ಭಾಲ್ಕಿ: ಐದು ವರ್ಷದೊಳಗಿನ ಮಗುವಿಗೆ ನೀಡುವ ಎರಡು ಹನಿ ಪೋಲಿಯೋ ಲಸಿಕೆಯು ಮಗುವಿನ ಜೀವನದ
ಆಧಾರಸ್ಥಂಬವಾಗಲಿದೆ ಎಂದು ತಾಪಂ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ ಹೇಳಿದರು.
ದಾಡಗಿ ಗ್ರಾಮದಲ್ಲಿ ರವಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪಲ್ಸ್
ಪೋಲಿಯೇ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿಸಲು ಐದು ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಲು ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿದರು.
ಡಾವರಗಾಂವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರವೀಣಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೇಲ್ವಿಚಾರಕ ರಾಜಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮದ ಪ್ರಮುಖರಾದ ವಿಲಾಸ ಪಾಟೀಲ, ವೀರಣ್ಣಾ ತಮಾಸಂಗೆ ಹಾಗೂ ಆಶಾ, ಅಂಗನವಾಡಿ ಕಾರ್ಯರ್ತರು ಇದ್ದರು.
ಕಮಲನಗರ: ಖತಗಾಂವ ಗ್ರಾಮದಲ್ಲಿ ರವಿವಾರ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ತಾಹೇರಾಬಿ ಮುಸಾ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, 5 ವರ್ಷದ ವರೆಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕು. ಇದರಿಂದ ಪಾರ್ಶ್ವವಾಯುವಿನನಿಂದ ಮುಕ್ತರಾಗಲು ಸಾಧ್ಯವಾಗುತ್ತದೆ ಎಂದರು. ಮದನೂರ ಉಪಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಆವಮ್ಮಾ, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಭಾಲ್ಕೆ, ಮುಖಂಡ ಮುಸಾ ಸೈಯ್ಯದ, ಗೀರೀಶ ನೀಲಂಗೆ, ಆಶಾ ಕಾರ್ಯಕರ್ತೆ ಮಾಹಾನಂದಾ ಬೇಂದ್ರೆ ಹಾಗೂ ಗ್ರಾಮದ ಮಹಿಳೆಯರು ಇದ್ದರು.