ರಾಮನಗರ: ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ನಾಗರಿಕರಿಗೆ ತಿಳಿ ಹೇಳುವ ರಾಜಕೀಯ ನಾಯಕರು ತಮ್ಮ ಭೇಟಿ ವೇಳೆ, ಅದನ್ನು ಮರೆಯುತ್ತಿದ್ದಾರೆ. ಜನಜಂಗುಳಿಗೆ ಅವಕಾಶ ಮಾಡಿಕೊಟ್ಟು ತಮ್ಮನ್ನು ತಾವೇ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕಿನ ಪ್ರಕರಣ ಗಳು ಹೆಚ್ಚಾಗುತ್ತಲೇ ಇದೆ. ರಾಮ ನಗರ ಜಿಲ್ಲೆಯಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ.
ನೆರೆ ಜಿಲ್ಲೆಗಳಾದ ಮಂಡ್ಯ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಸೋಂಕಿನ ಪ್ರಕರ ಣಗಳು ಏರುತ್ತಲೇ ಇದೆ. ಇದೆಲ್ಲ ರಾಮನಗರ ಜಿಲ್ಲೆಯ ನಾಗರಿಕರಿಗೆ ಹಾಗೂ ರಾಜಕೀಯ ನಾಯಕರಿಗೆ ಪಾಠವಾಗಬೇಕಿತ್ತು. ಆದರೆ ದುರಾದೃಷ್ಟವಶಾತ್ ಯಾರು ಪಾಠ ಕಲಿಯು ತ್ತಿಲ್ಲ. ಮಾಸ್ಕ್ ಧರಿಸದಿದ್ದರೆ ಅಥವಾ ಅಂತರ ಕಾಪಾಡದಿದ್ದರೆ ಕಾನೂನು ರೀತಿಯ ಶಿಕ್ಷೆಗೆ ಅವಕಾಶವಿದೆ. ಆದರೆ ಈ ವಿಚಾರದಲ್ಲಿ ಬಹುತ ಕರು ಕ್ಯಾರೆ ಅನ್ನುತ್ತಿಲ್ಲ. 42 ದಿನಗಳ ಸಂಪೂರ್ಣ ಲಾಕ್ ಡೌನ್ ಕಲಿಸಿದ ಪಾಠ ವ್ಯರ್ಥವಾಗಿದೆ.
ರಾಜಕೀಯ ನಾಯಕರಲ್ಲೇ ನಿರಾಸಕ್ತಿ: ಜಿಲ್ಲೆಗೆ ಭೇಟಿ ಕೊಡುವ ರಾಜಕೀಯ ನಾಯಕರು ಸ್ವತಃ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ನಿರಾಸಕ್ತಿ ತೋರಿಸುತ್ತಿ ದ್ದಾರೆ. ಸೋಮವಾರ ಜಿಲ್ಲಾ ಕೇಂದ್ರಕ್ಕೆ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಕಚೇರಿಗೆ ಭೇಟಿ ನೀಡಿದ್ದಾಗ, ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಸಾಮಾಜಿಕ ಅಂತರ ಮರೆತು ಪೈಪೋಟಿಯ ನಡೆಸಿ ಸಚಿವರನ್ನ ಕಾಣಲು ಮುಂದಾಗಿದ್ದು ಕಂಡು ಬಂತು.
