Advertisement

ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ

06:00 AM Dec 28, 2018 | |

ಶಿವಮೊಗ್ಗ: “ಆಡಳಿತ ಪಕ್ಷದಲ್ಲಿಯೇ ರಾಜಕೀಯ ಅಸ್ಥಿರತೆ ರಾಜ್ಯದಲ್ಲಿ ಮೊದಲ ಬಾರಿಗೆ ಬಂದಿದೆ’ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಆರೋಪಿಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಡಿಸಿಎಂ ಪರಮೇಶ್ವರ ನೇರವಾಗಿ ಬಡಿದಾಡುತ್ತಿದ್ದಾರೆ. ಕಾಂಗ್ರೆಸ್‌ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿ ಅರ್ಧಕ್ಕೆ ಎದ್ದು ಹೋಗಿದ್ದಾರೆ.

Advertisement

ಗೃಹಮಂತ್ರಿ ಸ್ಥಾನ ಬಿಟ್ಟು ಕೊಡಿ ಎಂದಿದ್ದಕ್ಕೆ ಪರಮೇಶ್ವರ ಅಸಮಾಧಾನಗೊಂಡಿದ್ದಾರೆ. ಒಂದು ಕಡೆ ಶಾಸಕರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ಅತೃಪ್ತಿ, ಮತ್ತೂಂದು ಕಡೆ ಮಂತ್ರಿಗಳಿಗೆ ಒಳ್ಳೆಯ ಖಾತೆ ಸಿಕ್ಕಿಲ್ಲ ಎಂಬ ಅಸಮಾಧಾನ ಇದೆ ಎಂದರು. ಮಂತ್ರಿಗಳನ್ನು ಘೋಷಣೆ ಮಾಡಿ ವಾರಗಟ್ಟಲೆ ಇಲಾಖೆ ಸಿಗದೇ ಇರುವುದು ನಾಚಿಕೆಗೇಡಿನ ಸಂಗತಿ. ಸ್ವತಃ ಸಿದ್ದರಾಮಯ್ಯ ನಿಗಮ-ಮಂಡಳಿಗಳ
ಅಧ್ಯಕ್ಷರ ಘೋಷಣೆ ಮಾಡಿ ಅದಕ್ಕೆ ತಡೆಯಾಜ್ಞೆ ತಂದಿರುವುದು ರಾಜ್ಯದ ಇತಿಹಾಸದಲ್ಲೇ ಮೊದಲು.

ಕಾಂಗ್ರೆಸ್‌ನ ಆಂತರಿಕ ಗೊಂದಲ ಮತ್ತು ಬೇಗುದಿ ಬಹಿರಂಗಗೊಂಡಿದೆ. ವಿಧಾನಸೌಧಕ್ಕೆ ಹೋದರೆ ಯಾವುದೇ ಮಂತ್ರಿಗಳು ಕೈಗೆ ಸಿಗುತ್ತಿಲ್ಲ. ಅವರ ಸ್ಥಾನ ಉಳಿಯುತ್ತೋ ಇಲ್ಲವೋ ಎಂಬ ಗಾಬರಿಯಲ್ಲಿದ್ದಾರೆ. ಶಾಮನೂರು ಶಿವ ಶಂಕರಪ್ಪ, ಖರ್ಗೆ ಸಿದ್ದು ವಿರುದಟಛಿ
ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದರು. ಸರ್ಕಾರ ಮುಂದುವರಿಸುತ್ತಿರೋ ಬಿಡುತೀರೋ ನಮಗೆ ಸಂಬಂಧವಿಲ್ಲ. ನಾವು ವಿರೋಧ ಪಕ್ಷದಲ್ಲೇ ಕೆಲಸ ಮಾಡುತೇ¤ವೆ. ವಿಧಾನ ಮಂಡಲದ ಹೊರಗೆ, ಒಳಗೆ ನಮ್ಮ ಕೆಲಸ ಮಾಡುತೇ¤ವೆ. ಕೆಲಸ ಮಾಡಿ, ಇಲ್ಲವೇ ಗದ್ದುಗೆ ಬಿಟ್ಟು ತೊಲಗಿ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next