Advertisement

Political: ಡಿಸಿಎಂ ಡಿ.ಕೆ.ಶಿವಕುಮಾರ್‌ -ಪರಮೇಶ್ವರ್‌ ರಹಸ್ಯ ಭೇಟಿ; ಮಾತುಕತೆ

01:33 AM Oct 01, 2024 | Team Udayavani |

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸೋಮವಾರ ಮಹತ್ವದ ವಿದ್ಯಮಾನಗಳು ಪ್ರಾರಂಭವಾಗಿದ್ದು, ಇಷ್ಟು ದಿನಗಳ ಕಾಲ ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ರಹಸ್ಯ ಸಭೆ ನಡೆಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

Advertisement

ಪರಮೇಶ್ವರ್‌ ನಿವಾಸಕ್ಕೆ ತೆರಳಿದ ಡಿ.ಕೆ. ಶಿವಕುಮಾರ್‌ ಅರ್ಧ ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ. ಈ ಚರ್ಚೆ ನಡೆಯುವ ಕಾಲಕ್ಕೆ ಯಾರಿಗೂ ಒಳಗೆ ಪ್ರವೇಶ ನೀಡದೇ ಇರುವ ಮೂಲಕ ಗೌಪ್ಯತೆ ಕಾಯ್ದುಕೊಳ್ಳಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಸಿಲುಕಿರುವ ರಾಜಕೀಯ ಬಲೆಯ ವ್ಯಾಪ್ತಿ ಹಾಗೂ ಗಾಂಭೀರ್ಯದ ಬಗ್ಗೆ ಮೂಲ ಕಾಂಗ್ರೆಸ್‌ನ ಇಬ್ಬರು ಪ್ರಬಲ ನಾಯಕರು ಚರ್ಚೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.

ಪರಮೇಶ್ವರ್‌ ನಿವಾಸಕ್ಕೆ ಶಿವಕುಮಾರ್‌ ಭೇಟಿ ಕೊಡುವುದಕ್ಕೆ ಬೇಕಾದ ತುರ್ತು ಕಾರಣವೊಂದು ಎರಡೂ ಪಾಳಯದಿಂದ ಹರಿಯಬಿಡಲಾಗಿದೆ. ನಿಗಮ-ಮಂಡಳಿ ನಿರ್ದೇಶಕರ ನೇಮಕಕ್ಕೆ ಸಂಬಂಧಪಟ್ಟಂತೆ ಡಾ| ಜಿ. ಪರಮೇಶ್ವರ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಸಭೆಯಲ್ಲಿ ನೇಮಕ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಪರಮೇಶ್ವರ್‌ ಕೆಲ ವಿಮರ್ಶೆ ವ್ಯಕ್ತಪಡಿಸಿದ್ದು, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರ ಜತೆಗೂ ಮಾತನಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶಿವಕುಮಾರ್‌ ಅವರು ಪರಮೇಶ್ವರ್‌ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next