ಪೊಲೀಸರು ಜನಜಂಗುಳಿಗೆ ಅವಕಾಶವಾಗದಂತೆ ಕೆಲಕಾಲ ನಿಯಂತ್ರಿಸಿದರಾ ದರು ನಂತರ ಕೈಚೆಲ್ಲಿದರು. ಕಳೆದ ವಾರ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಸಚಿವ ಡಾ. ಸಿ.ಎನ್. ಅಶ್ವತ್ಥನಾರಾ ಯಣ ಭೇಟಿ ವೇಳೆಯಲ್ಲೂ ಇದೇ ಚಿತ್ರಣ ಕಂಡು ಬಂತು. ಮಂಗಳವಾರ ಚನ್ನಪಟ್ಟಣಕ್ಕೆ ಶಾಸಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾ ರಸ್ವಾಮಿ, ತಮ್ಮ ಪುತ್ರ ನಿಖೀಲ್ ಕುಮಾರಸ್ವಾಮಿ ಅವರೊಡನೆ ಬಂದಾಗಲೂ ನೂರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು, ನಾಗರಿಕರು ಮತ್ತು ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿ ಕೊಳ್ಳಲು ಪೈಪೋಟಿ ನಡೆಸಿದರು. ಈ ವೇಳೆ ನೂಕು ನುಗ್ಗಲು ಉಂಟಾಯಿತು.
ಕುಮಾರಸ್ವಾಮಿ ಅವರಿಗೆ ಹೃದಯದ ಕಾಯಿಲೆಯಿದೆ ಎಂಬುದನ್ನು ಲೆಕ್ಕಿಸದೆ ಅವರೊಡನೆ ಮಾತನಾಡಿ, ಕೈಕುಲುಕಲು ಮುಂದಾಗಿದ್ದು ಕಂಡು ಬಂತು. ಸ್ವತಃ ಎಚ್.ಡಿ. ಕುಮಾರಸ್ವಾಮಿಯವರೇ ಮಾಸ್ಕ್ ಧರಿಸದೆ ಕಾನೂನು ಉಲ್ಲಂ ಸಿದರು. ಜನಜಂಗುಳಿ ನಿಯಂತ್ರಿಸಬೇಕಾದ ಚನ್ನಪಟ್ಟಣದ ಜೆಡಿಎಸ್ ಪಕ್ಷದ ಮುಖಂಡರು ಅದು ತಮ್ಮ ಸಮಸ್ಯೆ ಅಲ್ಲ ಎನ್ನುವಂತ ವರ್ತನೆ ಕಾಣಿಸುತ್ತಿತ್ತು. ನಿಯಂತ್ರಣಕ್ಕೆ ಪೊಲೀಸರು ಒಂದಷ್ಟು ಕಾಲ ಪ್ರಯತ್ನಿಸಿ ವಿಫಲರಾದರು. ಕೋವಿಡ್-19 ವೈರಸ್ ಜೊತೆಗೆ ಜೀವನ ಸಾಗಿಸಬೇಕು ಎಂದು ಭಾಷಣ ಮಾಡುವ ರಾಜಕೀಯ ಪ್ರತಿನಿಧಿಗಳು ಸಾಮಾನ್ಯ ಸಂಗತಿ ಗಳನ್ನು ಪಾಲಿಸಿ ಮಾದರಿಯಾಗಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
ಸಹಕರಿಸದಿದ್ದರೆ ಕೋವಿಡ್ 19 ನಿಯಂತ್ರಣ ಅಸಾಧ್ಯ: ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಮುಂತಾದ ಮುಂಜಾಗ್ರತೆ ಕ್ರಮಗಳಿಗೆ ಜನರ ಸಹಕಾರವಿಲ್ಲದಿದ್ದರೆ ಕಾನೂನು ಜಾರಿ ಮಾಡಿ ಏನು ಪ್ರಯೋಜನ ಎಂದು ಡಿಎಚ್‌ಒ, ಸ್ಥಳೀಯ ಸಂಸ್ಥೆಗಳ ಆಯುಕ್ತರು, ಜಿಲ್ಲೆಯ ಹಿರಿಯ ಅಧಿಕಾರಿಗಳು ಅಸಾಹಯಕರಾಗಿ ಪ್ರತಿಕ್ರಿಯಿಸಿದ್ದಾರೆ. ನಿಮಗಾಗಿ ನೀವು ರಕ್ಷಿಸಿಕೊಳ್ಳಿ ಎಂದು ತಿಳಿ ಹೇಳಿದರೂ ಕೇಳುವವರಿಲ್ಲ. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಿದರೂ ನಿರ್ಲಕ್ಷ ಮನೆ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.