Advertisement

ಒಂದಿಂಚೂ ಭೂಮಿ ಬಿಡೆವು

12:01 AM Jan 19, 2021 | Team Udayavani |

ಬೆಂಗಳೂರು: ನಾಡು, ಗಡಿ, ಭಾಷೆ ವಿಚಾರ ಬಂದಾಗ ಕನ್ನಡಿಗರು ಯಾವತ್ತೂ ಜೇನುಗೂಡು. ಕರುನಾಡಿನ ಈ ವೀರಪರಂಪರೆಯ ಒಗ್ಗಟ್ಟು ಈಗ ರಣಕಹಳೆಯಂತೆ ಮೊಳಗಿದೆ. ಕನ್ನಡಿಗರ ಈ ಒಗ್ಗಟ್ಟಿಗೆ ಕಾರಣ ಅಖಂಡ ಕರುನಾಡಿನ ಬೆಳಗಾವಿಯೆಂಬ ಆಸ್ತಿ. ಮುಂಬಯಿಯಲ್ಲಿ ಕುಳಿತು ಬೆಳಗಾವಿ ವಶಪಡಿಸಿಕೊಳ್ಳುವುದಾಗಿ ಉದ್ಧಟತನದಿಂದ ಮಾತನಾಡಿದ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ವಿರುದ್ಧ ಇಡೀ ನಾಡೇ ಗುಡುಗಿದೆ. ಕವಿ, ರಾಜಕಾರಣಿಗಳು, ಶ್ರೀಸಾಮಾನ್ಯ … ಎಲ್ಲರ ಬಾಯಿಯಲ್ಲೂ ಒಂದೇ ಸಾಲು- “ಬೆಳಗಾವಿ ನಮ್ಮದೇ; ಅದನ್ನು ಕೇಳುವವರಾರು?’

Advertisement

ಉದ್ಧವ್‌ ಹೇಳಿಕೆ ಉದ್ಧಟತನದ್ದು. ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಿಲುವು. ಕರ್ನಾಟಕದ ಒಂದಿಂಚು ಭೂಮಿ ಕೂಡ ಕೊಡುವುದಿಲ್ಲ. ಮಹಾಜನ್‌ ವರದಿ ಅಂತಿಮ ಎಂದು ಮತ್ತೆ ಮತ್ತೆ ಇಂತಹ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಗಡಿ ಜಿÇÉೆಗಳಲ್ಲಿ ಕನ್ನಡಿಗರು – ಮರಾಠಿಗರು ಒಂದೇ ತಾಯಿಯ ಮಕ್ಕಳಂತೆ ಜೀವಿಸುತ್ತಿದ್ದಾರೆ. ಇಂತಹ ಸೌಹಾರ್ದಯುತ ವಾತಾವರಣದಲ್ಲಿ ಮಹಾರಾಷ್ಟ್ರ ಸಿಎಂ ಅಶಾಂತಿ ಮೂಡಿಸುವ ಕೆಲಸ ಮಾಡುವುದು ಗೌರವ ತರುವಂಥದ್ದಲ್ಲ. ಗಡಿಯಲ್ಲಿಯೂ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಇಂತಹ ಹೇಳಿಕೆಗಳು ಕನ್ನಡಿಗರಿಗೆ ಮಾತ್ರವಲ್ಲ, ಎಲ್ಲರಿಗೂ ನೋವು ಮತ್ತು ಆಕ್ರೋಶ ತರುತ್ತವೆ. ಕನ್ನಡ ಪರ ಸಂಘಟನೆಗಳು ಇಂಥ ಹೇಳಿಕೆಗಳಿಗೆ ತಲೆಕೆಡಿಸಿ ಕೊಳ್ಳಬಾರದು.  ನಾವೆಲ್ಲರೂ ಒಟ್ಟಾಗಿ ಒಗ್ಗಟ್ಟಾಗಿರೋಣ. –ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ಮಹಾ ಸಿಎಂ ಖಂಡನೀಯ ಹೇಳಿಕೆ :

