Advertisement
ಕಾಪು: ಕಡಲ ತಡಿಯ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ ಸದುದ್ದೇಶದೊಂದಿಗೆ ಪೊಲಿಪು ಮೊಗವೀರ ಮಹಾಸಭಾದ ಉತ್ಸಾಹಿ ಮುಂದಾಳುಗಳು ಒಟ್ಟುಗೂಡಿ 1918ರಲ್ಲಿ ಹುಲ್ಲು ಛಾವಣಿಯ ಮಾಡಿನಡಿಯಲ್ಲಿ ಪ್ರಾರಂಭಿಸಿದ ಪೊಲಿಪು ಫಿಷರೀಸ್ ಶಾಲೆ ನೂರರ ಸಂಭ್ರಮದಲ್ಲಿದೆ.
ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 23ಕ್ಕೆ ಇಳಿದಾಗ, ಒಂದನೇ ತರಗತಿಗೆ ಮಕ್ಕಳ ದಾಖಲಾತಿಯೇ ಆಗದ ಸಂದರ್ಭ ಆಂಗ್ಲ ಮಾಧ್ಯಮ ತರಗತಿಯನ್ನು ಪ್ರಾರಂಭಿಸಲು ಮುಂದಾದ ಊರಿನವರು ಗೌರವ ಶಿಕ್ಷಕಿಯರನ್ನು ನೇಮಿಸಿಕೊಂಡು ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡಲು ಪ್ರಾರಂಭಿಸಿದ್ದಾರೆ. ಈ ಕಾರಣದಿಂದ ಸಂಸ್ಥೆಯ ವಿದ್ಯಾರ್ಥಿಗಳ ಸಂಖ್ಯೆ 100 ದಾಟಿದ್ದು, ಮುಂದಿನ ವರ್ಷದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ್ನು ಪ್ರಾರಂಭಿಸುವ ಭರವಸೆಯನ್ನು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಸಮಿತಿಗೆ ನೀಡಿದ್ದಾರೆ.
Related Articles
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ, ಪ್ರೌಢಶಾಲೆಯ ವಜ್ರ ಮಹೋತ್ಸವ ಮತ್ತು ಪದವಿ ಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯು 2019-20ರಲ್ಲಿ ಏಕ ಕಾಲದಲ್ಲಿ ನಡೆಯಲಿದೆ. ಶಾಸಕ ಲಾಲಾಜಿ ಆರ್. ಮೆಂಡನ್ ಮತ್ತು ಅನಿವಾಸಿ ಭಾರತೀಯ ಉದ್ಯಮಿ ಡಾ| ಬಿ.ಆರ್. ಶೆಟ್ಟಿ ಗೌರವಾಧ್ಯಕ್ಷರಾಗಿ, ಸರ್ವೋತ್ತಮ್ ಕುಂದರ್ ಅಧ್ಯಕ್ಷರಾಗಿರುವ ಶತ, ವಜ್ರ, ಸುವರ್ಣ ಸಂಭ್ರಮ ಸಮಿತಿಯು ಮಹೋತ್ಸವ ಆಚರಣೆಗೆ ಸಿದ್ಧತೆಗಳನ್ನು ನಡೆಸುತ್ತಿವೆ.
Advertisement
ಸುಮಾರು 2.05 ಎಕ್ರೆ ಜಮೀನಿನಲ್ಲಿ ವಿಸ್ತಾರವಾಗಿ ಹಬ್ಬಿರುವ ಪ್ರಾಥಮಿಕ ಶಾಲೆಯ ಆವರಣದಲ್ಲಿ 3 ಕಟ್ಟಡಗಳಿವೆ. ಸಂಸ್ಥೆಯ ಹಳೆ ವಿದ್ಯಾರ್ಥಿ ಬಿ.ಆರ್. ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘ ಪೊಲಿಪು ಮತ್ತು ಮುಂಬೈ ಶಾಖೆ, ಮೊಗವೀರ ಮಹಾಸಭಾ ಪೊಲಿಪು ಮತ್ತು ಮುಂಬಯಿ ಶಾಖೆ ಹಾಗೂ ಆಂಗ್ಲ ಮಾಧ್ಯಮ ವಿಭಾಗ ಉಸ್ತುವಾರಿ ಕಮಿಟಿಗಳ ಸಹಕಾರದಿಂದ ಹಲವಾರು ವ್ಯವಸ್ಥೆಗಳು ಶಾಲೆಗೆ ದೊರೆತಿವೆ.
