Advertisement
ದೇಶದಲ್ಲಿ ನಡೆವ ಎಲ್ಲಾ ಚುನಾವಣೆಗಳು, ಮುಕ್ತ ಪಾರದರ್ಶಕವಾಗಿ ಮತ್ತು ಏಕಕಾಲಕ್ಕೆ ನಡೆಯಬೇಕು. ಇದು ಕನಿಷ್ಠ ಪ್ರಚಾರದಿಂದ ಕೂಡಿದ್ದು, ಆಡಳಿತಕ್ಕೆ ಭಂಗ ತರದೇ ಇರಬೇಕು ಎಂದು ನೀತಿ ಆಯೋಗ ತನ್ನ “ಮೂರು ವರ್ಷದ ಕಾರ್ಯಕಾರಿ ಯೋಜನೆ 2017-18ರಿಂದ 2019-20’ರ ವರದಿಯಲ್ಲಿ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಬಹು ದಿನಗಳಿಂದಲೇ ಈ ವಿಚಾರದ ಬಗ್ಗೆ ಹೇಳುತ್ತಲೇ ಬಂದಿದ್ದು, ವಿವಿಧ ವೇದಿಕೆಗಳಲ್ಲೂ ಪ್ರಸ್ತಾಪ ಮಾಡಿದ್ದಾರೆ. ಟ್ರಾಫಿಕ್ ಕೇಸು ವಿಚಾರಣೆ ಪ್ರತ್ಯೇಕ ಕೋರ್ಟ್ : ಇನ್ನು, ಟ್ರಾಫಿಕ್ ಕೇಸುಗಳ ವಿಚಾರಣೆಗೆ ಪ್ರತ್ಯೇಕ ಕೋರ್ಟ್ ಸ್ಥಾಪಿಸುವಂತೆ ನೀತಿ ಆಯೋಗ ಶಿಫಾರಸು ಮಾಡಿದೆ. ಈ ಕೋರ್ಟ್‌ಗಳಲ್ಲಿ ನ್ಯಾಯಾಧೀಶರು ದಂಡ ಕಟ್ಟುವಂತೆ ಹೇಳುವವರೆಗೂ, ದಂಡ ಕಟ್ಟ ಬೇಕೆಂದಿಲ್ಲ. ಶಿಫಾರಸನ್ನು ಕೇಂದ್ರ ಕಾನೂನು ಸಚಿ ವಾಲಯಕ್ಕೆ ಸಲ್ಲಿಸಲಾಗಿದ್ದು, ಈ ವಿಶೇಷ ಕೋರ್ಟ್ ಗಳಿಗೆ ಕಾನೂನು ಪದವೀಧರರನ್ನು ನ್ಯಾಯದಾನಕ್ಕಾಗಿ ನೇಮಕ ಮಾಡಿಕೊಳ್ಳಬೇಕು ಎಂದಿದೆ. ಇದರಿಂದ ಕೆಳ ಹಂತದ ಕೋರ್ಟ್‌ಗಳು ಇತರ ಪ್ರಕರಣಗಳಲ್ಲಿ ನ್ಯಾಯದಾನ ಮಾಡುವುದು ಸುಲಭವಾಗುತ್ತದೆ. ಕೇಸುಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಹೊಸ ಐಡಿಯಾವೊಂದನ್ನು ನೀತಿ ಆಯೋಗ ನೀಡಿದೆ.