Advertisement

ರಾಜಕೀಯ ಏಟಿಗೆ ಡಿಕೆಶಿ ರೂಟ್‌ ಬದಲು?

06:36 PM Nov 24, 2020 | Suhan S |

ಸಿಂಧನೂರು: ತಾಲೂಕಿನಲ್ಲಿ ಕಾಂಗ್ರೆಸ್‌ ಪಕ್ಷ ಇಬ್ಬಣಗಳಾಗಿ ಬಹುದಿನಗಳೇ ಗತಿಸಿದ್ದು, ರಾಜ್ಯ ನಾಯಕರ ಭೇಟಿ ಕಾರ್ಯಕ್ರಮಗಳು ಪರಸ್ಪರಏಟು-ಎದಿರೇಟಿಗೆ ಅಸ್ತ್ರಗಳಾಗಿವೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

Advertisement

ಸೋಮವಾರ ಮಸ್ಕಿ ಕಾರ್ಯಕ್ರಮಕ್ಕೆ ಸಾಗುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸಿಂಧನೂರಿಗೆ ಭೇಟಿ ನೀಡುವ ಕಾರ್ಯಕ್ರಮವಿದ್ದರೂ ಕೊನೆ ಕ್ಷಣದಲ್ಲಿ ಬದಲಾದ ರೂಟ್‌ ರಾಜಕೀಯ ವಲಯದಲ್ಲಿಸಂಚಲನ ಮೂಡಿಸಿದೆ. ಮಾಜಿ ಸಚಿವ ಶಿವರಾಜ್‌ ಅಂಗಡಿ ಅವರ ನಿವಾಸದಿಂದ ಕಾರಟಗಿ ಮೂಲಕ ಸಿಂಧನೂರು ಮಾರ್ಗವಾಗಿಯೇ ಮಸ್ಕಿಗೆಡಿಕೆಶಿ ಅವರು ತೆರಳಬೇಕಿತ್ತು. ಪೂರ್ವನಿಗದಿ ವೇಳಾಪಟ್ಟಿಯಿದ್ದರೂ ಕೊನೆಯಲ್ಲಿ ಅವರ ರೂಟ್‌ ಬದಲಾಯಿತು. ಹೆದ್ದಾರಿ ಮಾರ್ಗದ ಹತ್ತಿರದ ಮಾರ್ಗ ಹೊರತುಪಡಿಸಿ ಸುತ್ತುವರಿದು ಮಸ್ಕಿ ತಲುಪಿದರು.  ಸಿಂಧನೂರು ಭೇಟಿ ತಪ್ಪಿಸುವ ಮತ್ತೂಂದು ಬಣದ ಪರೋಕ್ಷ ಲಾಬಿಯೇ ಈ ಬೆಳವಣಿಗೆಗೆ ಕಾರಣವೆಂಬ ಶಂಕೆ ವ್ಯಕ್ತವಾಯಿತು.

ಜಿದ್ದಾಜಿದ್ದಿ ತೀವ್ರ: ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕೆ.ವಿರೂಪಾಕ್ಷಪ್ಪ ಅವರ ಹಿಡಿತದಲ್ಲಿಯೇ ಕಾಂಗ್ರೆಸ್‌ ಮುನ್ನಡೆದಿತ್ತು.ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಅವರ ಕುರಿತಾಗಿ ಉಂಟಾದ ಭಿನ್ನಮತಎರಡು ಬಣಗಳಾಗುವ ಮಟ್ಟಿಗೆ ಬೆಳೆದ ಮೇಲೆ ಜಿದ್ದಾಜಿದ್ದಿ ಜೋರಾಗಿದೆ. ಕೆಪಿಸಿಸಿ ಮಾಜಿಕಾರ್ಯದರ್ಶಿ ಕರಿಯಪ್ಪ ಹಾಗೂ ಬಸನಗೌಡಅವರು ಒಂದು ಗುಂಪಾಗಿಯೇ ಸಂಘಟನೆ ಮುಂದುವರಿಸಿದ್ದಾರೆ.

