Advertisement

ಜೆಡಿಎಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

08:04 PM Jul 19, 2021 | Team Udayavani |

ಮೈಸೂರು:ಕೊರೊನಾ2ನೇ ಅಲೆ ಬಳಿಕ ಜೆಡಿಎಸ್‌ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು,ಭಾನುವಾರ ಶಾಸಕರಾದ ಸಾ.ರಾ.ಮಹೇಶ್‌ಹಾಗೂ ಅಶ್ವಿ‌ನ್‌ಕುಮಾರ್‌ ನೇತೃತ್ವದಲ್ಲಿ ತಾಲೂಕುಜೆಡಿಎಸ್‌ ನೂತನ ಅಧ್ಯಕ್ಷರಿಗೆ ನೇಮಕಾತಿ ಪತ್ರವಿತರಿಸಲಾಯಿತು.

Advertisement

ನಗರದ ಕಚೇರಿಯಲ್ಲಿನಡೆದಕಾರ್ಯಕ್ರಮದಲ್ಲಿನೇಮಕಾತಿ ಪತ್ರ ವಿತರಿಸಿದ ಶಾಸಕ ಸಾ.ರಾ.ಮಹೇಶ್‌ ಮಾತನಾಡಿ, ಪಕ್ಷದ ಸಂಘಟನೆದೃಷ್ಟಿಯಿಂದ ಹೆಚ್ಚಿನ ಸದಸ್ಯತ್ವ ನೋಂದಣಿ ಕೈಗೊಳ್ಳಬೇಕಿದೆ. ಮುಂಬರುವ ತಾಲೂಕು ಹಾಗೂಜಿಲ್ಲಾ ಪಂಚಾಯಿತಿ ಚುನಾವಣೆಗೆ ಪಕ್ಷವನ್ನುತಳಮಟ್ಟದಿಂದ ಸಂಘಟಿಸುವ ಕೆಲಸ ಮಾಡುವಂತೆ ಸಲಹೆ ನೀಡಿದರು. ಶಾಸಕ ಅಶ್ವಿ‌ನ್‌ಕುಮಾರ್‌ ಮಾತನಾಡಿ,ಮಂಗಳವಾರ ರಾಜ್ಯ ಮಟ್ಟದ ಕಾರ್ಯಕಾರಿಣಿಸಭೆ ಬೆಂಗಳೂರಿನಲ್ಲಿ ನಡೆಯಲಿದೆ.

ಅಷ್ಟರಲ್ಲಿವಿವಿಧ ಪದಾಧಿಕಾರಿಗಳ ನೇಮಕವನ್ನುಮಾಡಲಾಗುವುದು. ಅಲ್ಲಿ ಪಕ್ಷದ ವರಿಷ್ಠರುಮುಂಬರುವ ಸ್ಥಳೀಯ ಚುನಾವಣೆ ಹಾಗೂವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಬಗ್ಗೆಚಿಂತನೆ ನಡೆಸಲಿದ್ದಾರೆ ಎಂದು ಹೇಳಿದರು.ಜಿಲ್ಲೆಯ ವಿವಿಧ ತಾಲೂಕು ಅಧ್ಯಕ್ಷರಿಗೆನೇಮಕಾತಿ ಪತ್ರ ವಿತರಿಸಲಾಯಿತು.

ಮೈಸೂರುತಾಲೂಕಿಗೆಬೀರಿಹುಂಡಿಬಸವಣ್ಣ,ಪಿರಿಯಾಪಟ್ಟಣತಾಲೂಕು ಜೆಡಿಎಸ್‌ ಅಧ್ಯಕ್ಷರನ್ನಾಗಿ ಅಣ್ಣಯ್ಯ ಶೆಟ್ಟಿ,ಹುಣಸೂರು ತಾಲೂಕಿಗೆ ಸೋಮಶೇಖರ್‌, ಎಚ್‌.ಡಿ.ಕೋಟೆಗೆ ರಾಜೇಂದ್ರ, ಸರಗೂರು ತಾಲೂಕಿಗೆಜಿ.ಗೋಪಾಲಸ್ವಾಮಿ, ನರಸೀಪುರಕ್ಕೆ ಎಂ.ಚಿನ್ನಸ್ವಾಮಿ, ಕೆ.ಆರ್‌.ನಗರ ತಾಲೂಕಿಗೆ ಎಚ್‌.ಸಿ.ಕುಮಾರ್‌, ಸಾಲಿಗ್ರಾಮಕ್ಕೆ ಎಸ್‌.ಪಿ.ರಾಜಣ್ಣ ಅವರನ್ನು ತಾಲ್ಲೂಕು ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

ಅಲ್ಲದೆ, ನಗರದಲ್ಲಿರುವ ವಿಧಾನಸಭಾ ಕ್ಷೇತ್ರಗಳಾದ ಚಾಮರಾಜ ಕ್ಷೇತ್ರಕ್ಕೆ ಮಂಜುನಾಥ್‌,ಕೃಷ್ಣರಾಜ ಕ್ಷೇತ್ರಕ್ಕೆ ಸಂತೋಷ್‌, ನರಸಿಂಹರಾಜಕ್ಷೇತ್ರಕ್ಕೆ ಎಂ.ಎನ್‌.ರಾಮು ಮತ್ತು ಸಯ್ಯದ್‌ತಬ್ರಿàಸ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿನೇಮಕಾತಿ ಪತ್ರ ನೀಡಲಾಯಿತು.ಕಾರ್ಯಕ್ರಮದಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ,ಮಾಜಿ ಮೇಯರ್‌ ಎಂ.ಜೆ.ರವಿಕುಮಾರ್‌,ಆರ್‌.ಲಿಂಗಪ್ಪ, ನಗರಪಾಲಿಕೆ ಮಾಜಿ ಸದಸ್ಯಮಲ್ಲೇಶ್‌, ಕರ್ನಾಟಕ ವಸ್ತು ಪ್ರದರ್ಶನಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್‌,ಪಿ.ಶಾರದಮ್ಮ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next