್ಯ ಸ್ಥಾನ ಗಟ್ಟಿಯಾಗಿಸಿಕೊಂಡಿದ್ದಾರೆ. ಜಿಲ್ಲಾದ್ಯಂತಒಟ್ಟು 5329 ಸದಸ್ಯ ಸ್ಥಾನಗಳಿಗೆ ಅವಿರೋಧವಾಗಿ272, ಚುನಾವಣೆ ಬಳಿಕ 4990 ಸದಸ್ಯರು ಆಯ್ಕೆಯಾಗಿದ್ದು. 67 ನಾಮಪತ್ರ ಸಲ್ಲಿಕೆಯಾಗಿಲ್ಲ.

ಗ್ರಾಮೀಣ ಪ್ರದೇಶದಲ್ಲಿ ಜೆಡಿಎಸ್‌ ಮೊದಲಿನಿಂದಲೂ ತನ್ನ ನೆಲೆ ಕಂಡುಕೊಂಡಿದೆ. ಅದುಈ ಗ್ರಾಪಂ ಚುನಾವಣೆಯಲ್ಲಿಯೂ ಮುಂದುವರಿದಿದೆ. ನಮ್ಮ ಪಕ್ಷದ ಬೆಂಬಲಿಗರು ಹೆಚ್ಚುಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ ಹೆಚ್ಚು ಗ್ರಾಪಂಗಳಲ್ಲಿ ನಾವು ಅಧಿಕಾರ ಹಿಡಿಯಲು ಪ್ರಯತ್ನ ಮಾಡುತ್ತೇವೆ. ಆರ್‌.ಸಿ.ಆಂಜನಪ್ಪ, ಜೆಡಿಎಸ್‌ ಜಿಲ್ಲಾಧ್ಯಕ್ಷ

ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚು ಸಂಖ್ಯೆಯಲ್ಲಿ ಗೆಲುವುಸಾಧಿಸಿದ್ದಾರೆ. ವಾಸ್ತವವಾಗಿ ಕೆಲವು ಕ್ಷೇತ್ರಗಳನ್ನು ಬಿಟ್ಟು ಜಿಲ್ಲೆಯ ಬಹುತ್ತೇಕ ತಾಲೂಕುಗಳಲ್ಲಿ ಕಾಂಗ್ರೆಸ್‌ ಬೆಂಬಲಿಗರು ಹೆಚ್ಚು ಸ್ಥಾನ ಪಡೆದಿದ್ದಾರೆ. ಮುಂದೆ ನಮ್ಮ ಪಕ್ಷದ ಸಂಘಟನೆಗೆ ಇದು ಸಹಾಯವಾಗಲಿದೆ. ಆರ್‌.ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ಗ್ರಾಪಂ ಚುನಾವಣೆಯಲ್ಲಿ ಉತ್ತಮ ಫ‌ಲಿತಾಂಶ ಬಂದಿದೆ. ಈ ಚುನಾವಣೆಯ ಮೂಲಕ ಬಿಜೆಪಿ ಗ್ರಾಮೀಣ ಪ್ರದೇಶದಲ್ಲಿಯೂ ತನ್ನ ಶಕ್ತಿ ಇರುವುದನ್ನು ದೃಢಪಡಿಸಿದೆ. ಪ್ರಸ್ತುತ ವರದಿಗಳಂತೆ ಶೇ.60 ಕ್ಕೂ ಹೆಚ್ಚು ಸ್ಥಾನಗಳಲ್ಲಿ ನಮ್ಮ ಕಾರ್ಯಕರ್ತರು ಗೆದ್ದಿದ್ದಾರೆ. ಎಸ್‌.ಶಿವಪ್ರಸಾದ್‌. ಬಿಜೆಪಿ ರಾಜ್ಯ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ

 

ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next