ಶಿವಮೊಗ್ಗ: ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿಯಯಾವುದೇ ನಾಯಕ, ಸಚಿವ, ಮುಖ್ಯಮಂತ್ರಿ ಅಥವಾಪದಾಧಿ ಕಾರಿಗಳ್ಳೋ ಯಾರಾದ್ರೂ ಒಬ್ಬರು ಇದ್ದಾರೆಎಂಬ ಬಗ್ಗೆ ಪ್ರತಿಪಕ್ಷ ನಾಯಕರು ಒಂದುಪೀಸ್ ದಾಖಲೆ ತೋರಿಸಲಿ ಎಂದು ಸಚಿವಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ.
ನಗರದಲ್ಲಿ ಶನಿವಾರಸುದ್ದಿಗಾರರೊಂದಿಗೆ ಮಾತನಾಡಿದಅವರು, ಕಾಂಗ್ರೆಸ್‌ನವರಿಗೆ ಏನೂಉದ್ಯೋಗವಿಲ್ಲ. ಉದ್ಯೋಗ ಇಲ್ಲದಿರುವುದಕ್ಕೆಬಿಟ್ ಕಾಯಿನ್ ಪ್ರಕರಣ ಎತ್ತಿಕೊಂಡಿದ್ದಾರೆ ಎಂದುಟೀಕಿಸಿದರು.ಬರೀ ಪುಕ್ಕಟೆ ನಮ್ಮ ಬಳಿ ದಾಖಲೆ ಇದೆ. ನಾವುಬಿಡುಗಡೆ ಮಾಡುತ್ತೇವೆ. ಈ ರೀತಿ ಹೇಳಿ ಹೇಳಿಅವರು ಅ ಧಿಕಾರ ಕಳೆದುಕೊಂಡರು.
ಗೌರವಕಳೆದುಕೊಳ್ಳುತ್ತಿದ್ದಾರೆ. ಬಿಟ್ ಕಾಯಿನ್ ಪ್ರಕರಣ ಬಗ್ಗೆಯಾವ ಮುಲಾಜಿಲ್ಲ. ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್,ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಅವರು ಬಾಯಿಚಪಲಕ್ಕೆ ಬೇಕಾದದ್ದನ್ನು ಹೇಳುತ್ತಿದ್ದಾರೆ. ಈ ಬಗ್ಗೆ ಒಂದುದಾಖಲೆ ತೋರಿಸಿದರೆ ನಾವು ನಿಮ್ಮನ್ನು ಮೆಚ್ಚುತ್ತೇವೆಎಂದರು.ಕಾಂಗ್ರೆಸ್‌ನವರು ಖಾಲಿ ಡಬ್ಟಾ ಬಾರಿಸಿದ ಹಾಗೆ ಬಾರಿಸುತ್ತಿದ್ದಾರೆ.
ಬರೀ ಸಿಕ್ಕಾಪಟ್ಟೆ ಶಬ್ದ ಅಷ್ಟೇ. ತುಂಬಿದಕೊಡ ಯಾವಾಗಲೂ ಶಬ್ದ ಮಾಡಲ್ಲ. ಸುಮ್ಮನೆ ಶಬ್ದಮಾಡ್ತಿದ್ದಾರೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಇಂತಹವರುಇದ್ದಾರೆಂದು ಸ್ಪಷ್ಟವಾಗಿ ಹೇಳಿದರೆ ಖಂಡಿತಾ ಅವರವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.ವಿಧಾನ ಪರಿಷತ್ ಚುನಾವಣೆ ಬಂದಿದೆ.
25ಕ್ಷೇತ್ರದಲ್ಲಿ ಈ ಚುನಾವಣೆ ನಡೆಯಲಿದ್ದು, ಬಿಜೆಪಿರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಈಗಾಗಲೇಅಭ್ಯರ್ಥಿಗಳ ಪಟ್ಟಿಯನ್ನು ಕೋರ್ ಕಮಿಟಿಗೆ ನೀಡಿದ್ದಾರೆ.ಈ ಪಟ್ಟಿ ಕೇಂದ್ರ ನಾಯಕರ ಕೈ ಸೇರಲಿದ್ದು, ಇನ್ನೆರಡುದಿನಗಳಲ್ಲಿ ಅಂತಿಮ ಹೆಸರು ಪ್ರಕಟಿಸುವ ನಿರೀಕ್ಷೆ ಇದೆಎಂದರು.