Advertisement

ಪೋಲಿಯೋ ಜಾಗೃತಿ ಜಾಥಾ

03:37 PM Jan 19, 2020 | Suhan S |

ಚನ್ನಪಟ್ಟಣ: ಐದು ವರ್ಷ ದೊಳಗಿನ ಮಕ್ಕಳಿಗೆ ಉಚಿತವಾಗಿ ಪಲ್ಸ್‌ ಪೋಲಿಯೊ ಹನಿ ಹಾಕಿಸುವ ಮೂಲಕ ಶಾಶ್ವತ ಅಂಗವಿಕಲತೆ ಯಿಂದ ಪಾರು ಮಾಡಬೇಕು ಎಂದು ನರ್ಸರಿ ಟೀಚರ್ ಟ್ರೆçನಿಂಗ್‌ ಕೋರ್ಸ್‌ನ ಪ್ರಾಂಶುಪಾಲ ಎಂ.ಮಲ್ಲೇಶ್‌ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

Advertisement

ತಾಲೂಕಿನ ಯಲಚಿಪಾಳ್ಯ ಗ್ರಾಮದಲ್ಲಿ ನರ್ಸರಿ ಟೀಚರ್ ಟ್ರೆನಿಂಗ್‌ ಕೋರ್ಸ್‌ ವತಿಯಿಂದ ಹಮ್ಮಿಕೊಂಡಿದ್ದ ಪಲ್ಸ್‌ ಪೋಲಿಯೋ ಲಸಿಕೆ ಕುರಿತಾದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆರೋಗ್ಯ ಇಲಾಖೆ ಮತ್ತು ಸರ್ಕಾರ ಪೋಲಿಯೋ ನಿರ್ಮೂಲನೆಗಾಗಿ ಸಾವಿರಾರು ಕೋಟಿ ರೂ. ಪ್ರತಿ ವರ್ಷ ವೆಚ್ಚ ಮಾಡುತ್ತಿದೆ. ಇದರ ಸದು ಪಯೋಗವನ್ನು ಸಾರ್ವ ಜನಿಕರು ಪಡೆದುಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿ ಸಬೇಕು ಎಂದರು.

ಅಸಂಘಟಿತ ಕಾರ್ಮಿಕರ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಜಯ ರಾಮು ಮಾತನಾಡಿ, ಮೌಡ್ಯತೆ ಬಿಟ್ಟು ಪಲ್ಸ್‌ ಪೋಲಿಯೋ ಹನಿಹಾಕಿಸುವುದರಿಂದ ಮಕ್ಕಳ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಇಲ್ಲ ಎಂಬುದನ್ನು ಪೋಷಕರು ಅರಿ ಯಬೇಕು. ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸುವ ಮೂಲಕ ಮಕ್ಕಳನ್ನು ಮಹಾಮಾರಿ ಪೋಲಿಯೋ ರೋಗದಿಂದ ರಕ್ಷಿಸಿಕೊಳ್ಳಬೇಕು ಎಂದರು.

ಜಾನಪದ ಗಾಯಕ ಚೌ.ಪು.ಸ್ವಾಮಿ ಜಾಗೃತಿ ಗೀತೆ ಹಾಡಿದರು. ಈ ಸಂದರ್ಭದಲ್ಲಿ ಸಾಹಿತಿ ವಿಜಯ್‌ ರಾಂಪುರ, ಅಬ್ಬೂರು ಶ್ರೀನಿವಾಸ್‌, ಎನ್‌.ಟಿ.ಟಿ. ಸಂಯೋಜಕಿ ಶಾಂಭವಿ, ಬೋವಿ ಸಂಘದ ಜಿಲ್ಲಾ ಉಪಾಧ್ಯಕ್ಷ ಚನ್ನಪ್ಪಾಜಿ, ಗುತ್ತಿಗೆದಾರ ಚಿಕ್ಕಗುರುವಯ್ಯ, ತಿಮ್ಮಸಂದ್ರ ಕೃಷ್ಣೇ ಗೌಡ, ವಿ.ಸುಂದರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next