Advertisement
ದೇಶದಲ್ಲಿ ಎ. 29ರ ಮತದಾನ ದೊಂದಿಗೆ ಒಟ್ಟು ನಾಲ್ಕು ಹಂತದ ಚುನಾ ವಣೆ ಮುಗಿಯಲಿದ್ದು ಇನ್ನೂ ಮೂರು ಹಂತದ ಚುನಾವಣೆಗಳು ಬಾಕಿ ಇದೆ. ಮೇ 23 ರಂದು ಮತ ಎಣಿಕೆ ನಡೆಯಲಿದೆ. ದ.ಕ., ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮತದಾನ ಮುಗಿದು 35 ದಿನಗಳ ಬಳಿಕ ಮತ ಎಣಿಕೆ ನಡೆಯುತ್ತಿದೆ.
ಮತ ಎಣಿಕೆಗೆ ಇನ್ನೂ ಬಹಳಷ್ಟು ದಿನಗಳು ಇರುವುದರಿಂದ ಚುನಾವಣಾ ಫಲಿತಾಂಶದ ಬಗ್ಗೆ ಮತದಾರರಲ್ಲಿ ಸದ್ಯ ಕುತೂಹಲ ತಣ್ಣಗಾಗತೊಡಗಿದೆ. ಚುನಾವಣಾ ಸಂದರ್ಭದಲ್ಲಿ ಸಾರ್ವಜನಿಕ ವಲಯದಲ್ಲಿ ಫಲಿತಾಂಶದ ಬಗ್ಗೆ ಕೇಳಿಬರುತ್ತಿದ್ದ ಚರ್ಚೆಗಳು ಕಮ್ಮಿಯಾಗಿದೆ. ಮಕ್ಕಳ ಶಿಕ್ಷಣ, ಶುಭ ಸಮಾರಂಭಗಳು, ನೀರಿನ ಸಮಸ್ಯೆ ನಿರ್ವಹಣೆಯಲ್ಲಿ ಮತದಾರರು ಹೆಚ್ಚು ಮಗ್ನರಾಗಿದ್ದಾರೆ.
Related Articles
ದೇಶಕ್ಕೆ ಸ್ವಾತಂತ್ರ ಲಭಿಸಿದ ಬಳಿಕ 4 ವರ್ಷಗಳ ಬಳಿಕ ಪ್ರಥಮ ಸಾರ್ವತ್ರಿಕ ಚುನಾವಣೆ ನೆರವೇರಿತ್ತು . ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಜತೆಯಾಗಿ ನಡೆದಿದ್ದ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲು 4 ತಿಂಗಳ ತಗಲಿತ್ತು. 1951ರ ಅ.25 ರಂದು ಆರಂಭಗೊಂಡು 1952 ರ ಫೆ.21ರಂದು ಪೂರ್ಣಗೊಂಡಿತ್ತು. ಆಗ ಕಾಸರಗೋಡು ಹಾಗೂ ಅವಿಭಜಿತ ದ.ಕ. ಜಿಲ್ಲೆ ಮದ್ರಾಸ್ ಪ್ರಾಂತ್ಯಕ್ಕೆ ಸೇರ್ಪಡೆಯಾಗಿತ್ತು.
Advertisement