ಹೆಮ್ಮೆಯ ಶಿಕ್ಷಕರು-ಹಳೆ ವಿದ್ಯಾರ್ಥಿಗಳು ದೇಜು ಮಾಸ್ಟರ್ ಉಚ್ಚಿಲ ಸಂಸ್ಥೆಯ ಸ್ಥಾಪಕ ಮುಖ್ಯೋಪಾಧ್ಯಾಯರಾಗಿ ಅವರ ನಂತರದಲ್ಲಿ ಬಂದ ಬಾವುಗುತ್ತು ಜಿನರಾಜ್ ಶೆಟ್ಟಿ ಅವರು ಮುಖ್ಯೋಪಾಧ್ಯಾಯ ರಾಗಿದ್ದಾಗ ಸಂಸ್ಥೆಯು ತನ್ನ ಸುವರ್ಣ ಮತ್ತು ವರದ ಮಹೋತ್ಸವವನ್ನು ಆಚರಿಸಿದೆ. ಅನಿವಾಸಿ ಭಾರತೀಯ ಉದ್ಯಮಿ ಡಾ| ಬಿ. ಆರ್. ಶೆಟ್ಟಿ, ಸರ್ಜನ್ ಡಾ| ಸದಾನಂದ ಶೆಟ್ಟಿ, ನಿವೃತ್ತ ಪೈಲಟ್ ಭಾಸ್ಕರ್ ಶೆಟ್ಟಿ ಸಹಿತ ನೂರಾರು ಸಾಧಕ ವಿದ್ಯಾರ್ಥಿಗಳು ಶಾಲೆಯ ಹೆಮ್ಮೆಯ ಹಳೆ ವಿದ್ಯಾರ್ಥಿಗಳಾಗಿದ್ದಾರೆ. ಕುಟೀರ ಮಾದರಿಯ ಶಾಲೆಯಲ್ಲಿ ಕುಳಿತು ಕಷ್ಟದ ಸಂದರ್ಭದಲ್ಲಿ ಶಿಕ್ಷಣ ಪಡೆದ ಕಾರಣ ನಾವು ಇಷ್ಟು ಎತ್ತರಕ್ಕೆ ಏರುವಂತಾಗಿದೆ. ಶಾಲೆಯ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಮೊಗವೀರ ಸಮುದಾಯದವರ ಕೊಡುಗೆ ಸ್ಮರಣೀಯವಾಗಿದ್ದು, ಶತಮಾನೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪೂರ್ಣ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದೇನೆ.
-ಡಾ| ಬಿ.ಆರ್. ಶೆಟ್ಟಿ ,
ಹಳೆ ವಿದ್ಯಾರ್ಥಿ,ಅನಿವಾಸಿ ಭಾರತೀಯ ಉದ್ಯಮಿ ಸ್ಥಳೀಯರ ಸಹಕಾರ, ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಶಾಲೆ ಉತ್ತಮವಾಗಿ ಮುನ್ನಡೆಯುತ್ತಿದೆ. ಆಂಗ್ಲ ಮಾಧ್ಯಮ ತರಗತಿಯನ್ನು ಪ್ರಾರಂಭಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಲು ಪ್ರೋತ್ಸಾಹ ನೀಡಿದ್ದಾರೆ.
-ಎಚ್. ಎಸ್. ಅನಸೂಯ,
ಮುಖ್ಯೋಪಾಧ್ಯಾಯಿನಿ -ರಾಕೇಶ್ ಕುಂಜೂರು