Advertisement

ರಾಜಕೀಯ ಅಸಹಿಷ್ಣುತೆ ತಡೆಯಬೇಕು: ಕೋರ್ಟ್‌

08:40 AM Sep 19, 2017 | Harsha Rao |

ನವದೆಹಲಿ: ರಾಜಕೀಯ ಕಾರಣಗಳಿಗಾಗಿ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಕಿತ್ತೆಸೆಯುವುದು ಸದ್ಯದ ಅಗತ್ಯ ಎಂದು ದೆಹಲಿ ಕೋರ್ಟ್‌ ಅಭಿಪ್ರಾಯ ಪಟ್ಟಿದೆ. ಮತ್ತೂಬ್ಬರ ಪ್ರಾಣಕ್ಕಿಂತ ತಮ್ಮ ರಾಜಕೀಯ ಅಭಿಪ್ರಾಯವೇ ಮುಖ್ಯ ಎಂಬಂತೆ ಜನರು ವರ್ತಿಸುತ್ತಿ ದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದಿದೆ. ಅಲ್ಲದೇ 2007ರಲ್ಲಿ ತಮ್ಮ ರಾಜಕೀಯ ಅಭಿಪ್ರಾಯಗಳ ಕಾರಣಕ್ಕೆ ತಮ್ಮ ನೆರೆ ಮನೆಯ ವ್ಯಕ್ತಿ ಮತ್ತು ಬಾಲಕನಿಗೆ ಥಳಿಸಿದ್ದ ಮೊಕದ್ದಮೆಯೊಂದರ 4 ಅಪರಾಧಿಗಳಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಈ ನಾಲ್ವರು ಬಿಜೆಪಿ ಸಂಸದರೊಬ್ಬರ ಸಹಾಯಕರು ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next