ಉದ್ಧವ್‌ ಠಾಕ್ರೆ ಹೇಳಿಕೆ ಖಂಡನೀಯ. ಬೆಳಗಾವಿಯು ಕರ್ನಾಟಕದ ಅವಿ ಭಾಜ್ಯ ಅಂಗ. ಕನ್ನಡಿಗರು ಶಾಂತಿ ಪ್ರಿಯರು, ಸಹನಶೀಲರು, ಆದರೆ ಇದನ್ನು ಕನ್ನಡಿಗರ ದೌರ್ಬಲ್ಯ ಎಂದು ಭಾವಿಸಬೇಡಿ.  ಸಿದ್ದರಾಮಯ್ಯ, ವಿಪಕ್ಷ ನಾಯಕ

ಉದ್ಧವ್‌ ಭಯೋತ್ಪಾದಕ ಹೇಳಿಕೆ :

Advertisement

ಠಾಕ್ರೆ ಹೇಳಿಕೆ ಚೀನದ ವಿಸ್ತರಣವಾದ ವನ್ನು ಧ್ವನಿಸುತ್ತಿದೆ. ಮಹಾರಾಷ್ಟ್ರದ ಪ್ರದೇಶವನ್ನು ಕರ್ನಾಟಕ ಆಕ್ರಮಿಸಿಕೊಂಡಿದೆ ಎಂಬುದು ಭಯೋತ್ಪಾದಕ ಹೇಳಿಕೆಯಂತಿದೆ. ಸರಕಾರ ಈ ಬಗ್ಗೆ ಸ್ಪಷ್ಟ ಸಂದೇಶ ನೀಡಬೇಕು. ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

ಸಾಂಗ್ಲಿ, ಸೊಲ್ಹಾಪುರ ರಾಜ್ಯಕ್ಕೆ :

ಮಹಾರಾಷ್ಟ್ರದಲ್ಲಿರುವ ಸಾಂಗ್ಲಿ, ಸೊಲ್ಹಾಪುರದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವುಗಳನ್ನೂ ರಾಜ್ಯಕ್ಕೆ ಸೇರಿಸಿಕೊಳ್ಳುತ್ತೇವೆ. ಮಹಾ ಜನ ವರದಿಯಲ್ಲಿಯೂ ಈ ಬಗ್ಗೆ ಹಕ್ಕು ಮಂಡಿಸಿದ್ದೇವೆ. ಬಸವರಾಜ ಬೊಮ್ಮಾಯಿ, ಗೃಹ ಸಚಿವ

ರೀತಿ ಮಾತನಾಡ ಬಾರದು :

ನಾವು ಅತಿಕ್ರಮಣ ಮಾಡಿಲ್ಲ. 1956ರಿಂದಲೂ ನಾವು ಹಾಗೆಯೇ ಇದ್ದೇವೆ. ಆಗ ಜಾರಿ ಮಾಡಿದ ಕಾಯ್ದೆಯೇ ಅಂತಿಮ. ನಾವು ಒಂದು ಇಂಚು ಕೇಳಬಾರದು, ಕೊಡಲೂ ಬಾರದು.ನ್ಯಾ| ಕೆ.ಎಲ್‌. ಮಂಜುನಾಥ್‌, ಗಡಿ ರಕ್ಷಣ ಆಯೋಗ‌ ಅಧ್ಯಕ್ಷ

ಪ್ರತಿಕೂಲ ಪರಿಣಾಮ ತಿಳಿಯಲಿ :

ಉದ್ಧವ್‌ ಹೇಳಿಕೆ ಖಂಡನೀಯ. ಅವರು ಆ ರೀತಿ ಹೇಳಿಕೆ ನೀಡಿದ್ದಕ್ಕೆ ಶಿವಸೇನೆಗೆ ನೀಡಿದ ಬೆಂಬಲವನ್ನು ಕಾಂಗ್ರೆಸ್‌ ವಾಪಸ್‌ ಪಡೆಯಬೇಕು.  ಇಂಥ ಹೇಳಿಕೆ ಜನರ ಮೇಲೆ ಪರಿಣಾಮ ಬೀರುತ್ತದೆ.ಅಶ್ವತ್ಥನಾರಾಯಣ, ಡಿಸಿಎಂ