ಎರಡು ದಿನಗಳ ಹಿಂದೆಮಾಜಿ ಶಾಸಕರು, ಮಾಜಿ ಸಂಸದರ ನೇತೃತ್ವದಲ್ಲಿರೈತರ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆನಡೆದರೆ, ಅದೇ ದಿನ ಯುವ ಹಾಗೂ ಮಹಿಳಾ ಕಾಂಗ್ರೆಸ್‌ನಿಂದ ಒಂದೇ ಸಮಯದಲ್ಲಿ ಇಂದಿರಾಗಾಂಧಿ  ಅವರ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಇದಕ್ಕೂ ಎರಡು ತಿಂಗಳ ಮುನ್ನವೂ ಕೇಂದ್ರ, ರಾಜ್ಯ ಸರಕಾರದ ವೈಫಲ್ಯ ಖಂಡಿಸಿ ಎರಡು ಬಣಗಳಿಂದ ಪ್ರತ್ಯೇಕವಾಗಿತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಎರಡು ಕಡೆ ಟೆಂಟ್‌ ಹಾಕಿ ಪ್ರತಿಭಟಿಸಲಾಗಿತ್ತು. ಆ ಟೆಂಟ್‌ನಲ್ಲಿದ್ದವರು ಈ ಕಡೆ ಬರಲಿಲ್ಲ. ಈ ಕಡೆಯಿದ್ದವರು ಆ ಕಡೆಗೆ ಸುಳಿದಿರಲಿಲ್ಲ.

ಪರೋಕ್ಷ ಏಟು: ಕಾಂಗ್ರೆಸ್‌ನ ರಾಜ್ಯ ನಾಯಕರು ಆಗಮಿಸಿದಾಗಲೆಲ್ಲ ಅವರನ್ನು ಸ್ವಾಗತಿಸಿಕೊಳ್ಳುವ ವಿಷಯದಲ್ಲಿ ಯುವ ಕಾಂಗ್ರೆಸ್‌ರಾಜ್ಯಾಧ್ಯಕ್ಷರೇ ಮುಂಚೂಣಿ. ಈ ಹಿಂದೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ತಮ್ಮ ನಿವಾಸಕ್ಕೆ ಕರೆದೊಯ್ದಿದ್ದರು. ರಾಹುಲ್‌ ಗಾಂಧಿ ರೈತ ಪರ ಯಾತ್ರೆ ಕೈಗೊಂಡಾಗಲೂ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷರೇ ಮುಂದೆ ನಿಂತು ಸ್ವಾಗತಿಸಿದ್ದರು. ಆದರೆ, ಇದೇ ಮೊದಲ ಬಾರಿಗೆ ಕೆಪಿಸಿಸಿ ಅಧ್ಯಕ್ಷರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ನಡೆಸಿದ್ದ ಸಿದ್ಧತೆಗಳು ಫಲ ನೀಡಲಿಲ್ಲ. ಉದ್ದೇಶ ಪೂರ್ವಕವಾಗಿಯೇ ಡಿಕೆಶಿ ಅವರನ್ನು ಸಿಂಧನೂರಿಗೆ ಬರದಂತೆನೋಡಿಕೊಳ್ಳಲು ಮಾರ್ಗ ಬದಲಿಸಿ ಮಸ್ಕಿ ತಲುಪಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

Advertisement

ಪೈಪೋಟಿ ಕಡಿಮೆಯಿಲ್ಲ : ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ಸಿಂಧನೂರಿಗೆ ಆಗಮಿಸುವುದನ್ನು ತಪ್ಪಿಸಲು ಕಾರಣರೆಂದು ಯುವ ಕಾಂಗ್ರೆಸ್‌ ನವರು ಹೇಳಿಕೊಂಡರು. ಆದರೂ, ಪ್ರಯತ್ನ ಕೈ ಬಿಡದ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಅವರು ಮಸ್ಕಿಗೆ ತೆರಳಿ ತಮ್ಮ ಬೆಂಬಲಿಗರ ನೇತೃತ್ವದಲ್ಲಿ ಡಿಕೆಶಿ ಅವರಿಗೆ ಹೂಮಾಲೆ ಹಾಕಿ ಸ್ವಾಗತಿಸಿದ್ದಾರೆ. ಮಸ್ಕಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿಕೊಳ್ಳಲು ಹೋಗಿದ್ದ ವೇಳೆಯೂಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮುಂಚೂಣಿಯಲ್ಲಿದ್ದರು. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಇದ್ದರು.

 

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next