Advertisement
ಆಪ್ ಶೂನ್ಯ ಸಾಧನೆ ತೋರಿದ್ದು, ಆರು ಕಡೆಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ.ಬಹುಮತಕ್ಕೆ ಮೂರು ಸ್ಥಾನಗಳ ಕೊರತೆಇದ್ದರೂ, ಶಾಸಕರು ಹಾಗೂ ಸಂಸದಮತಗಳಗೊಂದಿಗೆ ಬಿಜೆಪಿ ಸತತ ಮೂರನೇಬಾರಿಗೆ ಅಧಿಕಾರಕ್ಕೇರಲು ಯಾವುದೇ ಅಡ್ಡಿಇಲ್ಲ.
Related Articles
Advertisement
ಪಕ್ಷದ ಕೆಳಹಂತದ ಮುಖಂಡರು ಸಹ 35-40ಸ್ಥಾನಗಳಿಗೆ ತಲುಪಬಹುದು ಎಂಬ ಅನಿಸಿಕೆ ವ್ಯಕ್ತಪಡಿಸುತ್ತಿದ್ದರು.2013ರ ಪಾಲಿಕೆ ಚುನಾವಣೆಯಲ್ಲಿಬಿಜೆಪಿ 45 ಸ್ಥಾನಗಳ ಗೆಲುವು ಖಚಿತಎಂಬ ಅಬ್ಬರದ ಪ್ರಚಾರ ನಡೆಸಿತ್ತಾದರೂಅಂತಿಮವಾಗಿ 33 ಸ್ಥಾನಗಳನ್ನು ಗಳಿಸುವಲ್ಲಿಯಶಸ್ವಿಯಾಗಿತ್ತು.
ಅಲ್ಲಿಗೆ ನಿರೀಕ್ಷೆಗಿಂತ12 ಸ್ಥಾನಗಳ ಕೊರತೆ ಅನುಭವಿಸಿತ್ತು.2021ರಲ್ಲಿಯೂ 60 ಸ್ಥಾನ ಗೆಲ್ಲುತ್ತೇವೆಂದುಹೇಳಿಕೊಳ್ಳುತ್ತಿದ್ದರೂ ನಿರೀಕ್ಷೆಗಿಂತ 21 ಸ್ಥಾನಕಡಿಮೆ ಬಂದಿದೆ.ಬಿಜೆಪಿ ಸ್ಮಾರ್ಟ್‌ಸಿಟಿ ಯೋಜನೆಯಕಾಮಗಾರಿ,ಫ್ಲೆ çಓವರ್‌ನಿರ್ಮಾಣ,ರಸ್ತೆಗಳಅಭಿವೃದ್ಧಿ, ಪ್ರತಿ ಮನೆಗೂ ಕುಡಿಯುವನೀರಿನ ಯೋಜನೆ ಹೀಗೆ ವಿವಿಧ ಅಭಿವೃದ್ಧಿಯೋಜನೆಗಳ ವಿಷಯಗಳನ್ನು ಪ್ರಸ್ತಾಪಿಸಿತ್ತು.
ಪಾಲಿಕೆ ಚುನಾವಣೆ ಘೋಷಣೆ ಹಂತಹಾಗೂ ಮತದಾನಕ್ಕೆ ಕೆಲವೇ ದಿನಗಳುಇವೆ ಎನ್ನುವಾಗಲೇ ಕೆಲವೊಂದುರಸ್ತೆಗಳ ದುರಸ್ತಿ, ಫ್ಲೆ çಓವರ್ ನಿರ್ಮಾಣಆರಂಭಿಸುತ್ತೇವೆಂದು ನೆಲ ಅಗೆಯುವಿಕೆಇನ್ನಿತರ ಎಲ್ಲ ಕಾರ್ಯಗಳನ್ನು ಕೈಗೊಂಡಿತ್ತು.ಪಕ್ಷದ ರಾಜ್ಯಾಧ್ಯಕ್ಷ, ಹಲವು ಸಚಿವರು,ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ,ಪಕ್ಷದ ನಾಯಕರು, ಪದಾಧಿಕಾರಿಗಳು ಮನೆಮನೆ ಪ್ರಚಾರ ಕೈಗೊಂಡಿದ್ದರು.
ಇಷ್ಟೆಲ್ಲ ಸರ್ಕಸ್ ನಡುವೆಯೂ ಫಲಿತಾಂಶ ನಿರೀಕ್ಷಿತ ರೀತಿಯಲ್ಲಿ ದೊರೆಯಲಿಲ್ಲಯಾಕೆ ಎಂಬ ಆತ್ಮಾವಲೋಕನಕ್ಕೆ ಬಿಜೆಪಿ ಇಳಿಯಬೇಕಾಗಿದೆ. ಮತ್ತೂಂದೆಡೆಕಾಂಗ್ರೆಸ್ ಅಧಿಕಾರ ಹಿಡಿಯದಿದ್ದರೂ ಸ್ಥಾನ ಗಳಿಕೆಯಲ್ಲಿ ನೆಗೆತ ಕಂಡಿರುವುದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ.
ಅಮರೇಗೌಡ ಗೋನವಾರ