Advertisement

ಪಾಲಿಷ್‌ ತೆಗೆಯೋ ಪಾಲಿಸಿ

02:17 PM Sep 20, 2017 | |

ಉಗುರು “ರಂಗ್‌ ರಂಗೀಲಾ’ ಹಾಡುತ್ತಿದ್ದರೆ, ಹುಡುಗಿಯ ವೈಯ್ನಾರಕ್ಕೆ ವೋಲ್ಟೆಜ್‌ ಹೆಚ್ಚು. ಫ್ಯಾಶನ್‌ಪ್ರಿಯ ಹುಡುಗಿಯರಿಗೆ ನೈಲ್‌ಪಾಲಿಷ್‌ ಬದಲಿಸೋದೇ ಒಂದು ಕೆಲ್ಸ ಆಗಿರುತ್ತೆ. ಅಂದದ ಮೊಗದ ಮೇಲೆ ಬಣ್ಣಬಣ್ಣದ ಉಗುರುಗಳನ್ನು ಆಡಿಸುತ್ತಾ, ನೋಡುಗರನ್ನು ಸುಂದರಿ ಮೋಡಿ ಮಾಡುತ್ತಲೇ ಇರುತ್ತಾಳೆ. ಕೆಲವರು ವಾರಕ್ಕೊಮ್ಮೆ ನೈಲ್‌ಪಾಲಿಷ್‌ ಮಾಡಿಕೊಂಡರೆ, ಮತ್ತೆ ಕೆಲವರದ್ದು ನಿತ್ಯ ಉಗುರಿಗೆ ಪೇಂಟಿಂಗ್‌. 

Advertisement

ಇದೆಲ್ಲ ನೈಲ್‌ ಪಾಲಿಷ್‌ನ ಪುರಾಣ. ಇನ್ನು ಉಗುರಿನ ಮೇಲೆ ಅಚ್ಚಾದ ಹಳೆಯ ಬಣ್ಣವನ್ನು ತೆಗೆಯುವ ಸರ್ಕಸ್ಸು ಇರುತ್ತಲ್ಲ, ಅದಕ್ಕೇನು ಪರಿಹಾರ? “ನೈಲ್‌ ಪಾಲಿಷ್‌ ರಿಮೂವರ್‌’ ಎನ್ನುವುದು ನಿಜ. ಆದರೆ, ಅದಕ್ಕಾಗಿ ಅಂಗಡಿಗೆ ಓಡಬೇಕಂತಿಲ್ಲ. ಮನೆಯಲ್ಲಿರುವ ವಸ್ತುಗಳಲ್ಲಿಯೇ ರಿಮೂವರ್‌ ಗುಣವಿದೆ.

1. ಲಿಂಬೆಹಣ್ಣು
ಬೇಕಾಗುವ ವಸ್ತುಗಳು: ಸೋಪಿನ ನೀರು, ಕತ್ತರಿಸಿದ ಲಿಂಬೆಹಣ್ಣು ಮೊದಲು ಸೋಪಿನ ನೀರಿನಿಂದ 3-5 ನಿಮಿಷ ಉಗುರುಗಳನ್ನು ಚೆನ್ನಾಗಿ ನೆನೆಸಿಕೊಳ್ಳಬೇಕು. ನಂತರ ಕತ್ತರಿಸಿದ ಲಿಂಬೆಯ ಹೋಳುಗಳಿಂದ ಉಗುರಿನ ಮೇಲೆ ಚೆನ್ನಾಗಿ ಉಜ್ಜಿ. ಬಹಳ ಬೇಗ ಬಣ್ಣ ಹೋಗುತ್ತದೆ. ನಂತರ ಉಗುರಿನ ಮೇಲೆ ಮಾಯಿಶ್ಚರೈಸರ್‌ ಹಚ್ಚಿಕೊಂಡರೆ, ಮೃದುತ್ವ ಸಿಗುತ್ತದೆ.

2. ವಿನೇಗರ್‌
ಬೇಕಾಗುವ ವಸ್ತುಗಳು: ಹತ್ತಿಯ ತುಣುಕು, ವಿನೇಗರ್‌, ಲಿಂಬೆರಸ 10- 15 ನಿಮಿಷ ಉಗುರುಗಳನ್ನು ಬೆಚ್ಚನೆಯ ನೀರಿನಲ್ಲಿ ಮುಳುಗಿಸಿ, ನಂತರ ಇಲ್ಲಿ ಪಾಲಿಷ್‌ ಬಣ್ಣವನ್ನು ತೆಗೆಯಬೇಕು. ವಿನೇಗರ್‌ಗೆ ಹತ್ತಿಯ ತುಣುಕನ್ನು ಅದ್ದಿ, ಉಗುರಿನ ಬಣ್ಣದ ಮೇಲೆ ನಾಲ್ಕೈದು ಸಲ ಉಜ್ಜಿದರೆ, ಸುಲಭದಲ್ಲಿ ನೈಲ್‌ ಪಾಲಿಷ್‌ ಹೋಗುತ್ತದೆ.

3. ಡಿಯೋಡ್ರಂಟ್‌
ಬೇಕಾಗುವ ವಸ್ತುಗಳು: ಹತ್ತಿ, ಡಿಯೋಡ್ರಂಟ್‌ ಉಗುರಿನ ಮೇಲೆ ಡಿಯೋಡ್ರಂಟ್‌ ಅನ್ನು ಪೂಸಿಕೊಂಡು, ನಂತರ ಹತ್ತಿಯಿಂದ ಉಗುರಿನ ಬಣ್ಣವನ್ನು ತೆಗೆಯಬೇಕು. ಬಹಳ ಸರಳವಾಗಿ ನೈಲ್‌ ಪಾಲಿಷ್‌ ಅನ್ನು ತೆಗೆಯುವ ವಿಧಾನವಿದು.

Advertisement

4. ಹಳೇ ನೈಲ್‌ಪಾಲಿಷ್‌
ಬೇಕಾಗುವ ವಸ್ತುಗಳು: ಟಿಶ್ಯೂ ಪೇಪರ್‌, ಹಳೇ ನೈಲ್‌ ಪಾಲಿಷ್‌ ಹಳೆಯ ನೈಲ್‌ ಪಾಲಿಷ್‌ಗಳನ್ನು ಎಸೆಯಲು ಹೋಗಬೇಡಿ. ಅದರಿಂದಲೂ ಉಗುರಿಗೆ ಅಂಟಿದ ನೈಲ್‌ಪಾಲಿಷ್‌ನ ಬಣ್ಣವನ್ನು ತೆಗೆಯಬಹುದು. ಹೇಗೆ ಅಂತೀರಾ? ನೈಲ್‌ ಪಾಲಿಷ್‌ ಅನ್ನು ಉಗುರಿನ ಮೇಲೆ ಲೇಪಿಸಿಕೊಂಡು, ಟಿಶ್ಶೂé ಪೇಪರ್‌ನಿಂದ ತಕ್ಷಣವೇ ಒರೆಸಿಕೊಳ್ಳಬೇಕು. ನಾಲ್ಕೈದು ಸಲ ಚೆನ್ನಾಗಿ ಒರೆಸಿಕೊಂಡಲ್ಲಿ, ಉಗುರಿಗೆ ಅಂಟಿದ ಹಳೇ ಬಣ್ಣವೂ ನಿರ್ಮೂಲನೆಯಾಗಿ, ಬಿಳಿ ಛಾಯೆ ಕಾಣಿಸಿಕೊಳ್ಳುವುದು.

Advertisement

Udayavani is now on Telegram. Click here to join our channel and stay updated with the latest news.

Next