Advertisement

ಕರಾವಳಿಯಲ್ಲಿ ಗಾಂಜಾ ವಿರುದ್ಧ ಪೊಲೀಸರ ಸಮರ- ದಿನದಿನಕ್ಕೂ ಹೆಚ್ಚಾಗುತ್ತಿದೆ ಬಂಧಿತರ ಸಂಖ್ಯೆ

12:22 AM Jul 28, 2023 | Team Udayavani |

ಮಂಗಳೂರು: ಕರಾವಳಿಯಲ್ಲಿ ಗಾಂಜಾ ಘಾಟು ಮಿತಿ ಮೀರಿದ್ದು ಮಾದಕ ವಸ್ತುಗಳ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಕಳೆದ ಕೆಲ ದಿನಗಳಿಂದ ದಕ್ಷಿಣ ಕನ್ನಡ- ಉಡುಪಿ ಉಭಯ ಜಿಲ್ಲೆಗಳಲ್ಲೂ ಪೊಲೀಸರು ಗಾಂಜಾ, ಎಂಡಿಯಂಎ ಮೊದಲಾದ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಡ್ರಗ್‌ ಪೆಡ್ಲರ್‌ಗಳನ್ನು ಹೆಡೆಮುರಿ ಕಟ್ಟುತ್ತಿದ್ದು, ದಿನದಿಂದ ದಿನಕ್ಕೆ ಬಂಧಿತರ ಸಂಖ್ಯೆ ಏರುತ್ತಲೇ ಸಾಗಿದೆ. ಕೇವಲ ಉಡುಪಿ ಜಿಲ್ಲೆಯೊಂದರಲ್ಲೇ ದಿನವೊಂದಕ್ಕೆ 10 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು ಪೊಲೀಸರು ಡ್ರಗ್ಸ್‌ ಜಾಲವನ್ನು ಬುಡ ಸಮೇತ ನಾಶಪಡಿಸಲು ಪಣ ತೊಟ್ಟಿದ್ದಾರೆ.

Advertisement

ದಕ್ಕೆಯಲ್ಲಿ ಗಾಂಜಾ ಸಹಿತ ಇಬ್ಬರ ವಶ

ಮಂಗಳೂರು: ಮೀನುಗಾರಿಕಾ ದಕ್ಕೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.

ಕಸಬಾ ಬೆಂಗ್ರೆಯ ನಿವಾಸಿಗಳಾದ ಅಬ್ದುಲ್‌ ರಹೀಂ ಯಾನೇ ಚಪ್ಪೆ ತನ್ನಿ ರಹೀಂ (43) ಮತ್ತು ಮೊಹಮ್ಮದ್‌ ಅಶ್ರಫ್‌ ಯಾನೆ ಕರಿಯ (47) ಬಂಧಿತ ಆರೋಪಿಗಳು.
ಬಂದರು ಉತ್ತರ ದಕ್ಕೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಬಳಿಯಲ್ಲಿ ಜು. 26ರಂದು ಅಬ್ದುಲ್‌ ರಹೀಂ ಮತ್ತು ಮೊಹಮ್ಮದ್‌ ಅಶ್ರಫ್‌ ಆ್ಯಕ್ಟಿವ್‌ ಹೋಂಡಾ ಸ್ಕೂಟರೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ 1.67ಲಕ್ಷ ರೂ. ಮೌಲ್ಯದ ಒಟ್ಟು 3.378 ಕೆ.ಜಿ. ಗಾಂಜಾ, ತೂಕಮಾಪನ, 4,940 ರೂ. ನಗದು ಹಾಗೂ 50 ಸಾವಿರ ರೂ. ಮೌಲ್ಯದ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಬಂದರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ನಗರ ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಆರ್‌. ಜೈನ್‌, ಡಿಸಿಪಿಗಳಾದ ಅನ್ಶುಕುಮಾರ್‌, ದಿನೇಶ್‌ ಕುಮಾರ್‌, ಎಸಿಪಿ ಮಹೇಶ್‌ ಮಾರ್ಗದರ್ಶನದಲ್ಲಿ ಉತ್ತರ ಪೊಲೀಸ್‌ ಠಾಣೆಯ ಉಪನಿರೀಕ್ಷಕ ವಿನಾಯಕ ತೋರಗಲ್‌, ಎಎಸ್‌ಐ ದಾಮೋದರ, ಎಚ್‌ಸಿಗಳಾದ ಮದನ್‌, ಸತೀಶ್‌, ಸಂಪತ್‌, ಸುನಿಲ್‌ ಮತ್ತು ಗುರು ಬಿ.ಟಿ. ಜತೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಕುಂದಾಪುರ: ಇಬ್ಬರ ವಶ
ಕುಂದಾಪುರ: ಮೊಹಮ್ಮದ್‌ ಜುನೇದ್‌ (28), ರಿಜ್ವಾನ್‌ (25) ಅವರನ್ನು ಠಾಣೆಗೆ ಕರೆಯಿಸಿದ ಪ್ರೊಬೆಷನರಿ ಡಿ.ವೈ.ಎಸ್‌.ಪಿ. ರವಿ ಹಾಗೂ ಪಿಎಸ್‌ಐ ವಿನಯ ಎಂ. ಕೊರ್ಲಹಳ್ಳಿ ಅವರು ವಿಚಾರಣೆ ನಡೆಸುವಾಗ ಇಬ್ಬರೂ ಅಮಲಿನಲ್ಲಿರುವುದು ಕಂಡುಬಂದಿದೆ. ವೈದ್ಯಕೀಯ ತಪಾಸಣೆಯಲ್ಲಿ ಅವರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಪ್ರಕರಣ ದಾಖಲಾಗಿದೆ.

ಮಣಿಪಾಲ: ಮೂವರ ವಶ
ಮಣಿಪಾಲ: ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮಣಿಪಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈಶ್ವರನಗರದ ಸಾರ್ವಜನಿಕ ಸ್ಥಳದ ಬಳಿ ಗ್ರಹಾಂ ಸ್ಯಾಮ್‌ ಜಾಕೋಬ್‌ (22), ಸುನೀಲ್‌ ಸುಕೇಶ್‌ (22), ಸೂರಜ್‌ ವಿನುರಾಜ್‌ (23) ಗಾಂಜಾ ಸೇವಿಸಿದ್ದು, ಫಾರೆನ್ಸಿಕ್‌ ವರದಿಯಲ್ಲಿ ಸೇವನೆ ದೃಢಪಟ್ಟಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪೊಲೀಸರ ಕಂಡು ಡ್ರಗ್ಸ್‌ ತುಂಬಿದ್ದ ಬ್ಯಾಗ್‌ ಬಿಟ್ಟು ಪರಾರಿ

Advertisement

Udayavani is now on Telegram. Click here to join our channel and stay updated with the latest news.

Next