ಠಾಕ್ರೆ  ರಾಜ್ಯ ಪ್ರವೇಶ ನಿರ್ಬಂಧಿಸಿ :

ಬೆಳಗಾವಿ, ಕಾರವಾರ ಮತ್ತಿತರ ಪ್ರದೇಶಗಳು ಕನ್ನಡದ ಪ್ರದೇಶ ಗಳು. ನಮ್ಮಲ್ಲಿ ಮರಾಠಿಗರ ಸಮಾರಂಭದಲ್ಲಿ ಭಾಗವಹಿಸಲು ಉದ್ಧವ್‌ ಠಾಕ್ರೆ ಬಂದರೆ ಅವಕಾಶ ನೀಡಬಾರದು. – ಡಾ| ದೊಡ್ಡರಂಗೇ ಗೌಡ, ಸಾಹಿತಿ

ಮಹಾರಾಷ್ಟ್ರ ತನ್ನ ವೈಫ‌ಲ್ಯ ಮುಚ್ಚಿ ಗಡಿ ವಿಷಯ ಪ್ರಸ್ತಾವಿಸಿದೆ.  ನೆಲ, ಜಲ, ಭಾಷೆ ರಕ್ಷಿಸುತ್ತೇವೆ.ರಮೇಶ್‌ ಜಾರಕಿಹೊಳಿ, ಸಚಿವ

ಆ ರಾಜ್ಯದಲ್ಲಿ ಪಕ್ಷ ಹೊಂದಾಣಿಕೆ ಮಾಡಿದ್ದರೂ ರಾಜ್ಯದ ನೆಲ-ಜಲ ವಿಚಾರದಲ್ಲಿ ರಾಜಿ ಇಲ್ಲ. ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ

ಮಹಾರಾಷ್ಟ್ರದ ಎಲ್ಲೆಡೆ ನಮ್ಮವರು ಇದ್ದಾರೆ. ಹಾಗೆಂದು ಆ ರಾಜ್ಯವನ್ನು ಕರ್ನಾಟಕಕ್ಕೆ ಸೇರಿಸಲು ಸಾಧ್ಯವಿದೆಯೇ? ಕೆ.ಎಸ್‌. ಈಶ್ವರಪ್ಪ, ಸಚಿವ

ಭಾಷಾವಾರು ಪ್ರಾಂತ್ಯ ರಚನೆಯಾದಾಗ ಕಾಂಗ್ರೆಸ್‌ ಅಧಿ ಕಾರದಲ್ಲಿತ್ತು. ಈಗ ಉದ್ಧವ್‌ ಠಾಕ್ರೆ ಅವರನ್ನೇ ಪ್ರಶ್ನಿಸಲಿ. –ಸಿ.ಟಿ. ರವಿ, ಬಿಜೆಪಿ ನಾಯಕ

ಮಹಾರಾಷ್ಟ್ರದ ಸಾವಿರ ಸಿಎಂಗಳು ಬಂದು ಏನೇ ಹೇಳಿದರೂ ಬೆಳಗಾವಿ-ನಿಪ್ಪಾಣಿ ಕರ್ನಾಟಕದಲ್ಲೇ ಇರಲಿವೆ. –ಲಕ್ಷ್ಮಣ ಸವದಿ, ಡಿಸಿಎಂ

ಉನ್ನತ ಹುದ್ದೆಯಲ್ಲಿ ಇರುವವರು ಅಪ್ರಬುದ್ಧ ರೀತಿಯಲ್ಲಿ ಮಾತನಾಡಬಾರದು.ಡಾ| ಸಿದ್ದಲಿಂಗಯ್ಯ, ಕವಿ

Advertisement

Udayavani is now on Telegram. Click here to join our channel and stay updated with the latest news.

Next